ಗಂಗಾವತಿ : ಗಣರಾಜ್ಯೋತ್ಸವ ಪರೇಡ್ ನಲ್ಲಿ ಶೈಕ್ಷಣಿಕ ಕ್ರಾಂತಿಕಾರಕ ಮಹರ್ಷಿ ನಾರಾಯಣ ಗುರುಗಳ ಸ್ತಬ್ಧಚಿತ್ರ ನಿರಾಕರಣೆ ಮತ್ತು ರಾಯಚೂರಿನಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಫೋಟೋಗೆ ಆಗಿರುವ ಅವಮಾನವನ್ನು ಖಂಡಿಸಿ ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಹಿನ್ನೆಲೆ ಕೋಮುಶಕ್ತಿಗಳು ಜನರ ಗಮನವನ್ನು ಬೇರೆಡೆ ಸೆಳೆಯಲು ಹಿಜಾಬ್ ಹಾಗೂ ಕೇಸರಿ ಶಾಲಿನ ಪ್ರಕರಣವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ಆರೋಪಿಸಿದರು.
ಬುಧುವಾರ ಅವರು ಎಸ್ ಎಫ್ ಐ ಸ್ಥಳೀಯ ಕಾರ್ಯಾಲಯದ ಎದುರು ಹಿಜಾಬ್ ಹಾಗೂ ಕೇಸರಿ ಶಾಲು ಪ್ರಚೋದನೆ ನೀಡುತ್ತಿರುವ ಶಕ್ತಿಗಳ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳು ಕೋಮ ಪ್ರಚೋದನೆ ಶಕ್ತಿಗಳಿಗೆ ಒಳಗಾಗದೆ, ನಮ್ಮ ದೇಶದ ಹೆಮ್ಮೆಯ ಸಂಕೇತ ಐಕ್ಯತೆ ತ್ರಿವರ್ಣ ರಾಷ್ಟ್ರ ಧ್ವಜವನ್ನು ಹಿಡಿದು ನಾವೆಲ್ಲರೂ ಐಕ್ಯತೆಯಿಂದ ಹೋರಾಟ ಮಾಡವುದರ ಮೂಲಕ ಈ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂಬ ಸಂದೇಶವನ್ನು ಸಾರುಬೇಕು ಕುವೆಂಪು, ಭಗತ್ ಸಿಂಗ್, ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಕನಕದಾಸ, ಸಂತ ಶಿಶುನಾಳ ಶರೀಫರು, ಗುರು ಗೋವಿಂದ ಭಟ್ಟರ,ನಾರಯಣಗುರು, ಬಸವಣ್ಣ, ಅನೇಕ ಮಹಾನ್ ವ್ಯಕ್ತಿಗಳು ಸಾಧು-ಸಂತರ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುವುದರ ಮೂಲಕ ರಾಜ್ಯವನ್ನು ಐಕ್ಯತೆಯಿಂದ ಕಟ್ಟಿದ್ದಾರೆ ಅನೇಕ ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಲ್ಲಿ ಹಿಂದೂ-ಮುಸ್ಲಿಂ, ಸಿಖ್ಖ್, ಜೈನ್ ಬೌದ್ಧರು, ಎಂದು ಈ ರೀತಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ವಚನ ಸಾಹಿತ್ಯ, ಭಕ್ತಿ ಚಳುವಳಿಯಿಂದ ಅನೇಕ ವ್ಯಕ್ತಿಗಳ ಸಾಮಾಜಿಕ ಚಳವಳಿಯ ಮೂಲಕ ನಾಡನ್ನು ಕಟ್ಟಿದ್ದಾರೆ .
