Advertisement
ಅಭಿಯೋಜನೆಯ ಪರ 17 ಸಾಕ್ಷಿದಾರರ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ. ವೆಂಕಟೇಶ ನಾಯ್ಕ ಅವರು, ವಾದ-ಪ್ರತಿವಾದಗಳನ್ನು ಆಲಿಸಿ ಪೋಕ್ಸೋ ಕಾಯ್ದೆಯ ಕಲಂ 8ರ ಪ್ರಕಾರ 3 ವರ್ಷ ಮತ್ತು ಕಲಂ 12ರ ಪ್ರಕಾರ 1 ವರ್ಷ ಜೈಲು ಶಿಕ್ಷೆಗೆ ಆದೇಶಿಸಿದ್ದಾರೆ. ಅಭಿಯೋಜನೆಯ ಪರ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೋ ) ವಿಜಯ ವಾಸು ಪೂಜಾರಿ ಅವರು ವಾದಿಸಿದ್ದರು.
ಬಾಲಕಿಯು ತಾಯಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದು, 2016ರ ಅ. 12ರ ರಾತ್ರಿ ತಾಯಿ ಹೊರಗಿದ್ದ ಸಂದರ್ಭ ಆರೋಪಿ ಅಪ್ಪು ನಾಯ್ಕ ಮನೆಗೆ ಪ್ರವೇಶಿಸಿ ಬಾಲಕಿಯ ಮೈಯನ್ನು ಮುಟ್ಟಿ ಲೈಂಗಿಕ ಕಿರುಕುಳ, ದೌರ್ಜನ್ಯ ಮಾಡಿದ್ದ. ಇದನ್ನು ಸ್ಥಳೀಯರು ನೋಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಂದಿನ ಕಾರ್ಕಳ ನಗರ ಪ್ರಭಾರ ಪಿಎಸ್‌ಐ ದಾಮೋದರ್ ಕೆ.ಬಿ. ಅವರು ಆರೋಪಿಯನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು.
ತ್ವರಿತ ವಿಚಾರಣೆ, ಶಿಕ್ಷೆ
ಮಕ್ಕಳ ಮೇಲಾಗುವ ಲೈಂಗಿಕ ಕಿರುಕುಳ, ದೌರ್ಜನ್ಯ ತಡೆಗಾಗಿ ಬಂದಿರುವ ಪೋಕೊÕà ಕಾಯ್ದೆಯಡಿ ಪೋಕೊÕà ಜಿಲ್ಲಾ ವಿಶೇಷ ನ್ಯಾಯಾಲಯವು ಶೀಘ್ರ ವಿಚಾರಣೆ ನಡೆಸಿ ತ್ವರಿತವಾಗಿ ಶಿಕ್ಷೆ ನೀಡಿದೆ.