Advertisement

ಕೊಳಚೆ ಉಪ್ಪಳ ಹೊಳೆ: ಪುನಶ್ಚೇತನಕ್ಕೆ ಕ್ರಮ

09:37 PM Nov 24, 2019 | Sriram |

ಕಾಸರಗೋಡು: ಕೇರಳದಲ್ಲಿ ನಲ್ವತ್ತಕ್ಕೂ ಹೆಚ್ಚು ಹೊಳೆ, ತೊರೆಗಳಿವೆ. ಈ ಹೊಳೆಗಳ ಪೈಕಿ 21 ಹೊಳೆಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊಳಚೆ ಹಾಗು ತ್ಯಾಜ್ಯ ರಾಶಿ ಹರಿಯುತ್ತಿದೆ ಎಂದು ರಾಷ್ಟ್ರೀಯ ಹರಿತ ಟ್ರಿಬ್ಯೂನಲ್‌ ವರದಿ ಮಾಡಿದೆ. ಕಾಸರಗೋಡು ಜಿಲ್ಲೆ ಯಲ್ಲಿ ಉಪ್ಪಳ ಹೊಳೆಯಲ್ಲಿ ಅತ್ಯಂತ ಮಲಿನ ಗೊಂಡಿದೆ ಎಂದು ಬೊಟ್ಟು ಮಾಡಿದೆ. ಈ ಬಗ್ಗೆ “ಉದಯವಾಣಿ’ ಅಕ್ಟೋಬರ್‌ 2 ರಂದು ಚಿತ್ರ ಸಹಿತ ವರದಿ ಮಾಡಿತ್ತು. ಇದೀಗ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರು ಮುತುವರ್ಜಿ ವಹಿಸಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಪುನಶ್ಚೇತನ ಯೋಜನೆಯನ್ನು ಸಿದ್ಧಪ ಡಿಸಲು ಮುಂದಾಗಿದ್ದಾರೆ. 

Advertisement

ರಾಜ್ಯದ ಭರತಪುಳ ಹೊಳೆ ಸಹಿತ 21 ಹೊಳೆಗಳು ಮಲಿನಗೊಂಡಿದೆ ಎಂದು ವರದಿಯಲ್ಲಿ ಹೇಳಿದ್ದು ಹೊಳೆಯಲ್ಲಿ ಕೊಳಚೆ, ತ್ಯಾಜ್ಯ ಹರಿಯುತ್ತಿರುವುದರಿಂದ ಕೇರಳ ರಾಜ್ಯ ಸರಕಾರಕ್ಕೆ 14 ಕೋಟಿ ರೂ. ದಂಡ ಹೇರಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಲಿನಗೊಂಡಿರುವ ಹೊಳೆಗಳ ಯಾದಿಯಲ್ಲಿ ತಿರುವನಂತಪುರದ ಕರಮನಯಾರ್‌ ಹೊಳೆ ಪ್ರಥಮ ಸ್ಥಾನದ ಲ್ಲಿದೆ. ಸಂರಕ್ಷಣೆ ನಡೆಸಿದರೆ ಹೊಳೆಗಳನ್ನು ರಕ್ಷಿಸಬಹುದಾದ ವಿಭಾಗದಲ್ಲಿ ನಾಲ್ಕನೇ ಮತ್ತು ಐದನೇ ಯಾದಿಯಲ್ಲಿ ಇತರ 20 ಹೊಳೆಗಳನ್ನು ಸೇರ್ಪಡೆಗೊಳಿಸಲಾಗಿದೆ.

ಮಲಿನಗೊಂಡ ಹೊಳೆಗಳು
ಕಾಸರಗೋಡು ಜಿಲ್ಲೆಯ ಉಪ್ಪಳ ಹೊಳೆ, ಕರಮನಯಾರ್‌, ಭಾರತ್‌ಪುಳ, ಕಡಂಬಯಾರ್‌, ಕೀಚೇರಿ, ಮಣಿಮಲ, ಪಂಬಾ, ಭವಾನಿ, ಚಿತ್ರಪ್ಪುಳ, ಕಡಲುಂಡಿ, ಕಲ್ಲಾಯಿ, ಕರುವನ್ನೂರು, ಕವ್ವಾಯಿ, ಕುಪ್ಪಂ, ಕುಟ್ಯಾಡಿ, ಮೇಪ್ರಾಲ್‌, ಪೆರಿಯಾರ್‌, ಪೆರುವಂಬ್‌, ಪುಳಯ್ಕಲ್‌, ರಾಮಪುರಂ, ತಿರೂರು.

