Advertisement

ಕುಡಿವ ನೀರು ಕಲ್ಪಿಸಲು ಆಗ್ರಹ

03:25 PM Sep 12, 2019 | Naveen |

ಶಹಾಪುರ: ನಗರದ ವಾರ್ಡ್‌ ಸಂಖ್ಯೆ 16ರಲ್ಲಿ ಕುಡಿಯಲು ನೀರು ದೊರೆಯದ ಕಾರಣ ಬಡಾವಣೆ ಜನರು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಕಳೆದ ಆರು ತಿಂಗಳಿಂದ ವಾರ್ಡ್‌ ಸಂಖ್ಯೆ 16ರ ನಿವಾಸಿಗಳು ಸಮಪರ್ಕ ಕುಡಿಯಲು ನೀರು ಸಿಗದೆ ಪರದಾಡುವಂತಾಗಿದೆ. ಸಾಕಷ್ಟು ಬಾರಿ ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಡ ನೀರಿಗಾಗಿ ಅಕ್ಕಪಕ್ಕದ ಬಡಾವಣೆಗಳಿಗೆ ತೆರಳಬೇಕು. ಅಲ್ಲಿಯೂ ಸಹ ಸಮರ್ಪಕ ನೀರು ದೊರೆಯದ ಕಾರಣ ಪರಿತಪಿಸುವಂತಾಗಿದೆ. ಬಡಾವಣೆ ಬೋರವೆಲ್ಗಳು ಸ್ಥಗಿತಗೊಂಡಿವೆ. ಕೆಲವೊಂದು ದುರಸ್ತಿ ಮಾಡಬೇಕಿದೆ. ನಳದಲ್ಲಿ ಹದಿನೈದು ದಿವಸಕ್ಕೊಮ್ಮೆ ನೀರು ಬಿಡಲಾಗುತ್ತದೆ. ಇವಾಗ ಅದು ಸ್ಥಗಿತಗೊಂಡಿದೆ. ಹೀಗಾಗಿ ನಿತ್ಯ ನೀರಿಗಾಗಿ ಜನ ಒದ್ದಾಡುವಂತಾಗಿದೆ ಎಂದು ದೂರಿದರು.

ಅಲ್ಲದೆ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಚರಂಡಿ ನೀರು ರಸ್ತೆ ಆವರಿಸಿಕೊಂಡು ಗಬ್ಬು ವಾಸನೆ ಬೀರುತ್ತಿವೆ. ಚರಂಡಿ ತ್ಯಾಜ್ಯ ಸಹ ವಿಲೇವಾರಿ ಆಗುತ್ತಿಲ್ಲ. ವಾರ್ಡ್‌ ಸಂಖ್ಯೆ 16 ಮೀಸಲಾತಿ ವಾರ್ಡ್‌ ಆಗಿದ್ದು, ಮೀಸಲಾತಿ ಬಡಾವಣೆ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳಿವೆ. ಆದಾಗ್ಯು ಅಧಿಕಾರಿ ಜನಪ್ರತಿನಿಧಿಗಳ ಅಲಕ್ಷದಿಂದ ಜನರು ಮೂಲಭೂತ ಸೌಕರ್ಯದಿಂದ ವಂಚಿಗೊಂಡಿದ್ದಾರೆ. ಇದಕ್ಕೆಲ್ಲ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದರು.

ಕಾರಣ ಕೂಡಲೇ ವಾರ್ಡ್‌ ಸಂಖ್ಯೆ 16ರ ಬಡಾವಣೆಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಬೇಕು. ನಂತರ ಕೊಳವೆ ಬಾವಿ ಕೊರೆಸಬೇಕು. ಅಲ್ಲದೆ ವಿವಿಧ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿ ಪೌರಾಯುಕ್ತ ಬಸವರಾಜ ಶಿವಪೂಜೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಬಡಾವಣೆ ಹಿರಿಯ ವಿಜಯಕುಮಾರ ಎದುರಮನಿ, ಈರಣ್ಣ ಚಟ್ನಳ್ಳಿ, ಮರೆಪ್ಪ ರತ್ತಾಳ, ಈರಣ್ಣ ಸಾಯಿಲ್, ಅಮಲಪ್ಪ ದಿಗ್ಗಿ, ಶರಣಪ್ಪ ನರಬೋಳಿ, ಅಮಲಪ್ಪ ಪೂಜಾರಿ, ದೇವೀಂದ್ರಪ್ಪ ಕನ್ಯಾಕೋಳೂರ, ಅಪ್ಪಣ್ಣ ಪೂಜಾರಿ, ಜೆಟ್ಟೆಪ್ಪ ಕೊಡಮನಳ್ಳಿ, ರೇಖಾ ಎದುರಮನಿ, ರೂಪಾ, ಈರಮ್ಮ, ಭಾಗಿರತಿ, ಮರೆಮ್ಮ, ಇಂದ್ರಮ್ಮ, ಮಲ್ಲಮ್ಮ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next