Advertisement

ಮುಳ್ಳಿಂದಲೇ ಮುಳ್ಳನ್ನು ತಗೆದ ಶಾ?

12:18 AM Aug 06, 2019 | Team Udayavani |

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲಾಗಿದೆ. ಅದಕ್ಕೆ ಸಂಬಂಧಪಟ್ಟ 35ಎ ವಿಧಿಯನ್ನೂ ರದ್ದುಪಡಿಸಲಾಗಿದೆ. ಕೇಂದ್ರಕ್ಕೆ ಈ ಕ್ರಮಕ್ಕೆ ಅವಕಾಶ ನೀಡಿದ ಸಂವಿಧಾನದ ಕಲಂ ಯಾವುದು? ಉತ್ತರವೇ 370ನೇ ವಿಧಿ!

Advertisement

ಹೌದು. ಸಂವಿಧಾನದ ಯಾವ ವಿಧಿಯು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿತ್ತೋ, ಅದೇ ವಿಧಿಯಲ್ಲೇ ಇದ್ದ ಅವಕಾಶವೊಂದನ್ನು ಬಳಸಿಕೊಂಡು ಆ ವಿಧಿಯನ್ನು ರದ್ದುಗೊಳಿಸಲಾಗಿದೆ. ಹಾಗಾದರೆ, ವಿಧಿಯಲ್ಲಿನ ಆ ಅಂಶ ಯಾವುದು? 370ನೇ ವಿಧಿಯಲ್ಲಿನ ಮೂರನೇ ವಿಭಾಗದಲ್ಲಿ ಅವಕಾಶ ನೀಡಲಾಗಿದೆ. ವಿಶೇಷ ಸ್ಥಾನಮಾನವನ್ನು ರಾಷ್ಟ್ರಪತಿ ನೀಡಬಹುದಾಗಿದೆ.

ಅಗತ್ಯ ಬಿದ್ದಲ್ಲಿ, ಈ ವಿಶೇಷ ಸ್ಥಾನಮಾನವನ್ನು ಒಂದು ಸಾರ್ವಜನಿಕ ಅಧಿಸೂಚನೆಯ ಮೂಲಕ ರಾಷ್ಟ್ರಪತಿ ಹಿಂಪಡೆಯಬಹುದು. ಇದನ್ನೇ ಬಳಸಿಕೊಂಡು, 370ನೇ ವಿಧಿಯನ್ನು ಹಿಂಪಡೆಯುವ ಕೇಂದ್ರ ಸಂಪುಟದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಯವರ ಅಂಕಿತ ಪಡೆಯುವ ಮೂಲಕ ಆ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next