Advertisement

ದಿಲೀಪ್‌ ಕುಮಾರ್‌ ಅವರನ್ನು ಭೇಟಿಯಾದ ಶಾರುಖ್‌ ಖಾನ್‌

11:55 AM Feb 13, 2018 | udayavani editorial |

ಮುಂಬಯಿ : ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್‌ ಖಾನ್‌ ಅವರಿಂದು ಹಿಂದಿ ಚಿತ್ರರಂಗದ ಹಿರಿಯ ನಟ, 95ರ ಹರೆಯದ ದಿಲೀಪ್‌ ಕುಮಾರ್‌ ಅವರನ್ನು ಅವರ ನಿವಾಸದಲ್ಲಿ  ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡರು. 

Advertisement

ಕಳೆದ ವರ್ಷ ಆಗಸ್ಟ್‌ನಲ್ಲಿ ದಿಲೀಪ್‌ ಕುಮಾರ್‌ ಅವರು ನಿರ್ಜಲೀಕರಣ ಮತ್ತು ಮೂತ್ರ ನಾಳ ಸೋಂಕಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದಾಗ ಶಾರುಖ್‌ ಖಾನ್‌ ಅವರು ದಿಲೀಪ್‌ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. 

ದಿಲೀಪ್‌ ಕುಮಾರ್‌ ಅವರು ಕುಟುಂಬ ಮಿತ್ರರಾಗಿರುವ ಫೈಸಲ್‌ ಫಾರೂಕಿ ಅವರು ದಿಲೀಪ್‌ ಅವರು ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಶಾರುಖ್‌ ಭೇಟಿಯ ಫೋಟೋ ಹಾಕಿ ಉಭಯ ನಟರ ಆತ್ಮೀಯತೆಯನ್ನು ಹಂಚಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next