Advertisement

ಶಾ ರೋಡ್ ಶೋ : ಮಂಗಳೂರಿನಲ್ಲಿ ನಾಳೆ ವಾಹನ ಸಂಚಾರದಲ್ಲಿ ಬದಲಾವಣೆ

06:24 PM Apr 28, 2023 | Team Udayavani |

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಅಪರಾಹ್ನ 3ರಿಂದ ರಾತ್ರಿ 7 ಗಂಟೆಯವರೆಗೆ ಮಂಗಳೂರು ನಗರದ ಟೌನ್‌ಹೌಲ್‌ನಿಂದ ನವಭಾರತ ಸರ್ಕಲ್‌ವರೆಗೆ ರೋಡ್‌ಶೋ ನಡೆಸಲಿರುವ ಹಿನ್ನೆೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆೆ ಮಾಡಲಾಗಿದೆ.

Advertisement

ಉಡುಪಿ-ಮಂಗಳೂರು ರಸ್ತೆಯಲ್ಲಿ ಸಂಚರಿಸುವ ಎಲ್ಲ ಬಸ್‌ಗಳು ಕೊಟ್ಟಾಾರಚೌಕಿ-ಕೆಪಿಟಿ-ನಂತೂರು-ಶಿವಭಾಗ್-ಬೆಂದೂರ್‌ವೆಲ್-ಕರಾವಳಿ ಸರ್ಕಲ್-ಕಂಕನಾಡಿ ಸರ್ಕಲ್-ವೆಲೆನ್ಸಿಯಾ-ಮಂಗಳಾದೇವಿವರೆಗೆ ಸಂಚರಿಸಬೇಕು ಮತ್ತು ಅದೇ ಮಾರ್ಗದಲ್ಲಿ ವಾಪಸ್ ಹೋಗಬೇಕು.

*ಉಡುಪಿ ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಾಣಕ್ಕೆ ಬರುವ ಬಸ್‌ಗಳು ಕೊಟ್ಟಾರಚೌಕಿ-ಕೆಪಿಟಿ-ಬಟ್ಟಗುಡ್ಡೆೆ, ಬಿಜೈ-ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆೆ ಹೋಗಬೇಕು.

*ತಲಪಾಡಿ ಮತ್ತು ಪಡೀಲ್ ಕಡೆಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲ ಬಸ್‌ಗಳು ಪಂಪ್‌ವೆಲ್-ಕರಾವಳಿ ಸರ್ಕಲ್-ಕಂಕನಾಡಿ ಸರ್ಕಲ್-ವೆಲೆನ್ಸಿಯಾ-ಮಂಗಳಾದೇವಿವರೆಗೆ ಸಂಚರಿಸಬೇಕು ಮತ್ತು ಅದೇ ಮಾರ್ಗವಾಗಿ ವಾಪಸ್ ಹೋಗಬೇಕು.

*ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹೊರಡುವ ಎಲ್ಲ ಬಸ್‌ಗಳು ಕೆಎಸ್‌ಆರ್‌ಟಿಸಿ-ಕುಂಟಿಕಾನ ಮೂಲಕ ಕೆಪಿಟಿ ಅಥವಾ ಕೊಟ್ಟಾರಚೌಕಿ ಕಡೆಗೆ ಸಂಚರಿಸಬೇಕು.

Advertisement

*ಕೊಟ್ಟಾರ ಚೌಕಿಯಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ಬರುವ ಎಲ್ಲಾಾ ಲಘು ವಾಹನಗಳು ಲೇಡಿಹಿಲ್-ಮಣ್ಣಗುಡ್ಡ-ಬಾಲಾಜಿ ಜಂಕ್ಷನ್-ಬಂದರ್ ಜಂಕ್ಷನ್ ಮೂಲಕ ಮುಂದಕ್ಕೆ ಸಂಚರಿಸಬೇಕು.

*ಲಾಲ್‌ಭಾಗ್ ಕಡೆಯಿಂದ ಬಲ್ಮಠ ಕಡೆಗೆ ಸಂಚರಿಸುವ ಎಲ್ಲ ಲಘು ವಾಹನಗಳು ಬಿ.ಜಿ.ಸ್ಕೂಲ್ ಜಂಕ್ಷನ್(ಬೆಸೆಂಟ್ ಜಂಕ್ಷನ್)-ಜೈಲು ರಸ್ತೆ-ಕರಂಗಲ್ಪಾಡಿ-ಬಂಟ್‌ಸ್‌ ಹಾಸ್ಟೆಲ್-ಮಲ್ಲಿಕಟ್ಟೆಯಾಗಿ ಅಥವಾ ಪಿವಿಎಸ್-ಬಂಟ್‌ಸ್‌ ಹಾಸ್ಟೆಲ್-ಮಲ್ಲಿಕಟ್ಟೆೆಯಾಗಿ ಸಂಚರಿಸಬೇಕು.

