Advertisement

ನಳದಲ್ಲಿ ಕೊಳಚೆ ಮಿಶ್ರಿತ ನೀರು ಪೂರೈಕೆ; ಆಕ್ರೋಶ

01:40 PM Aug 04, 2020 | mahesh |

ಕಂಪ್ಲಿ: ಸಾರ್ವಜನಿಕರು ಪ್ರತಿದಿನ ಉಪಯೋಗಿಸುವ, ಗ್ರಾಪಂನವರು ಸರಬರಾಜು ಮಾಡುವ ನಳದಲ್ಲಿ ಕೊಳಚೆ ಮಿಶ್ರಿತ ನೀರು ಪೂರೈಕೆಯಾಗುತ್ತಿದ್ದು
ಈಗಾಗಲೇ ಮಹಾಮಾರಿ ಕೊರೊನಾ ಸೋಂಕು ಹರಡುತ್ತಿರುವುದರಿಂದ ಭಯದಲ್ಲಿ ಜೀವನ ಸಾಗಿಸುತ್ತಿರುವ ಗ್ರಾಮಸ್ಥರು ಇದೀಗ ಕೊಳಚೆ ನೀರಿನಿಂದಾಗಿ ಸಾಂಕ್ರಾಮಿಕ ರೋಗದ ಭೀತಿಯನ್ನು ಅನುಭವಿಸುತ್ತಿದ್ದಾರೆ.

Advertisement

ತಾಲೂಕಿನ ಸುಗ್ಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದ ಮಹಾಂಕಾಳಮ್ಮ ಕಟ್ಟೆ ಬಳಿ ಇರುವ ನಳಗಳಲ್ಲಿ ಕೊಳಚೆ ