ಮುಂಬಯಿ: ಕಲ್ಯಾಣ್‌ನ ಶಾಹಡ್ ಬಿರ್ಲಾಗೇಟ್ ಶ್ರೀ ಮೂಕಾಂಬಿಕಾ ದೇವಸ್ಥಾನದ 57ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆಯ ಎ. 20ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ತುಳು ಸಂಘ ಬರೋಡಾದ ಅಧ್ಯಕ್ಷ ಶಶಿಧರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯರಾದ ರಮೇಶ್ ಶೆಟ್ಟಿ, ದಯಾನಂದ ಹೆಗ್ಡೆ, ವಿಟuಲ ಶೆಟ್ಟಿ, ಪದ್ಮನಾಭ
ಶೆಟ್ಟಿ, ಕಮಲಾಕ್ಷ ರಾವ್, ತಿಮ್ಮಪ್ಪ ಪಕ್ಕಳ
ಅವರನ್ನು ವಿಶೇಷವಾಗಿ ಸಮ್ಮಾನಿಸಲಾಯಿತು. ಉತ್ಸವದ ಯಶಸ್ಸಿಗೆ ಸಹಕರಿಸಿದ ದಾನಿಗಳಾದ ಅನಿಲ್ ಶೆಟ್ಟಿ ದಂಪತಿ, ರಾಜೇಶ್ ಶೆಟ್ಟಿ, ಪವನ್ ಶೆಟ್ಟಿ, ಲಕ್ಷ್ಮೀ ಗೋಪಾಲ್ ಶೆಟ್ಟಿ, ಜಗದೀಶ್ ಬೆಳಂಜೆ, ಸುಭೋದ್ ಭಂಡಾರಿ, ಸ್ವಾತಿ, ವಿಶಾಲ್ ಸಾಂತಾ, ರಮೇಶ್ ಶೆಟ್ಟಿ ದಂಪತಿ ಇವರನ್ನು ಸತ್ಕರಿಸಲಾಯಿತು. ಕಾರ್ಯಾಧ್ಯಕ್ಷ ಚಂದ್ರಕಾಂತ್ ಶೆಟ್ಟಿ ಅವರ ಪರವಾಗಿ ಮಾತೋಶ್ರೀಯವರಾದ ಶಾಂಭವಿ ಶಿವರಾಮ ಶೆಟ್ಟಿ, ಅಧ್ಯಕ್ಷ ಕರುಣಾಕರ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಗೌರವಿಸಲಾಯಿತು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಸಮಾಜ ಸೇವಕ, ಶಾರದಾ ಭಾಸ್ಕರ ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಗುರುದೇವ್ ಭಾಸ್ಕರ್ ಶೆಟ್ಟಿ, ಶಿವಸೇನಾ ಥಾಣೆ ಜಿಲ್ಲಾ ಪ್ರಮುಖರಾದ ಗೋಪಾಲ್ ಲಾಂಡೆY, ಶಿವಸೇನಾ ಪಕ್ಷದ ಪ್ರಮುಖ ದಿಲೀಪ್ ಗಾಯಕ್ವಾಡ್, ಮಂಡಳಿಯ ಅಧ್ಯಕ್ಷ ಕರುಣಾಕರ ಶೆಟ್ಟಿ, ದಿಲೀಪ್ ಗಾಯಕ್ವಾಡ್, ಮೋರೆ, ಚಂದ್ರಕಾಂತ್ ಶೆಟ್ಟಿ, ರಾಜೇಶ್ ಶೆಟ್ಟಿ, ಜಗದೀಶ್ ಬೆಳಂಜೆ, ಯುವರಾಜ್ ಪೂಜಾರಿ, ಪ್ರೇಮ್‌ಕುಮಾರ್ ರೈ, ಸದಾನಂದ ಸಾಲ್ಯಾನ್, ಮನ್ಮಥ ಶೆಟ್ಟಿ, ದೀಪಕ್ ಬಂಗೇರ, ಅನಿಲ್ ಶೆಟ್ಟಿ, ಅರುಣ್ ಜೋಶಿ, ಪ್ರವೀಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಶ್ಮೀ ಪೂಜಾರಿ, ವೇದಾ ಶೆಟ್ಟಿಗಾರ್, ಪುಷ್ಪಾ ಶೆಟ್ಟಿ ಅವರು ಪ್ರಾರ್ಥನೆಗೈದರು. ರಾಜೇಶ್ ಶೆಟ್ಟಿ ಸ್ವಾಗತಿಸಿದರು. ಅನಿಲ್ ಶೆಟ್ಟಿ ಕೇಂಜ ಅತಿಥಿಗಳನ್ನು ಪರಿಚಯಿಸಿದರು. ಸಚಿನ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಜಗದೀಶ್ ಶೆಟ್ಟಿ ಬೆಳಂಜೆ ವಂದಿಸಿದರು.