ವಾಹನ ಸಂಚಾರ ನಿಷೇಧ

ರೋಡ್ ಶೋ ನಡೆಸಲಿರುವ ಟೌನ್‌ಹಾಲ್-ಕ್ಲಾಕ್‌ಟವರ್-ಕೆ.ಬಿ.ಕಟ್ಟೆ-ಹಂಪನಕಟ್ಟೆ-ಕೆಎಸ್‌ಆರ್ ರಸ್ತೆೆ-ಎಂ.ಗೋವಿಂದ ಪೈ (ನವಭಾರತ) ವೃತ್ತ-ಪಿವಿಎಸ್‌ವರೆಗೆ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ವಾಹನ ಸಂಚಾರವನ್ನು ಅಪರಾಹ್ನ 3ರಿಂದ ರಾತ್ರಿ 7ರವರೆಗೆ ನಿಷೇಧಿಸಲಾಗಿದೆ. ಅಲ್ಲದೆ ರಾವ್ ಆ್ಯಂಡ್ ರಾವ್ ಸರ್ಕಲ್-ಲೇಡಿಗೋಷನ್ ಆಸ್ಪತ್ರೆ ರಸ್ತೆ, ಸೆಂಟ್ರಲ್ ಮಾರ್ಕೆಟ್-ಲೇಡಿಗೋಷನ್ ಆಸ್ಪತ್ರೆೆ ರಸ್ತೆೆ, ಸೆಂಟ್ರಲ್ ಮಾರ್ಕೆಟ್-ಕ್ಲಾಾಕ್ ಟವರ್ ರಸ್ತೆ, ಜಿ.ಎಚ್.ಎಸ್ ರಸ್ತೆ-ಕೆ.ಬಿ.ಕಟ್ಟೆ ರಸ್ತೆ, ಪಿ.ಎಂ ರಸ್ತೆ-ಕೆ.ಎಸ್.ರಾವ್ ರಸ್ತೆ, ಶರವು ದೇವಸ್ಥಾನದಿಂದ ಕೆಎಸ್ ರಾವ್ ರಸ್ತೆ, ಬಾವುಟಗುಡ್ಡೆೆಯಿಂದ(ಸಿಟಿಸೆಂಟರ್ ಬಳಿ) ಕೆ.ಎಸ್.ರಾವ್ ರಸ್ತೆ, ವಿ.ಟಿ ರಸ್ತೆ-ಬಿಷಪ್ ಹೌಸ್ ಕಡೆಯ ರಸ್ತೆೆ(ಯೆನೆಪೋಯ ಆಸ್ಪತ್ರೆ ಬಳಿ), ಗದ್ದೆಗೆರಿ ರಸ್ತೆಯಿಂದ ಎಂ.ಗೋವಿಂದ ಪೈ ಸರ್ಕಲ್, ಶಾರದಾ ಶಾಲೆಯಿಂದ ಎಂ.ಗೋವಿಂದ ಪೈ ಸರ್ಕಲ್, ಶಾರದಾ ಶಾಲೆಯಿಂದ ಎಂ.ಗೋವಿಂದ ಪೈ ಸರ್ಕಲ್, ಪಿವಿಎಸ್ ಜಂಕ್ಷನ್‌ನಿಂದ ಎಂ.ಗೋವಿಂದ ಪೈ ಸರ್ಕಲ್, ಮಿಲಾಗ್ರಿಸ್ ರಸ್ತೆಯಿಂದ ಹಂಪನಕಟ್ಟೆೆ ಜಂಕ್ಷನ್, ಫೋರಂ ಮಾಲ್‌ನಿಂದ ಎ.ಬಿ.ಶೆಟ್ಟಿ ಸರ್ಕಲ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ವಾಹನ ಪಾರ್ಕಿಂಗ್ ನಿಷೇಧ

*ಮೇರಿಹಿಲ್ ಹೆಲಿಪ್ಯಾಡ್‌ನಿಂದ ಕೆಪಿಟಿ ಜಂಕ್ಷನ್-ಬಟ್ಟಗುಡ್ಡ-ಕದ್ರಿಕಂಬ್ಳ-ಬಂಟ್ಸ್‌‌ಹಾಸ್ಟೆಲ್-ಅಂಬೇಡ್ಕರ್ ವೃತ್ತ-ಹಂಪನಕಟ್ಟೆ ಜಂಕ್ಷನ್-ಎ.ಬಿ.ಶೆಟ್ಟಿ ವೃತ್ತದವರೆಗೆ ಹಾಗೂ ಹಂಪನಕಟ್ಟೆೆ-ರೈಲ್ವೆೆ ನಿಲ್ದಾಾಣ ರಸ್ತೆೆ-ಟೌನ್‌ಹಾಲ್ ರಸ್ತೆೆಯ ಎರಡೂ ಬದಿಯಲ್ಲಿ ಬೆಳಗ್ಗೆೆ 7ರಿಂದ ಕಾರ್ಯಕ್ರಮ ಮುಗಿಯುವವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

*ಟೌನ್‌ಹಾಲ್-ಕ್ಲಾಕ್ ಟವರ್-ಕೆ.ಬಿ.ಕಟ್ಟೆೆ-ಹಂಪನಕಟ್ಟೆೆ-ಕೆ.ಎಸ್.ಆರ್ ರಸ್ತೆೆ-ಎಂ.ಗೋವಿಂದ ಪೈ(ನವಭಾರತ) ವೃತ್ತ-ಪಿವಿಎಸ್‌ವರೆಗಿನ ರಸ್ತೆೆಯ ಎರಡೂ ಬದಿಗಳಲ್ಲಿ ಬೆಳಗ್ಗೆೆ 7ರಿಂದ ಸಂಜೆ ಕಾರ್ಯಕ್ರಮ ಮುಗಿಯುವವರೆಗೆ ಎಲ್ಲ ರೀತಿಯ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಪಾರ್ಕಿಂಗ್ ಸ್ಥಳ
ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಡೊಂಗರಕೇರಿ ಕೆನರಾ ಹೈಸ್ಕೂಲ್ ಮೈದಾನ, ಬಾವುಟಗುಡ್ಡೆ ಸಂತ ಅಲೋಶಿಯಸ್ ಶಾಲಾ ಮೈದಾನ, ಪಾಂಡೇಶ್ವರ ರೊಜಾರಿಯೋ ಶಾಲಾ ಮೈದಾನದಲ್ಲಿ ನಿಲುಗಡೆ ಮಾಡಬೇಕು ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next