Advertisement

ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡ ಶಫಾಲಿ

10:37 PM Mar 30, 2021 | Team Udayavani |

ದುಬಾೖ : ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯದಲ್ಲಿ 30 ಎಸೆತಗಳಿಂದ 60 ರನ್‌ ಸಿಡಿಸಿ ಮಿಂಚಿದ ಶಫಾಲಿ ವರ್ಮ ನೂತನ ಟಿ20 ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಅಂತಿಮ ಟಿ20 ಪಂದ್ಯದ ಬ್ಯಾಟಿಂಗ್‌ ಸಾಧನೆಗಾಗಿ ಶಫಾಲಿ 26 ರೇಟಿಂಗ್‌ ಅಂಕ ಗಳಿಸಿದರು. ಇದರೊಂದಿಗೆ ಅವರ ಒಟ್ಟು ಅಂಕ 776ಕ್ಕೆ ಏರಿತು. ಅವರೀಗ ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಬೆತ್‌ ಮೂನಿಗಿಂತ 35 ಹೆಚ್ಚು ಅಂಕ ಹೊಂದಿದ್ದಾರೆ.

ಶಫಾಲಿ ವರ್ಮ ಅವರ ಜತೆಗಾರ್ತಿ ಸ್ಮೃತಿ ಮಂಧನಾ ಒಂದು ಸ್ಥಾನದ ಪ್ರಗತಿಯೊಂದಿಗೆ ಆರಕ್ಕೆ ಏರಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌ ಒಮ್ಮೆಲೇ 12 ಸ್ಥಾನ ಜಿಗಿತ ಕಂಡರು. ಅವರೀಗ ಜೀವನಶ್ರೇಷ್ಠ 13ನೇ ಸ್ಥಾನ ಅಲಂಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next