ಚಿಂತಾಮಣಿ: ಚಿಂತಾಮಣಿಯ ನಗರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ವರ್ಷಗಳೆ ಕಳೇದರೂ ಇ-ಖಾತೆಗಳು ನಡೆಯುತ್ತಿಲ್ಲವೆಂದು ನಗರಸೆಭೆ ಆಡಳಿತಕ್ಕೆ ಬೆಂಬಲ ನೀಡಿದ್ದ ಸದಸ್ಯ ಮಹಮ್ಮದ್ ಶಫೀಕ್ ಆರೋಪಿಸಿದ್ದಾರೆ.
ಕಳೆದ ಜನವರಿ ೧೩ ರಂದು ನಗರ ನಿವಾಸಿಯೊಬ್ಬರು ಇ-ಆಸ್ತಿ ಮಾಡಿಕೊಡುವಂತೆ ಆರ್ಜಿಸಲ್ಲಿಸಿದ್ದು ಎಷ್ಟು ಬಾರಿ ಕಚೇರಿಗೆ ತಿರುಗಾಡಿದರೂ ಇದುವರೆಗೂ ಅವರ ಆರ್ಜಿ ವಿಲೇವಾರಿಯಾಗದೆ ಹಾಗೂ ಇಆಸ್ತಿ ಮಾಡದ ಕಾರಣ ಸದಸ್ಯ ಶಫೀಕ್ ರವರನ್ನು ಭೇಟಿ ಮಾಡಿದ್ದಾರೆ. ಶಫೀಕ್ ಅವರು ನಗರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸಾಕಷ್ಟು ಇಆಸ್ತಿ ಕಡತಗಳು ಮೂಲೆಗುಂಪಾಗಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿರುವ ಶಫೀಕ್, ನಗರಸಭೆಯಲ್ಲಿ ಯಾವುದೆ ಕಾರ್ಯಗಳು ಆಗಬೇಕಾದರೆ ಸದಸ್ಯರೂ ಸಹ ತಿಂಗಳಾನುಗಟ್ಟಲೆ ಕಾಯಬೇಕಾಗಿದೆ. ೭೦-೯೦ ದಿನಗಳೊಳಗೆ ಮುಗಿಯಬೇಕಾದ ಇ ಖಾತೆಗಳು ವರ್ಷಗಳೆ ಕಳೆದರೂ ಆಗುತ್ತಿಲ್ಲ. ಇಲ್ಲಿಯ ಅಧಿಕಾರಿಗಳು ಯಾರ ಹಿಡಿತದಲ್ಲಿದ್ದಾರೆ, ಅಧಿಕಾರಿಗಳಿಗೆ ಅಧ್ಯಕ್ಷರು, ಉಪಾದ್ಯಕ್ಷರು ಹಾಗೂ ಸದಸ್ಯರು ಎನ್ನುವರು ಇದ್ದಾರೆ ಎನ್ನುವುದಾದರೂ ಅಧಿಕಾರಿಗಳಿಗೆ ಗೊತ್ತಿದಿಯೇ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಮೇಲೆ ಸದಸ್ಯರುಗಳ ದರ್ಪ : ಇನ್ನು ನಗರಭೆಯಲ್ಲಿ ಹಲವು ಸದಸ್ಯರು ಅಧಿಕಾರಿಗಳ ಮೇಲೆ ತಮ್ಮ ದರ್ಪ ತೋರಿ ತಮ್ಮ ಹಿಂಬಾಲಕರ ಮೂಲಕ ಅವರಿಗೆ ಸಂಬಂದಪಟ್ಟ ಹಾಗೂ ಕಮೀಷನ್ ಪಡೆದ ಕಡತಗಳನ್ನು ಮಾತ್ರ ವಿಲೇವಾರಿ ಮಾಡಿಸಿಕೊಳ್ಳುತ್ತಿದ್ದು ಏನೂ ತಿಳಿಯದ ಮುಗ್ಧ ಜನತೆ ಅರ್ಜಿ ಸಲ್ಲಿಸಿ ಇ-ಆಸ್ತಿ, ಖಾತೆ ಬದಲಾವಣೆ ಗಾಗಿ ವರ್ಷಾನುಗಟ್ಟಲೆ ತಿರುಗಾಡುವ ದುಸ್ಥಿತಿ ಎದುರಾಗಿದೆ ಎಂದು ಶಫೀಕ್ ಆರೋಪಿಸಿದರು.