Advertisement

Adipurush ಬಿಡುಗಡೆ ಬೆನ್ನಲ್ಲೇ ಶಾರುಖ್ ‘ಸ್ವದೇಸ್’ ರಾಮಾಯಣದ ದೃಶ್ಯ ವೈರಲ್

05:15 PM Jun 17, 2023 | Team Udayavani |

ಮುಂಬಯಿ: ಪ್ರಭಾಸ್ ಅಭಿನಯದ ‘ಆದಿಪುರುಷ’ ಚಿತ್ರ ತನ್ನ ಕಳಪೆ ವಿಎಫ್‌ಎಕ್ಸ್ ಮತ್ತು ಡೈಲಾಗ್‌ಗಳಿಗಾಗಿ ಟೀಕೆ ಎದುರಿಸುತ್ತಿರುವ ವೇಳೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ಗಾಯತ್ರಿ ಜೋಶಿ ಅಭಿನಯದ ‘ಸ್ವದೇಸ್‌’ ಚಿತ್ರದ ರಾಮಾಯಣ ದೃಶ್ಯವು ವೈರಲ್ ಆಗುತ್ತಿದೆ.

Advertisement

ಅಶುತೋಷ್ ಗೋವಾರಿಕರ್ ಅವರ ಚಿತ್ರದ ದೃಶ್ಯವು ಓಂ ರಾವುತ್ ಅವರ ಅದ್ಭುತ ಕೃತಿಗಿಂತ ಉತ್ತಮವಾಗಿದೆ ಎಂದು ನೆಟ್ಟಿಗರ ಒಂದು ವಿಭಾಗವು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : Adipurush: ಮೊದಲ ದಿನವೇ ದಾಖಲೆಯ ಕಲೆಕ್ಷನ್‌ನತ್ತ ʼಆದಿಪುರುಷ್‌ʼ: 1st Day ಗಳಿಕೆ ಎಷ್ಟು?

”2004 ರಲ್ಲಿ, ‘ಸ್ವದೇಸ್’ ರಾಮಾಯಣದ ದೃಷ್ಯದ ಮೂಲಕ ಓಂ ರಾವುತ್ ಮಾಡಿದ್ದಕ್ಕಿಂತ ಉತ್ತಮವಾದ, ಹೆಚ್ಚು ಪ್ರಾಮಾಣಿಕ ಮತ್ತು ಲಾಭದಾಯಕ ಸಾಂಸ್ಕೃತಿಕ ಪ್ರಾತಿನಿಧ್ಯವನ್ನು ಹಾಡಿನ ಮೂಲಕ ನೀಡಿದ್ದರು” ಎಂದು ಟ್ವೀಟ್ ಮಾಡಲಾಗಿದೆ.

Advertisement

ಮೊದಲ ದಿನ ಆದಿಪುರುಷ ಬಾಕ್ಸ್ ಆಫೀಸ್ ದಾಖಲೆಗಳನ್ನು ಛಿದ್ರಗೊಳಿಸಿದೆಯಾದರೂ,ಸಾಮಾಜಿಕ ತಾಣಗಳಲ್ಲಿ ಚಿತ್ರದ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳು ಕಂಡು ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next