Advertisement

Kasaragod ಬಾಲಕಿಗೆ ಲೈಂಗಿಕ ಕಿರುಕುಳ : 41 ವರ್ಷ ಸಜೆ, ದಂಡ

09:50 PM Nov 24, 2023 | Team Udayavani |

ಕಾಸರಗೋಡು: ಒಂಭತ್ತರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆಗೆ ಸಮೀಪದ ಪೆರ್ಣೆ ಎಡನಾಡಿನ ಗೋಪಾಲಕೃಷ್ಣ (67)ನಿಗೆ ಕಾಸರಗೋಡು ಫಾಸ್ಟ್‌ ಟ್ರ್ಯಾಕ್ ಸ್ಪೆಷಲ್‌ ನ್ಯಾಯಾಲಯ(ಪೋಕ್ಸೋ) ಒಟ್ಟು 41 ವರ್ಷ ಸಜೆ ಹಾಗು 21000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.ದಂಡ ಪಾವತಿಸದಿದ್ದಲ್ಲಿ ಎರಡು ತಿಂಗಳು ಹತ್ತು ದಿನ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

Advertisement

2020 ಜೂನ್‌ 28 ರಂದು ಮನೆ ಬಳಿ ಆಟ ಆಡುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next