ಹೊಳೆಯ ನೀರಿನಲ್ಲಿ ಆಕ್ಸಿಜನ್‌ ಪ್ರಮಾಣ ತಪಾಸಿಸಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವ ಮಲಿನಗೊಂಡ ಹೊಳೆ ಎಂದು ಗುರುತಿಸಲಾಗುತ್ತದೆ. ಬಯೋಕೆಮಿಕಲ್‌ ಆಕ್ಸಿಜನ್‌ ಡಿಮಾಂಡ್‌(ಬಿ.ಒ.ಡಿ) ತಪಾಸಣೆ ನಡೆಸಿ ಈ ತೀರ್ಮಾನಕ್ಕೆ ಬರುತ್ತಿದೆ. ನೀರಿನಲ್ಲಿ ಎಷ್ಟು ಪ್ರಮಾಣದಲ್ಲಿ ಆಕ್ಸಿಜನ್‌ ಬೇಕು ಎಂಬುದನ್ನು ಈ ತಪಾಸಣೆಯಲ್ಲಿ ಲೆಕ್ಕಹಾಕಲಾಗುತ್ತಿದೆ.
ಶುದ್ಧ ಜಲವಾಗಿದ್ದಲ್ಲಿ ಬಿ.ಒ.ಡಿ. ತಪಾಸಣೆಯಲ್ಲಿ ಲೀಟರ್‌ನಲ್ಲಿ ಆಕ್ಸಿಜನ್‌ನ ಪ್ರಮಾಣ ಮೂರು ಮಿಲ್ಲಿ ಗ್ರಾಂ ಗಿಂತಲೂ ಕಡಿಮೆಯಾಗಿರಬೇಕು. ಈ ಪ್ರಮಾಣಕ್ಕಿಂತ ಅಧಿಕವಾಗಿದ್ದಲ್ಲಿ ನೀರು ಮಲಿನಗೊಂಡಿದೆ ಎಂದು ಗುರುತಿಸಲಾಗುತ್ತದೆ. ಕರಮನಯಾರ್‌ನಲ್ಲಿ ಬಿ.ಒ.ಡಿ. ಪ್ರಮಾಣ ಲೀಟರ್‌ನಲ್ಲಿ 56 ಮಿಲ್ಲಿ ಗ್ರಾಂ ಇದೆ. ಈ ಹೊಳೆಯಲ್ಲಿ ಮೀನುಗಳು ಸಾಯುವ ಸ್ಥಿತಿಯಲ್ಲಿದೆ. ಭಾರತ್‌ಪುಳದಲ್ಲಿ 6.6 ಮಿಲ್ಲಿ ಗ್ರಾಂ, ಕಡಂಬಯಾರ್‌, ಕೀಚೇರಿ, ಮಣಿಮಲ, ಪಂಬಾ, ಭವಾನಿ ಹೊಳೆಗಳಲ್ಲೂ ಇದೇ ಪ್ರಮಾಣದಲ್ಲಿದೆ. ಜೈವ-ರಾಸಾಯನಿಕ ಮಾಲಿನ್ಯ ತುಂಬಿ ಕೇರಳದ ಹೊಳೆಗಳನ್ನು ಮಲಿನಗೊಳಿಸುತ್ತಿದೆ ಎಂದು ವರದಿಯಲ್ಲಿ ಹೇಳಿದೆ.

