Advertisement
ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಆಲ್ ಇಂಡಿಯಾ ಡೆಮೋಕ್ರೆಟಿಕ್ ಸ್ಟೂಡೆಂಟ್ಸ್ಆರ್ಗನೈಸೇಷನ್ ವತಿಯಿಂದ ಆಯೋಜಿಸಲಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್‌ರ 123ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೇತಾಜಿ ಐಸಿಎಸ್‌ನಲ್ಲಿ ಏಷ್ಯದ ನಾಲ್ಕನೆ ರ್‍ಯಾಂಕ್‌ನಲ್ಲಿ ಪಾಸಾಗಿದರು. ಆದರೆ ದೇಶದ ವಿಮೋಚನೆಗಾಗಿ ಆ ಸರ್ಟಿಫಿಕೆಟ್ ಹರಿದು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು. ಮುಂದೆ ಐ.ಎನ್.ಎ ಆರ್ಮಿ ಕಟ್ಟಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅವರ ಧರ್ಮನೀರಪೇಕ್ಷ, ಪ್ರಜಾತಾಂತ್ರಿಕ ವಿಚಾರಗಳನ್ನು ಎತ್ತಿಹಿಡಿದರು. ಆದರೆ ಇವತ್ತಿನ ಸರಕಾರಗಳು ಅವರ ವಿಚಾರಗಳನ್ನು ಮರೆಮಾಚುತ್ತಿವೆ. ನೇತಾಜಿ ನೈಜ ಇತಿಹಾಸ ಪಠ್ಯದಲ್ಲಿ ಸೇರಿಸಿ ಎಂದು ಆಗ್ರಹಿಸಿದರು.
23ನೇ ವಯಸ್ಸಿನಲ್ಲಿಯೇ ಐಸಿಎಸ್ ಪರೀಕ್ಷೆ ಪಾಸು ಮಾಡಿದರು. ಇವರಿಗೆ ದೇಶದಲ್ಲಿಯೇ ಉನ್ನತವಾದ ಅಧಿಕಾರವುಳ್ಳ ನೌಕರಿ, ಜೊತೆಗೆ ಹಲವಾರು ಸರಕಾರಿ ಸೌಲಭ್ಯಗಳು ಮತ್ತು ವೈಭಯುತವಾದ ಜೀವನ ಸಿಗುತ್ತಿತ್ತು. ಆದರೆ ಅವರಿಗೆ ಈ ಎಲ್ಲ ವೈಭೋಗಗಳು ಭಾರತದ ಸ್ವಾತಂತ್ರ್ಯದ ಮುಂದೆ ತೃಣ ಸಮಾನವಾಗಿ ಕಂಡವು ಎಂದರು. ಎಐಡಿಎಸ್‌ಒ ಅಧ್ಯಕ್ಷ ತುಳಜಾರಾಮ ಎನ್. ಕೆ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಮಶೋದ್ದಿನ್ ಪಟೇಲ್, ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಯೇಮನಾಥ ರಾಠೊಡ, ಭಾರತ ಉಳಿಸಿ ಸಮಿತಿಯ ಮಸ್ತಾನ ಪಟೇಲ್, ರಮೇಶ ದೇವಕರ, ರಾಘವೇಂದ್ರ ಜಿ.ಮಾನೆ, ಕಿರಣ, ತೇಜಸ್, ಪ್ರಕಾಶ, ಸಾಕ್ಷಿ, ಅಶ್ವಿನಿ, ಪಲ್ಲವಿ, ಸಿದ್ಧು ಚೌಧರಿ, ತಿಮ್ಮಯ್ಯ ಮಾನೆ, ನೀಲಕಂಠ ಹುಲಿ, ಶ್ರೀನಿವಾಸ, ರೇಣುಕಾ, ಅರ್ಪಿತಾ, ಪ್ರವೀಣ, ಓಂಕಾರ ಮತ್ತಿತರರು ಇದ್ದರು. ಬೆಳಗ್ಗೆ ವಿವಿಧ ಶಾಲೆಯ ವಿದ್ಯಾರ್ಥಿಗಲಿಂದ ನೇತಾಜಿ ಸುಭಾಶ್ಚಂದ್ರ ಬೋಸ್ ಭಾವಚಿತ್ರದ ಮೂಲಕ ನಗರದ ಮುಖ್ಯ ಬೀದಿಗಳಲ್ಲಿ ಪ್ರಭಾತ ಪೇರಿ ನಡೆಸಿದರು.