Advertisement

ನಿತ್ಯಾನಂದರ ಜತೆ ಸಂತ್ರಸ್ತೆ ನಡೆಸಿದ್ದು ಒಪ್ಪಿತ ಸೆಕ್ಸ್‌

11:27 AM Mar 17, 2018 | |

ಬೆಂಗಳೂರು: ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅದೊಂದು ಒಪ್ಪಿತ ಲೈಂಗಿಕ ಸಂಪರ್ಕವಾಗಿತ್ತು ಎಂಬುದು ಪ್ರಾಸಿಕ್ಯೂಷನ್‌ನ ದಾಖಲೆಗಳಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅವರ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

Advertisement

ಪ್ರಕರಣದಲ್ಲಿ ತಮ್ಮನ್ನು ಕೈ ಬಿಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ರಾಮನಗರ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಿತ್ಯಾನಂದ ಸ್ವಾಮಿ ಸೇರಿದಂತೆ 6 ಮಂದಿ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್‌ ಪುನರ್‌ಪರಿಶೀಲನಾ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಆರ್‌.ಬಿ ಬೂದಿಹಾಳ್‌ ಅವರಿದ್ದ ಏಕಸದಸ್ಯ ಪೀಠದ ಮುಂದೆ ನಿತ್ಯಾನಂದ ಸ್ವಾಮಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದಿಸಿದರು.

ಅರ್ಜಿದಾರ ನಿತ್ಯಾನಂದ ಸ್ವಾಮೀಜಿ ದೂರುದಾರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿಲ್ಲ, ಬಲತ್ಕಾರದಿಂದ ಲೈಂಗಿಕ ಸಂಪರ್ಕ ನಡೆಸಿಲ್ಲ. ಹಲವು ವರ್ಷಗಳ ಕಾಲ ಆಶ್ರಮದಲ್ಲಿ ಉಳಿದುಕೊಂಡಿದ್ದ ದೂರುದಾರೆ, ನಿತ್ಯಾನಂದ ಅವರ ಜತೆ ಆಧ್ಯಾತ್ಮದ ಪರಮ ಸುಖ ಪಡೆಯಲು ಲೈಂಗಿಕ ಸಂಪರ್ಕ ಹೊಂದಿದ್ದಳು. ವಿದ್ಯಾವಂತೆಯೂ ಆದ ಆಕೆಗೆ ಇದೆಲ್ಲಾ ಗೊತ್ತಿದ್ದೇ ಮಾಡಿದ್ದಾರೆ.

ಆಕೆಯ, ಹಿನ್ನೆಲೆಯನ್ನು ಗಮನಿಸಿದಾಗ ಆಕೆ ಇನ್ನೂ ಹಲವರ ಜೊತೆ ಸಂಪರ್ಕ ಹೊಂದಿದ್ದಳು ಎಂಬುದು ವೇದ್ಯವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇಡೀ ಪ್ರಕರಣದ ಬಗ್ಗೆ  ಪೊಲೀಸರು ಆಳವಾದ ತನಿಖೆ ನಡೆಸಿಲ್ಲ. ಹಲವು ಮಹತ್ವದ ದಾಖಲೆಗಳನ್ನು ಅಧೀನ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ.ಜತೆಗೆ ನ್ಯಾಯಾಲಯ ಕೂಡ, ಪ್ರಕರಣದ ಸಾಕ್ಷ್ಯಗಳನ್ನು ಸೂಕ್ತವಾಗಿ ಅವಲೋಕಿಸಿದೆ ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿದೆ ಎಂದು ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next