Advertisement
ಶಫಾಲಿ ವರ್ಮಾ ಚೊಚ್ಚಲ ದ್ವಿಶತಕ ಮತ್ತು ಸ್ಮೃತಿ ಮಂಧನಾ ಎರಡನೇ ಟೆಸ್ಟ್ ಶತಕದ ಸಹಾಯದಿಂದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿದೆ.
Related Articles
Advertisement
ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಜೆಮಿಮಾ ರೋಡ್ರಿಗಸ್ ಅವರು ಅರ್ಧಶತಕದ ಕೊಡುಗೆ ನೀಡಿದರು. 94 ಎಸೆತಗಳಿಂದ ಜೆಮಿಮಾ 55 ರನ್ ಮಾಡಿದರು.
ಸ್ಮೃತಿ-ಶಫಾಲಿ ದಾಖಲೆ
ಮೊದಲು ವಿಕೆಟ್ 292 ರನ್ ಜೊತೆಯಾಟವಾಡಿದ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಹೊಸ ವಿಶ್ವದಾಖಲೆ ಬರೆದರು. 2004 ರಲ್ಲಿ ಕರಾಚಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನದ ಸಜ್ಜಿದಾ ಶಾ ಮತ್ತು ಕಿರಣ್ ಬಲೂಚ್ ಅವರ 241 ರನ್ ಆರಂಭಿಕ ವಿಕೆಟ್ ಜೊತೆಯಾಟದ ದಾಖಲೆಯನ್ನು ಶಫಾಲಿ ಮತ್ತು ಸ್ಮೃತಿ ಹಿಂದಿಕ್ಕಿದರು.
ಅಷ್ಟೇ ಅಲ್ಲದೆ, ಈ 282 ರನ್ ಜೊತೆಯಾಟವು ಮಹಿಳಾ ಟೆಸ್ಟ್ ನಲ್ಲಿ ಯಾವುದೇ ವಿಕೆಟ್‌ಗೆ ಎರಡನೇ ಗರಿಷ್ಠ ಜೊತೆಯಾಟವಾಗಿದೆ. 1987 ರಲ್ಲಿ ವೆದರ್‌ಬಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ವಿಕೆಟ್‌ಗೆ ಆಸ್ಟ್ರೇಲಿಯಾದ ಜೋಡಿ ರೀಲರ್ ಮತ್ತು ಆನೆಟ್ಸ್ 309 ರನ್ ಜೊತೆಯಾಟವಾಡಿದ್ದು ದಾಖಲೆಯಾಗಿದೆ.
ಈ ಹಿಂದಿನ ಭಾರತೀಯ ದಾಖಲೆಯನ್ನೂ ಸ್ಮೃತಿ- ಶಫಾಲಿ ಮುರಿದರು. 2014ರಲ್ಲಿ ಮೈಸೂರಿನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಪೂನಮ್ ರಾವತ್ ಮತ್ತು ತಿರುಷ್ಕಾಮಿನಿ ಅವರ 275 ರನ್ ದಾಖಲೆಯನ್ನು ಅಳಿಸಿದರು.