ವಚನಚಳುವಳಿ ,ಸೂಫಿಸಂತರ ಚಳುವಳಿ, ರಾಜಮಹಾರಾಜರು ಇದ್ದಾಗಲೂ ಈ ರೀತಿಯ ವಾತಾವರಣ ನಿರ್ಮಾಣ ಆಗಿರಲಿಲ್ಲ. ಕೋಮುವಾದಿ ಶಕ್ತಿಗಳು ತಮ್ಮ ಹಿಡನ್ ಅಜೆಂಡಾವನ್ನು ರಾಜಕೀಯವಾಗಿ ಪರಿವರ್ತನೆ ಮಾಡಿ ಏನು ಅರಿಯದ ಶಿಕ್ಷಣ ಕಲಿಯುವ ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಮೂಲಕ ರಾಜ್ಯವನ್ನು ಒಡೆದು ಆಳುವ ಕೆಲಸ ಸರಕಾರವೇ ಮಾಡುತ್ತಿರುವುದು ದುರಂತ, ರಾಜ್ಯದಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸಿಕೊಂಡು ಬರುತ್ತಿರುವುದು ಇದು ಮೊದಲೇನಲ್ಲ ಈಗಾಗಲೇ ಸುಮಾರು ವರ್ಷಗಳಿಂದ ಅವರು ಹಿಜಬ್ ಹಾಕಿಕೊಂಡು ಬರುತ್ತಿದ್ದಾರೆ ಅಷ್ಟೇ ಅಲ್ಲ ಇತ್ತೀಚಿಗೆ ಹಿಂದು ಸಮಾಜದ ಹೆಣ್ಣು ಮಕ್ಕಳು ಸಹ ಮುಖಕ್ಕೆ ಮುಖ ವಸ್ತ್ರವನ್ನು ಧರಿಸಿ ಕೊಂಡು ಬರುತ್ತಿದ್ದಾರೆ, ರಾಜ್ಯದ ಬಹುತೇಕ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳಾದ ಶಿಕ್ಷಕ- ಉಪನ್ಯಾಸಕರು ಇಲ್ಲ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕೊಠಡಿಗಳಿಲ್ಲ, ಶೌಚಾಲಯಗಳಿಲ್ಲ, ಕುಡಿಯಲು ಶುದ್ಧವಾದ ನೀರು ಇಲ್ಲ, ಗ್ರಂಥಾಲಯಗಳಿಲ್ಲ ಇವು ಯಾವ ಕೂಡ ಇವರಿಗೆ ವಿಷಯವೇ ಅಲ್ಲ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸಮುದಾಯಕ್ಕೆ ಸಮರ್ಪಕವಾಗಿ ಗುಣಮಟ್ಟದ ಶಿಕ್ಷಣ ಸಿಗದಿದ್ದರೂ ಪರವಾಗಿಲ್ಲ ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಹಾಕಿಕೊಂಡರೆ ಅದು ಇವರಿಗೆ ದೊಡ್ಡ ವಿಷಯ ಅಲ್ಲವೇ? ಇಂತಹ ಮನಸ್ಥಿತಿಯ ವ್ಯಕ್ತಿಗಳಿಂದ ಇಂದು ಶೈಕ್ಷಣಿಕ ವಾತಾವರಣ ಹದಗೆಡಲು ಕಾರಣವಾಗಿದೆ ಅಂತಹ ಯಾವುದೇ ಶಕ್ತಿಗಳಿಗೆ ವಿದ್ಯಾರ್ಥಿಗಳು ಕಿವಿ ಕೊಡಬಾರದು ಅವರನ್ನು ಹಿಮ್ಮೆಟ್ಟಿಸಬೇಕು ಅದಕ್ಕೆ ಯಾವುದೇ ರೀತಿಯಿಂದ ಪ್ರಚೋದನೆಗೆ ಒಳಗಾಗದೆ ಅವರನ್ನು ಹಿಮ್ಮೆಟ್ಟಿಸಬೇಕು ಅದಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಯು ರಾಷ್ಟ್ರ ಧ್ವಜವನ್ನು ಹಿಡಿದು ಪ್ರತಿಭಟನೆ ಮಾಡುವುದರ ಮೂಲಕ ಕೋಮು ಶಕ್ತಿಗಳಿಗೆ ಎಚ್ಚರಿಕೆ ಕೊಟ್ಟಿದೆ ಎಂದರು .
ಸಂದರ್ಭದಲ್ಲಿ ಎಸ್ ಎಫ್ ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಗಂಗಾವತಿ ತಾಲೂಕಿನ ತಾಲೂಕ ಕಾರ್ಯದರ್ಶಿ ಶಿವಕುಮಾರ, ಪ್ರಮುಖರಾದ ಸೋಮನಾಥ ಹಾಗೂ ವಿದ್ಯಾರ್ಥಿಗಳಾದ ಭೀಮೇಶ್, ಶಿವಕುಮಾರ, ಮಂಜುನಾಥ ಇದ್ದರು.