ಬಹುತೇಕ ಹೊಳೆಗಳಲ್ಲಿ ಕೋಳಿಫಾಂ ಬ್ಯಾಕ್ಟೀರಿಯಾ ಪ್ರಮಾಣ ಅತ್ಯಂತ ಹೆಚ್ಚಿದೆ. ಆಲುವಾ, ಎಲ್ಲೂರು, ಕಳಮಶೆÏàರಿಯಲ್ಲಿನ ರಾಸಾಯನಿಕ ವಸ್ತುಗಳ ಮಾಲಿನ್ಯ ಪೆರಿಯಾರ್‌ಗೆ ಬೆದರಿಕೆಯಾಗಿದೆ ಎಂದು ವರದಿಯಲ್ಲಿ ಸೂಚಿಸಿದೆ. ಹಲವು ಬಾರಿ ಮುನ್ನೆಚ್ಚರಿಕೆ ನೀಡಿದ್ದರೂ ಜೈವ ಹಾಗು ರಾಸಾಯನಿಕ ತ್ಯಾಜ್ಯ ಹೊಳೆಗಳಿಗೆ ಹರಿಯುತ್ತಿರುವುದು ಮುಂದುವರಿದಿದೆ. ಹೊಳೆಗಳು ಮಲಿನ ಗೊಳ್ಳುವುದನ್ನು ನಿಯಂತ್ರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು 2018 ರಲ್ಲಿ ಟ್ರಿಬ್ಯೂನಲ್‌ ಸರಕಾರವನ್ನು ಒತ್ತಾಯಿ ಸಿತ್ತು. ಆದರೆ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರಕ್ಕೆ 14 ಕೋಟಿ ರೂ. ದಂಡ ಹೇರಿದೆ. ಹೊಳೆಗಳನ್ನು ಸಂರಕ್ಷಿಸಲು ಮಾಲಿನ್ಯಮುಕ್ತಗೊಳಿಸಲು ಕ್ರಮ ತೆಗೆದುಕೊಂಡು ಜಾರಿಗೆ ತಂದಲ್ಲಿ ದಂಡವನ್ನು ವಾಪಸು ಮಾಡಲಾಗು ವುದೆಂದು ರಾಷ್ಟ್ರೀಯ ಹರಿತ ಟ್ರಿಬ್ಯೂನಲ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪುನಶ್ಚೇತನ
ಉಪ್ಪಳ ನದಿಯ ಪುನಶ್ಚೇತನ ಸಂಬಂಧ ಅಧ್ಯಯನ ನಡೆಸಿ, ಆಸುಪಾಸಿನ ಪ್ರದೇಶಗಳ ಕುಡಿಯುವ ನೀರಿನ ಬರ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ ಜಿಲ್ಲಾ ಮಟ್ಟದ ಸಮಿತಿ ಆಡಳಿತಾನುತಿ ನೀಡಿದ್ದು ಇದಕ್ಕಾಗಿ 3.5ಲಕ್ಷ ರೂ. ಮೀಸಲಿರಿಸಿದೆ. ಕರ್ನಾಟಕದ ವೀರಕಂಭ ಮಲೆಗಳಲ್ಲಿ ಹುಟ್ಟಿ ಮಂಜೇಶ್ವರ ತಾಲೂಕಿನಲ್ಲಿ ಹರಿಯುವ ಉಪ್ಪಳ ನದಿ ಈಗ ವಿನಾಶದ ಅಂಚಿನಲ್ಲಿರುವುದನ್ನು ಗಂಭೀರವಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಅವರು ಈ ಬಗ್ಗೆ ಮುತುವರ್ಜಿ ವಹಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಶೀಘ್ರ ಟ್ರಿಬ್ಯೂನಲ್‌ಗೆ
ಮಲಿನಗೊಂಡಿರುವ ಹೊಳೆಗಳನ್ನು ಸಂರಕ್ಷಿಸಲು ಕ್ರಿಯಾ ಯೋಜನೆ ಯನ್ನು ಆವಿಷ್ಕರಿಸಲಾಗಿದೆ. ಕರಮನಯಾರ್‌ ಹೊಳೆಯನ್ನು ರಕ್ಷಿ ಸುವ ಯೋಜನೆಯನ್ನು ರಾಷ್ಟ್ರೀಯ ಹರಿತ ಟ್ರಿಬ್ಯೂನಲ್‌ಗೆ ನೀಡಲಾ ಗಿದೆ. ಇತರ ಹೊಳೆಗಳನ್ನು ಶೀಘ್ರ ವಾಗಿ ಟ್ರಿಬ್ಯೂನಲ್‌ಗೆ ನೀಡಲಾಗು ವುದು ಎಂದು ಮಾಲಿನ್ಯ ನಿಯಂ ತ್ರಣ ಮಂಡಳಿ ಚೆಯರ್‌ವೆುàನ್‌ ಡಾ| ಅಜಿತ್‌ ಹರಿದಾಸ್‌ ಹೇಳಿದ್ದರು.

ಅಧ್ಯಯನಕ್ಕೆ ಅನುಮತಿ
9 ಗ್ರಾಮಗಳನ್ನು, 4 ಗ್ರಾ. ಪಂ.ಗಳನ್ನೂ ಆವರಿಸಿಕೊಂಡು ಉಪ್ಪಳ ನದಿ ಯಿದೆ. 17 ಸಬ್‌ ವಾಟರ್‌ ಶೆಡ್‌ಗಳಲ್ಲಿ, 26 ಮೈಕ್ರೋ ಶೆಡ್‌ಗಳ ಮೂಲಕ ಆಳವಾದ ಅಧ್ಯಯನ ನಡೆಸಲು ವಿಶೇಷ ಅನುಮತಿ ನೀಡಲಾಗಿದೆ. ಸಾರ್ವಜನಿಕ ಸಹಭಾಗಿತ್ವ ಖಚಿತಪಡಿಸಿ, ಸಮಗ್ರ ಮೂಲಭೂತ ಸಮೀಕ್ಷೆ ನಡೆಸಿ, ಪುನಶ್ಚೇತನ ನಡೆಸಲು ಯೋಜನೆಯನ್ನು ಸಿದ್ಧಪಡಿಸಲಾಗುವುದು.
– ವಿ.ಎಂ.ಅಶೋಕ್‌ ಕುಮಾರ್‌,
ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next