Advertisement

ನಗರಸಭೆಯಿಂದ ಕ್ರಿಮಿನಾಶಕ ಔಷಧ ಸಿಂಪಡಣೆ

04:59 PM Apr 10, 2020 | Naveen |

ಶಹಾಬಾದ: ಕೊರೊನಾ ವೈರಸ್‌ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯಿಂದ ನಗರ ವ್ಯಾಪ್ತಿಯಲ್ಲಿ ಕ್ರಿಮಿನಾಶಕ ಔಷಧ ಮತ್ತು ಸ್ಯಾನಿಟೈಸರ್‌ ಸಿಂಪಡಣೆ ಕಾರ್ಯ ನಡೆದಿದೆ. ನಗರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಕಂಡು ಬರುವ ಕಸವನ್ನು ವಿಲೇವಾರಿ ಮಾಡಿ, ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಲಾಗುತ್ತಿದೆ. ನಗರಸಭೆಯ ಪ್ರತಿಯೊಂದು ವಾರ್ಡ್‌ ಸದಸ್ಯರ ಜತೆಗೂಡಿ, ಅವರ ಸಲಹೆ ಮೇರೆಗೆ ಚರಂಡಿ ಸ್ವಚ್ಛತೆ ಹಾಗೂ ಔಷಧಿ ಸಿಂಪಡಣೆ ಕಾರ್ಯ ಮಾಡಲಾಗುತ್ತಿದೆ.

Advertisement

ಟ್ರ್ಯಾಕ್ಟರ್‌ ಎರಡು ಬದಿಯಲ್ಲಿ ಸುಮಾರು ನಾಲ್ಕು ನಾಜಲ್‌ಗ‌ಳನ್ನು ಅಳವಡಿಸಿ ಸ್ಪ್ರೆà ಮಾಡಲಾಗುತ್ತಿದೆ. ಇದಕ್ಕಾಗಿ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಮನವಿ: ನಗರಸಭೆಯಿಂದ ಸ್ವಚ್ಛತೆ ಹಾಗೂ ಕ್ರಿಮಿನಾಶಕ ಸಿಂಪಡಣೆ ಕಾರ್ಯ ಭರದಿಂದ ನಡೆಯುತ್ತಿದೆ. ಕೊರೊನಾ ವೈರಸ್‌ ತಡೆಗಟ್ಟಲು ಇದೊಂದೇ ಪರಿಹಾರವಲ್ಲ. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅನಾವಶ್ಯವಾಗಿ ಹೊರಗೆ ಬರದೇ ಮನೆಯಲ್ಲಿರಬೇಕು ಎಂದು ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next