Advertisement

ಮಕ್ಕಳಿಗಾಗಿ ಕುಡಿತ, ಸಿಗರೇಟು ತ್ಯಜಿಸಲಿರುವ ಶಾರೂಕ್‌

04:19 PM Mar 21, 2017 | |

ಮುಂಬಯಿ: ಮಕ್ಕಳ ಜತೆಗೆ ಹೆಚ್ಚು ವರ್ಷಗಳನ್ನು ಕಳೆಯುವ ಹಂಬಲದಿಂದ ಕುಡಿತ ಮತ್ತು ಸಿಗರೇಟು ಬಿಟ್ಟು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ಮೇರುನಟ ಶಾರೂಕ್‌ ಖಾನ್‌ ಹೇಳಿಕೊಂಡಿದ್ದಾರೆ. 

Advertisement

ಇಂಡಿಯಾ ಟುಡೇ ಸಮಾವೇಶದಲ್ಲಿ ಭಾಗ ವಹಿಸಿ ಮಾತನಾಡಿದ ಶಾರೂಕ್‌ ತನ್ನ ಕುಟುಂಬದ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದರು. 50 ವರ್ಷದ ಶಾರೂಕ್‌ ಚೈನ್‌ ಸ್ಮೋಕರ್‌ ಎನ್ನುವದು ಎಲ್ಲರಿಗೂ ಗೊತ್ತಿರುವ ಸಂಗತಿ. ನಡು ಹರೆಯದ ದಾಟಿದ ಬಳಿಕ ಮೂರನೇ ಮಗುವಿನ ತಂದೆಯಾಗಿರುವ ಶಾರೂಕ್‌ಗೆ ಮಗನ ಜತೆಗೆ ಹೆಚ್ಚು ಸಮಯ ಕಳೆಯಲಾಗುತ್ತಿಲ್ಲ ಎಂಬ ವ್ಯಥೆಯೂ ಇದೆಯಂತೆ. 

50 ವರ್ಷದಲ್ಲಿ ಮಗುವಿನ ತಂದೆ ಯಾಗುವುದು ಒಂದರ್ಥದಲ್ಲಿ ಉತ್ತಮ. ಇದು ನನ್ನನ್ನು ಜಿವನ್ಮುಖೀಯಾಗಿಸಿದೆ ಮತ್ತು ಮುಗ್ಧತೆ ಮತ್ತು ಪ್ರೀತಿಯನ್ನು ಭಿನ್ನ ದೃಷ್ಟಿಯಿಂದ ನೋಡುವಂತೆ ಮಾಡಿದೆ. ಮುಂದಿನ 20-25 ವರ್ಷಗಳನ್ನು ಮಕ್ಕಳ ಜತೆಗೆ ಹಾಯಾಗಿ ಕಳೆಯುವ ಆಶೆಯಿರುವುದರಿಂದ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಿದ್ದೇನೆ. ಕುಡಿತ ,ಸಿಗರೇಟು ಮತ್ತಿತರ ದುಶ್ಚಟಗಳನ್ನು ದೂರ ಮಾಡಲಿದ್ದೇನೆ ಎಂದಿದ್ದಾರೆ. 

ಈಗ ಮಕ್ಕಳಿಗಾಗಿ ಕಡಿಮೆ ಕುಡಿಯುತ್ತೇನೆ, ಕಡಿಮೆ ಸಿಗರೇಟು ಸೇದುತ್ತೇನೆ ಮತ್ತು ಹೆಚ್ಚು ವ್ಯಾಯಾಮ ಮಾಡುತ್ತೇನೆ. ಕುಡಿತ ಮತ್ತು ಸಿಗರೇಟನ್ನು ಪೂರ್ತಿಯಾಗಿ ಬಿಟ್ಟು ಆರೋಗ್ಯಕರ ಮತ್ತು ಖುಷಿಯ ಜೀವನ ನಡೆಸಲು ಯೋಚಿಸುತ್ತಿದ್ದೇನೆ ಎಂದು ಹೇಳಿ ದ್ದಾರೆ. 15 ವರ್ಷದ ಬಾಲಕನಿರುವಾಗಲೇ ಹೆತ್ತವರನ್ನು ಕಳೆದುಕೊಂಡಿರುವ ಶಾರೂಕ್‌ಗೆ ಜೀವನದಲ್ಲಿ ತಂದೆತಾಯಿಯ ಮಹತ್ವ ಏನೆಂದು ಚೆನ್ನಾಗಿ ಗೊತ್ತಿದೆ. ತನ್ನ ಮಕ್ಕಳು ಈ ಪ್ರೀತಿ ವಂಚಿರಾಗಬಾರದು  ಎಂಬ ಕಾಳಜಿ ಅವರಿಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next