Advertisement

Jawan; ಓಟಿಟಿಯಲ್ಲಿ ಹವಾ ಮಾಡುತ್ತಿದೆ ಶಾರುಖ್ ನಟನೆಯ ‘ಜವಾನ್’

11:06 AM Nov 06, 2023 | Team Udayavani |

ಸಿನಿಮಾವೊಂದು ಚಿತ್ರಮಂದಿರದಲ್ಲಿ ಹಿಟ್‌ ಆಗಿ ಅದು ಓಟಿಟಿಗೆ ಬಂದಾಗ ಆ ಚಿತ್ರದ ಬೇಡಿಕೆಯೇ ಬೇರೆ ಇರುತ್ತದೆ. ಅದು “ಬಿಝಿನೆಸ್‌’ನಿಂದ ಹಿಡಿದು ಪ್ರೇಕ್ಷಕ ನೋಡುವ ದೃಷ್ಟಿವರೆಗೆ… ಈಗ ಅದೇ ತರಹದ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಅದು ಶಾರುಖ್‌ ಖಾನ್‌ ನಟನೆಯ “ಜವಾನ್‌’.

Advertisement

ಹೌದು, “ಪಠಾಣ್‌’ ಸಿನಿಮಾದ ಗೆಲುವಿನ ಬಳಿಕ ತೆರೆಗೆ ಬಂದ ಚಿತ್ರ “ಜವಾನ್‌’. ಭರ್ಜರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಈ ಚಿತ್ರ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿತ್ತು. ಈಗ “ಜವಾನ್‌’ ಓಟಿಟಿಯ ನೆಟ್  ಫ್ಲಿಕ್ಸ್ ಗೆ ಬಂದಿದ್ದು, ಅಲ್ಲೂ ಮೆಚ್ಚುಗ ವ್ಯಕ್ತವಾಗುತ್ತಿದೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದ ಈ ಚಿತ್ರ ಶಾರುಖ್‌ ಶೈಲಿಯನ್ನು ಬಿಟ್ಟು ಪಕ್ಕಾ ದಕ್ಷಿಣ ಭಾರತದ ಸಿನಿಮಾಗಳಂತೆ ಮೂಡಿಬಂದಿದೆ. ಸದ್ಯ ಓಟಿಟಿಯಲ್ಲಿ ಮೆಚ್ಚುಗೆ ಪಡೆಯುತ್ತಿದೆ.

ಇದರ ಜೊತೆಗೆತೆಲುಗು ನಟ ರಾಮ್‌ ಪೋತಿನೇನಿ ನಟನೆಯ “ಸ್ಕಂದ’ ಚಿತ್ರ ಕೂಡಾ ಓಟಿಟಿಗೆ ಲಗ್ಗೆ ಇಟ್ಟಿದೆ. ಇನ್ನು, “ಆರ್‌ ಯೂ ಓಕೆ ಬೇಬಿ’ ಎಂಬ ಸಿನಿಮಾ ಕೂಡಾ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next