Advertisement

ಸಮರ್ಪಕ ಕರ್ತವ್ಯ ನಿರ್ವಹಣೆಗೆ ಸೂಚನೆ

11:33 AM Feb 20, 2020 | Naveen |

ಶಹಾಪುರ: ಸಾರ್ವಜನಿಕರ ಕೆಲಸ ಸಮರ್ಪಕವಾಗಿ ಮಾಡಿಕೊಡುವುದು ಅಧಿಕಾರಿ ಮತ್ತು ಅಲ್ಲಿನ ಸಿಬ್ಬಂದಿಗಳ ಕರ್ತವ್ಯ. ಅದು ಬಿಟ್ಟು ಅವರನ್ನು ಅಲೆದಾಡಿಸುವುದು, ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ. ಈ ಬಗ್ಗೆ ಸಾಕಷ್ಟು ದೂರು ಬಂದಿದ್ದು, ಮುಂಬರುವ ದಿನಗಳಲ್ಲಿ ಅ ಧಿಕಾರಿಗಳು ಅದನ್ನೆ ಮುಂದುವರಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್‌ಪಿ ವಿ.ಬಿ. ಚಿಕ್ಕಮಠ ಎಚ್ಚರಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಮಂಗಳವಾರ ಸಾರ್ವತ್ರಿಕ ದೂರು ಸ್ವೀಕಾರ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಯೋಜನೆಗಳು ಜಾರಿಯಾಗುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ನಿರ್ಲಕ್ಷ್ಯ ಕಂಡು ಬರುತ್ತಿದೆ. ಯಾವುದೇ ಇಲಾಖೆಯಾಗಲಿ ತಮ್ಮ ಕೆಲಸವನ್ನು ಸಮರ್ಪಕವಾಗಿ ನಿಭಾಯಿಸಬೇಕು. ಯಾವುದೇ ಯೋಜನೆಯ ಸಫಲತೆ ಸಾಕಾರವಾಗುವವರೆಗೂ ಅದನ್ನು ನಿಭಾಯಿಸುವ ನಿರ್ವಹಿಸುವ ಕರ್ತವ್ಯ ಅಧಿಕಾರಿಗಳದ್ದಾಗಿದೆ ಎಂದು ತಿಳಿಸಿದರು.

ಕಳೆದ ಐದಾರು ವರ್ಷಗಳಿಂದ ಸಾಕಷ್ಟು ಕಾಮಗಾರಿ ನನೆಗುದಿಗೆ ಬಿದ್ದಿವೆ. ಸಾರ್ವಜನಿಕರಿಂದ ನೂರಾರು ದೂರುಗಳು ಬಂದಿದ್ದು, ಅಸಮರ್ಪಕ ಅವ್ಯವಸ್ಥೆಯಿಂದ ಕಾಮಗಾರಿಗಳು ಅರ್ಧ ಕೆಲಸಗಳಾಗಿ ಸ್ಥಗಿತಗೊಂಡಿವೆ. ಅವುಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದು ಸೂಚಿಸಿದರು.

ಕಂದಾಯ ಇಲಾಖೆಯಲ್ಲೂ ಸಭೆಗಳು ಜಾಸ್ತಿ ನಡೆಯುತ್ತವೆ. ಆದರೆ ಕೆಲಸಗಳು ಆಗಲ್ಲ. ಬರಿ ಸಭೆ ನಡೆಸಿದರೂ ಕೆಲಸಗಳನ್ನು ನಿರ್ವಹಿಸುವುದು ಯಾರು? ಯಾವ ಕೆಲಸ ಎಲ್ಲಿಗೆ ಬಂದು ನಿಂತಿದೆ, ಯಾವ ಹಂತ ತಲುಪಿದೆ ಎಂಬುದನ್ನು ಯಾವ ಅಧಿಕಾರಿಗಳಿಗೂ ಗೊತ್ತಿಲ್ಲ. ಅಲ್ಲದೇ ಸಕಾಲದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಲಾಗಿದೆ. ನಿಗದಿತ ಸಮಯದಲ್ಲಿ ಸಕಾಲದ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿಲ್ಲ ಎಂಬ ಅಪವಾದಗಳಿವೆ. ಕೇಳಿದರೆ ಅಧಿಕಾರಿಗಳು ಸಕಾಲದಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಯಾವುದೋ ಒಂದು ಕಾರಣ ನೀಡಿ ರದ್ದುಪಡಿಸಲಾಗುತ್ತದೆ. ಯಾವುದೇ ಅರ್ಜಿಗೆ ಮರಳಿ ಉತ್ತರಿಸಬೇಕಿದ್ದಲ್ಲಿ ಅದು ಕಾನೂನಾತ್ಮಕವಾಗಿರಬೇಕು ಎಂದರು.

