ನವದೆಹಲಿ: ನವದೆಹಲಿಯ ಶಹೀನ್‌ಭಾಗ್ ನಲ್ಲಿ ಅಕ್ರಮ ಕಟ್ಟಡಗಳ ತೆರವು ವಿಚಾರಕ್ಕೆ ಸಂಬಂಧಿಸಿ ನಾವು ಮಧ್ಯಪ್ರವೇಶಿಸುವುದಿಲ್ಲ. ನಿಗದಿತ ರಾಜಕೀಯ ಪಕ್ಷವೊಂದು ಅರ್ಜಿ ಸಲ್ಲಿಸಿದೆ ಎಂಬ ಕಾರಣಕ್ಕಾಗಿ ನಾವು ಹಸ್ತಕ್ಷೇಪ ಮಾಡಕೂಡದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಕುಣಿಗಲ್ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು: 6 ಮಂದಿ ಗಂಭೀರ
ಈ ಮೂಲಕ ಸಿಪಿಎಂ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಪೀಠ ನಿರಾಕರಿಸಿದೆ. “ಯಾವ ಕಾರಣಕ್ಕೆ ಸಿಪಿಎಂ ಅರ್ಜಿ ಸಲ್ಲಿಸಬೇಕು? ಯಾವ ರೀತಿಯಾಗಿ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ. ನಾವು ರಾಜಕೀಯ ಪಕ್ಷವೊಂದರ ಪರವಾಗಿ ವರ್ತಿಸಲು ಸಾಧ್ಯವಿಲ್ಲ ಮತ್ತು ಅದಕ್ಕೆ ಇದು ವೇದಿಕೆಯಲ್ಲ. ಈ ವಿಚಾರದಲ್ಲಿ ನಿಮಗೇನಾದರೂ ಅರಿಕೆ ಇದ್ದರೆ ಹೈಕೋರ್ಟ್ ಮೊರೆ ಹೋಗಿ’ ಎಂದು ನ್ಯಾಯಪೀಠ ಸ್ಪಷ್ಟವಾಗಿ ತಿಳಿಸಿತು.
ಆದರೆ, ಬಿಜೆಪಿ ಆಡಳಿತ ಇರುವ ಉತ್ತರ ದೆಹಲಿ ಮಹಾನಗರ ಪಾಲಿಕೆ ಅಕ್ರಮ ಕಟ್ಟಡಗಳನ್ನು ಕೆಡವಿ ಹಾಕುವ ಮುನ್ನ ಸಂಬಂಧಿತರಿಗೆ ಏಕೆ ನೋಟಿಸ್ ನೀಡಲಿಲ್ಲ ಎಂದೂ ನ್ಯಾಯಪೀಠ ಪ್ರಶ್ನಿಸಿದೆ.
ಬುಲ್ಡೋಜರ್ ಎಂಟ್ರಿ: ಸೋಮವಾರ ಶಹೀನ್ ಭಾಗ್ ಗೆ ಬುಲ್ಡೋಜರ್ ಎಂಟ್ರಿಯಾಗಿದೆ. ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆಂದು ಬುಲ್ಡೋಜರ್ ಬರುತ್ತಿದ್ದಂತೆ, ಸ್ಥಳೀಯರು ಪ್ರತಿಭಟನೆ ಆರಂಭಿಸಿದ್ದಾರೆ. ಆಪ್ ಶಾಸಕ ಅಮಾನತುಲ್ಲಾ ಖಾನ್ ಮಧ್ಯಪ್ರವೇಶಿಸಿ, “ಅಕ್ರಮ ಕಟ್ಟಡಗಳನ್ನೆಲ್ಲ ತೆರವುಗೊಳಿ ಸಿಯಾಗಿದೆ. ಬಾಕಿಯಿರುವುದನ್ನೂ ತೆರವು ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿದ ಬಳಿಕ ಬುಲ್ಡೋಜರ್‌ಗಳು ಹಿಂದಿರುಗಿವೆ.