Advertisement

ಪೈಪ್‌ಲೈನ್‌ ಕಾಮಗಾರಿಗೆ ಚಾಲನೆ

11:50 AM Jun 27, 2020 | Naveen |

ಶ‌ಹಾಬಾದ: ಇಲ್ಲಿನ ಬಸವೇಶ್ವರ ನಗರ ಹಾಗೂ ಮಿಲತ್‌ ನಗರ ಪ್ರದೇಶಗಳಲ್ಲಿ ಎಡಿಬಿ ಯೋಜನೆಯಲ್ಲಿ ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

Advertisement

ಬಸವೇಶ್ವರ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಮುಖ್ಯ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದ ವರ್ತುಲ ರಸ್ತೆಯ ಹೊಸ ಬಡಾವಣೆಯಲ್ಲಿ ಸುಮಾರು 14 ಲಕ್ಷ ರೂ. ವೆಚ್ಚದಲ್ಲಿ 500 ಮೀಟರ್‌ ಉದ್ದದ ಪೈಪ್‌ಲೈನ್‌ ಅಳವಡಿಕೆ ಮಾಡಲಾಗುತ್ತಿದೆ. ರಸ್ತೆಯ ಎರಡು ಬದಿಯ ಹೊಸ ಬಡಾವಣೆಗೆ ನೀರು ಸರಬರಾಜು ಮಾಡಲು ತಲಾ 600 ಮೀಟರ್‌ ಪೈಪ್‌ಲೈನ್‌ ಅಳವಡಿಕೆಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಅತ್ಯಂತ ಕಡಿಮೆ ದರದಲ್ಲಿ ಟೆಂಡರ್‌ ಹಾಕಿದ್ದಾರೆ.

ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ. ಗುಣಮಟ್ಟದ ಕಾಮಗಾರಿ ಮಾಡಲೇಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು. ಪೌರಾಯುಕ್ತ ಕೆ. ಗುರುಲಿಂಗಪ್ಪ, ಎಡಿಬಿ ಕಿರಿಯ ಅಭಿಯಂತರು, ನಗರಸಭೆ ಎಇಇ ಸರ್ವೋತ್ತಮ, ರವಿ ರಾಠೊಡ, ಅಣವೀರ ಇಂಗಿನಶೆಟ್ಟಿ, ಚಂದ್ರಕಾಂತ ಗೊಬ್ಬುರಕರ್‌, ಕನಕಪ್ಪ ದಂಡಗುಲಕರ್‌, ನಾಗರಾಜ ಮೇಲಗಿರಿ, ನಿಂಗಣ್ಣ ಹುಳಗೋಳ, ಪಾರ್ವತಿ ಪವಾರ, ಬಸವರಾಜ ಬಿರಾದಾರ, ವಿಜಯಾನಂದ ಮಾಣಿಕ್‌, ಸದಾನಂದ ಕುಂಬಾರ, ಸಂಜಯ ಸೂಡಿ, ದತ್ತಾ ಫಂಡ್‌, ಸಿದ್ರಾಮ ಕುಸಾಳೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next