ಅದೇ ರೀತಿ ಜೆಸ್ಕಾಂ ಮತ್ತು ಗಂಗಾ ಕಲ್ಯಾಣ ಯೋಜನೆ ಅಧಿಕಾರಿಗಳ ಕಾರ್ಯ ವೈಖರಿ ವಿಚಾರಿಸಿ, ಇಲಾಖಾವಾರು ಸಂಪರ್ಕ ಸಾಧಿ ಸಿ ಕೊಳವೆ ಬಾವಿ ಕೊರೆಯುವ ಸ್ಥಳಕ್ಕೆ ಭೇಟಿ ನೀಡಿ ಸಮರ್ಪಕವಾಗಿ ವಿಚಾರಿಸಿ ಜೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಿ ಕೆಲಸ ಪೂರ್ಣವಾಗಿಸುವುದು ಯೋಜನೆಯ ಅಧಿಕಾರಿಗಳ ಕೆಲಸ ಎಂದು ಎಚ್ಚರಿಸಿದರು.

Advertisement

ಇದೇ ಸಂದರ್ಭದಲ್ಲಿ ಹಾರಣಗೇರಾ ಕುಡಿಯುವ ನೀರಿನ ಕೊರತೆ ಮತ್ತು ಇತರೆ ದೂರುಗಳನ್ನು ಸ್ವೀಕರಿಸಿ ಸಂಬಂಧಿ ಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅವುಗಳನ್ನು ಪರಿಹಾರಕ್ಕೆ ಸೂಚಿಸಿದರು. ಅಲ್ಲದೇ ನಿತ್ಯ ಪತ್ರಿಕೆಯಲ್ಲಿ ಸಾಕಷ್ಟು ಸಮಸ್ಯೆಗಳ ಕುರಿತು ಬರೆಯಲಾಗುತ್ತಿದೆ. ಅವುಗಳತ್ತ ಗಮನ ಹರಿಸಬೇಕು. ಸ್ಥಳ ಪರಿಶೀಲನೆ ಮಾಡುವ ಮೂಲಕ ತಕ್ಷಣ ಪರಿಹಾರಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ಲೋಕಾಯುಕ್ತ ಪಿಐ ಗುರುರಾಜ, ತಹಶೀಲ್ದಾರ್‌ ಜಗನ್ನಾಥರಡ್ಡಿ, ತಾಪಂ ಇಒ ಜಗನ್ನಾಥ ಮೂರ್ತಿ, ತಾಲೂಕು ಆರೋಗ್ಯ ಅಧಿ ಕಾರಿ ಡಾ| ರಮೇಶ ಗುತ್ತೇದಾರ ಉಪಸ್ಥಿತರಿದ್ದರು. ಸಭೆಯಲ್ಲಿ ಜೆಸ್ಕಾಂ ಎಇಇ ಶಾಂತಪ್ಪ ಪೂಜಾರಿ, ಗೃಹ ಮಂಡಳಿ ಎಇಇ ಶರಣಗೌಡ ಪಾಟೀಲ, ಸಿಡಿಪಿಒ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next