Advertisement

Maharashtra polls; ಉಲೇಮಾ ಕೌನ್ಸಿಲ್‌ನ ಬೇಡಿಕೆಯನ್ನು ಕಾಂಗ್ರೆಸ್ ಒಪ್ಪಿದೆ: ಶಾ ಕಿಡಿ

08:09 PM Nov 10, 2024 | Team Udayavani |

ಜಲಗಾಂವ್‌:  ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಓಲೈಕೆ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾವುದೇ ಹಂತಕ್ಕೆ ಇಳಿಯಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ(ನ10) ಕಿಡಿ ಕಾರಿದ್ದಾರೆ.

Advertisement

ಜಲಗಾಂವ್‌ನ ರೇವರ್ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಬುಲ್ಧಾನಾದ ಮಲ್ಕಾಪುರ ಕ್ಷೇತ್ರದಲ್ಲಿ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಶಾ, ಮುಸ್ಲಿಂ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡಾ 10 ರಷ್ಟು ಮೀಸಲಾತಿಯನ್ನು ಕೋರಿ ಉಲೇಮಾ ಕೌನ್ಸಿಲ್ ಪ್ರತಿಪಕ್ಷ ಕಾಂಗ್ರೆಸ್‌ಗೆ ಸಲ್ಲಿಸಿದ ಇತ್ತೀಚಿನ ಜ್ಞಾಪಕ ಪತ್ರದ ವಿಚಾರ ಪ್ರಸ್ತಾಪಿಸಿ, ‘ಮುಸ್ಲಿಂ ಮೀಸಲಾತಿಗಾಗಿ ಉಲೇಮಾ ಕೌನ್ಸಿಲ್‌ನ ಬೇಡಿಕೆಯನ್ನು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಒಪ್ಪಿಕೊಂಡಿದ್ದಾರೆ’ ಎಂದು ಅಮಿತ್ ಶಾ ಹೇಳಿದರು.

“ಪಟೋಲೆ ಅವರು ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳಿಗೆ ಮೀಸಲಾತಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿದ್ದು ಅದನ್ನು ಉಲೇಮಾ ಕೌನ್ಸಿಲ್‌ನ ಬೇಡಿಕೆಯಂತೆ ಮುಸ್ಲಿಮರಿಗೆ ನೀಡಲು ಒಪ್ಪಿದ್ದಾರೆ” ಎಂದು ಕಿಡಿ ಕಾರಿದರು.

‘ಮುಸ್ಲಿಂ ಸಮುದಾಯಕ್ಕೆ ಶೇಕಡಾ 10 ರಷ್ಟು ಕೋಟಾದ ಬೇಡಿಕೆಯು ದಲಿತರು, ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರಯೋಜನಗಳನ್ನು ನುಂಗಿ ಹಾಕುತ್ತದೆ, ಕೋಟಾದಲ್ಲಿ ಶೇಕಡಾ 50 ರಷ್ಟು ಮಿತಿ ಇದೆ ಮತ್ತು ಯಾವುದೇ ಹೆಚ್ಚಳವು ಅಸ್ತಿತ್ವದಲ್ಲಿರುವದರಲ್ಲೇ ಬರುತ್ತದೆ’ ಎಂದು ಶಾ ಹೇಳಿದರು.

“ಮಹಾ ವಿಕಾಸ್ ಅಘಾಡಿ ನಾಯಕರ ಅಧಿಕಾರದ ಲಾಲಸೆಯು ಅಂಚಿನಲ್ಲಿರುವ ಸಮುದಾಯಗಳ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಬೀರಲಿದೆ. ಬಿಜೆಪಿ ಎಲ್ಲಾ ಸಮುದಾಯಗಳ ಕಲ್ಯಾಣಕ್ಕೆ ದೃಢವಾಗಿ ಬದ್ಧವಾಗಿದೆ ಆದರೆ ಮುಸ್ಲಿಮರಿಗೆ ಯಾವುದೇ ರೀತಿಯ ಪ್ರತ್ಯೇಕ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತದೆ. ಒಬ್ಬ ಬಿಜೆಪಿ ಸಂಸದ ಅಥವಾ ಶಾಸಕ ಇರುವವರೆಗೂ ಧರ್ಮಾಧಾರಿತ ಮೀಸಲಾತಿಯನ್ನು ವಿರೋಧಿಸುತ್ತೇವೆ. ಇದು ನಮ್ಮ ಬದ್ಧತೆ,” ಎಂದು ಪ್ರತಿಪಾದಿಸಿದರು.

Advertisement

“ಎಂವಿಎ ಪಕ್ಷಗಳು ಓಲೈಕೆ ರಾಜಕಾರಣದಿಂದಾಗಿ ದೇಶದ ಸುರಕ್ಷತೆಗೆ ಧಕ್ಕೆ ತಂದಿವೆ. ಅವರು ಮತಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುತ್ತಿದ್ದಾರೆ, ”ಎಂದರು.

ವಕ್ಫ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರಕಾರದ ಕ್ರಮವನ್ನು ಶ್ಲಾಘಿಸಿದ ಶಾ, ಕರ್ನಾಟಕದಲ್ಲಿ ಹಳ್ಳಿಗಳು, ದೇವಾಲಯಗಳು ಮತ್ತು ಕೃಷಿ ಭೂಮಿಯನ್ನು ವಕ್ಫ್ ಭೂಮಿಯಾಗಿ ಪರಿವರ್ತಿಸಲಾಗಿದೆ. ಆದರೆ ಕೇಂದ್ರದ ತಿದ್ದುಪಡಿಗಳ ನಂತರ, ಅಂತಹ ಕಾಯ್ದೆಗಳು ಸಾಧ್ಯವಾಗುವುದಿಲ್ಲ. 2014 ಮತ್ತು 2024 ರ ನಡುವೆ ಮೋದಿ ಸರಕಾರವು ಮಹಾರಾಷ್ಟ್ರಕ್ಕೆ 10,15,890 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ, ಆದರೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತದ 10 ವರ್ಷಗಳ ಆಡಳಿತದಲ್ಲಿ ಕೇವಲ 1.51 ಲಕ್ಷ ಕೋಟಿ ರೂ.ಮಂಜೂರು ಮಾಡಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next