ಈ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗುರಿಯಾಗುತ್ತಲೇ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ರಮ್ಯಾ ಆ ಮಹಿಳೆ ಜಾಲತಾಣದ ದೂರು ಸಮಿತಿಗೆ ಯಾವುದೇ ರೀತಿಯಲ್ಲಿ ದೂರು ಸಲ್ಲಿಸಿಲ್ಲ. ಜತೆಗೆ ಹಾಲಿ ಉದ್ಯೋಗಿಯ ಪರವಾಗಿ 39 ಮಂದಿ ಸಹಿ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
Advertisement
ಏನಿದು ಪ್ರಕರಣ?: ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಘಟಕದಲ್ಲಿ ತನಗೆ ಸಹೋದ್ಯೋಗಿ ಚಿರಾಗ್ ಪಟ್ನಾಯಕ್ ಎಂಬುವರು ಕಿರುಕುಳ ನೀಡುತ್ತಿದ್ದರು ಎಂದು ಅಲ್ಲಿ ಉದ್ಯೋಗಿಯಾಗಿದ್ದು, ಸದ್ಯ ರಾಜೀನಾಮೆ ನೀಡಿರುವ ಮಹಿಳೆಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ರಮ್ಯಾಗೆ ಇ-ಮೇಲ್ ಕೂಡಾ ಮಾಡಿ ದ್ದರು.
Related Articles
Advertisement
ಆದರೆ ರಮ್ಯಾ ತನ್ನ ಕಾರ್ಯತತ್ಪರತೆ, ನಿಷ್ಠೆಯನ್ನು ಹೊಗಳಿದರು ಎಂದು ಬರೆದುಕೊಂಡಿದ್ದಾರೆ. ಈ ಇ-ಮೇಲ್ ಈಗ ಟ್ವಿಟ ರ್ ನಲ್ಲಿ ವೈರಲ್ ಆಗಿ ದೆ. ಉದ್ಯೋಗಿಗೆ ಬೆಂಬಲ: ಮಹಿಳೆ ಮಾಡಿದ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ರಮ್ಯಾ, ಮಾಜಿ ಉದ್ಯೋಗಿ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿದ್ದಾರೆ. ಆದರೆ ದೂರುಗಳ ಸಮಿತಿಗೆ ಯಾವುದೇ ರೀತಿಯಲ್ಲಿ ಅವರು ಆರೋಪದ ಬಗ್ಗೆ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಚಿರಾಗ್ ಪಟ್ನಾಯಕ್ ಪರವಾಗಿ 39 ಮಂದಿ ಸಹಿ ಹಾಕಿದ್ದಾರೆ. ಮಾಜಿ ಉದ್ಯೋಗಿ ಮತ್ತು ಪಟ್ನಾಯಕ್ ನಡುವಿನ ಸಂಭಾಷಣೆಯ ವಿವರಗಳನ್ನು ಪರಿಶೀಲಿಸಿದಾಗ ಅವರ ಪರವಾಗಿಯೇ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ರಮ್ಯಾ ತಿಳಿಸಿದ್ದಾರೆ. ಮಹಿಳೆಯನ್ನು ಸಂಪರ್ಕಿಸುವ ಪ್ರಯತ್ನ ನಡೆದಿದ್ದು, ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದಿದ್ದಾರೆ.
ಬಿಜೆಪಿ ಕಿಡಿ: ಇದೇ ವೇಳೆ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ಪಕ್ಷದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತದೆ ಎಂಬ ಆರೋಪಗಳ ಬಗ್ಗೆ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದ್ದಾರೆ. ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣದ ಮಾಜಿ ಉದ್ಯೋಗಿ ಮಾಡಿದ ಆರೋಪಗಳನ್ನು ಪರಿಶೀಲಿಸುತ್ತಿದ್ದಾರೆ ಎಂದಿದ್ದಾರೆ.
ಭಾರತ ಮಹಿಳೆಯರಿಗೆ ಸುರಕ್ಷತೆಯಲ್ಲ ಎಂಬ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ಕೇಂದ್ರದ ವಿರುದ್ಧ ಅವರು ಟೀಕಿಸಿದ್ದರು ಎಂದಿದ್ದಾರೆ. ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಕೂಡ ಸುರಕ್ಷಿತರಾಗಿಲ್ಲ ಎಂದು ಹೇಳಿದ ಲೇಖೀ ಇಂಡಿಯಾ ಗೇಟ್ ಬಳಿ ಏಪ್ರಿಲ್‌ನಲ್ಲಿ ಕಥುವಾ ಘಟನೆ ಖಂಡಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಪ್ರಿಯಾಂಕಾ ವಾಧಾರನ್ನೂ ಎಳೆದಾಡಲಾಗಿತ್ತು ಎಂದು ಹೇಳಿದ್ದಾರೆ ಲೇಖೀ.