Advertisement

ನಟ ಶಾರುಖ್‌ ಖಾನ್‌ ರ ಐಶಾರಾಮಿ ಫಾರ್ಮ್ ಹೌಸ್‌ ಜಪ್ತಿ

11:02 AM Jan 31, 2018 | Team Udayavani |

ನವದೆಹಲಿ: ಮಹಾರಾಷ್ಟ್ರದ ಅಲಿಭಾಗ್‌ ಪ್ರಾಂತ್ಯದಲ್ಲಿರುವ ನಟ ಶಾರುಖ್‌ ಖಾನ್‌ಗೆ ಸೇರಿದ್ದೆನ್ನಲಾದ ಐಶಾರಾಮಿ ಫಾರ್ಮ್ ಹೌಸ್‌ ಅನ್ನು ಆದಾಯ ತೆರಿಗೆ ಇಲಾಖೆ (ಐಟಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಇಲಾಖೆ, ಅಲಿಭಾಗ್‌ ಪ್ರಾಂತ್ಯದಲ್ಲಿನ ಕೃಷಿಭೂಮಿಯನ್ನು “ಡೇಜಾ ವು ಫಾರ್ಮ್ ಪ್ರೈವೇಟ್‌ ಲಿಮಿಟೆಡ್‌’ ಎಂಬ ಸಂಸ್ಥೆ ಕೃಷಿ ಚಟುವಟಿಕೆ ನಡೆಸುವುದಾಗಿ ಹೇಳಿ ಖರೀದಿಸಿತ್ತು. 

Advertisement

ಇದಕ್ಕೆ ಶಾರುಖ್‌ ಪರೋಕ್ಷವಾಗಿ ಹಣ ಹಾಕಿದ್ದಾರೆ. ಆದರೆ, ಇಲ್ಲಿ ಯಾವುದೇ ಕೃಷಿ ಸಂಬಂಧಿ ಚಟುವಟಿಕೆ ಮಾಡದೇ ಐಶಾರಾಮಿ ಫಾರ್ಮ್ ಹೌಸ್‌ ಅನ್ನು ಕಟ್ಟಿ ಶಾರುಖ್‌ ತನ್ನ ಸ್ವಂತ ಲಾಭಕ್ಕೆ ಉಪಯೋಗಿಸುತ್ತಿದ್ದಾರೆಂದು ಇಲಾಖೆ ಆರೋಪಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next