Advertisement

ಮಾಸ್ಕ್ ಧರಿಸದಿದ್ದರೆ ಆಪತ್ತು: ಸುರೇಶ ವರ್ಮಾ

05:38 PM Jul 08, 2020 | Naveen |

ಶಹಾಬಾದ: ವಿಶ್ವಜ್ಯೋತಿ ಪ್ರತಿಷ್ಠಾನದ 12ನೇ ವರ್ಷಾಚರಣೆ ನಿಮಿತ್ತ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಸಾರಥ್ಯದಲ್ಲಿ ಹಮ್ಮಿಕೊಂಡ ಸಾಮಾಜಿಕ ಜಾಗೃತಿ ಕಾರ್ಯಕ್ರಮಕ್ಕೆ ಮುಗುಳನಾಗಾವಿಯ ಸಿದ್ಧಲಿಂಗ ಶಿವಾಚಾರ್ಯರು ಹಾಗೂ ತಹಶೀಲ್ದಾರ್‌ ಸುರೇಶ ವರ್ಮಾ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಸಿದ್ಧಲಿಂಗ ಶಿವಾಚಾರ್ಯರು ಹಾಗೂ ತಹಶೀಲ್ದಾರ್‌ ಸುರೇಶ ವರ್ಮಾ, ಕೋವಿಡ್ ವೈರಸ್‌ ಬಗ್ಗೆ ಎಲ್ಲ ಜನರಿಗೂ ತಿಳಿವಳಿಕೆಯಿದ್ದರೂ ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ಕೋವಿಡ್ ಆಹ್ವಾನಕ್ಕೆ ದಾರಿಯಾಗುತ್ತದೆ. ಆರೋಗ್ಯ ಭಾಗ್ಯಕ್ಕಿಂತ ದೊಡ್ಡ ಭಾಗ್ಯ ಇನ್ನೊಂದಿಲ್ಲ. ಆರೋಗ್ಯದಿಂದ ಇದ್ದಾಗ ಮಾತ್ರ ಮತ್ತೊಂದು ಮಾಡಲು ಸಾಧ್ಯ ಎಂಬ ಅರಿವು ಜನರು ಮನದಟ್ಟು ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ನೇತೃತ್ವದ ಕ್ರಿಯಾಶೀಲ ಗೆಳೆಯರ ಬಳಗ ಕೊರೊನಾ ವೈರಸ್‌ನ ಬಗ್ಗೆ ವಿಶಿಷ್ಟ ರೀತಿಯಲ್ಲಿ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಪ್ರೊ.ಯಶ್ವಂತರಾಯ ಅಷ್ಟಗಿ ಮಾತನಾಡಿ, ನಾವು ಆರೋಗ್ಯ ಕಾಪಾಡುವುದರ ಜತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಆದ್ದರಿಂದ ನಾವು ಮಾಸ್ಕ್ ಧರಿಸಬೇಕು. ಅಲ್ಲದೇ ಮತ್ತೊಬ್ಬರಿಗೂ ಮಾಸ್ಕ್ ಧರಿಸುವಂತೆ ತಿಳಿಸಬೇಕು ಎಂದರು.

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಪೌರಾಯುಕ್ತ ಕೆ.ಗುರುಲಿಂಗಪ್ಪ, ಡಿವೈಎಸ್ಪಿ ವೆಂಕಣ್ಣಗೌಡ ಪಾಟೀಲ, ಸಿಪಿಐ ಅಮರೇಶ ಬಿ., ಬಿಜೆಪಿ ಮಂಡಲ ಅಧ್ಯಕ್ಷ ಅಣಿವೀರ ಇಂಗಿನಶೆಟ್ಟಿ, ಗಿರಿರಾಜ ಪವಾರ, ಬಸವರಾಜ ಮದ್ರಿಕಿ, ಲೋಹಿತ ಕಟ್ಟಿ, ನಾಗಣ್ಣ ರಾಂಪೂರೆ, ಕಸಾಪ ಅಧ್ಯಕ್ಷ ಮೃತ್ಯುಂಜಯ ಹಿರೇಮಠ, ಶರಣಗೌಡ ಪಾಟೀಲ, ಗಿರಿಮಲ್ಲಪ್ಪ ವಳಸಂಗ, ನಾಗರಾಜ ದಂಡಾವತಿ, ನಾಗಪ್ಪ ಬೆಳಮಗಿ, ರವಿ ಬೆಳಮಗಿ, ರವಿ ಕೋಬಾಳ, ಗಿರಿರಾಜ ಪವಾರ, ವಿಶ್ವನಾಥ ಚಿತ್ತಾಪುರಕರ, ವ್ಯಜನಾಥ ಹುಗ್ಗಿ, ಗುರುಬಸಪ್ಪ ಸಜ್ಜನಶೆಟ್ಟಿ, ಸೂರ್ಯಕಾಂತ ಕೋಬಾಳ, ಕಲ್ಯಾಣಕುಮಾರ ಶೀಲವಂತ, ಭುವನೇಶ್ವರಿ ಹಳ್ಳಿಖೇಡ, ರವಿಂದ್ರಕುಮಾರ ಭಂಟನಳ್ಳಿ, ಪ್ರಭವ ಪಟ್ಟಣಕರ್‌ ಸೇರಿದಂತೆ ಅನೇಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next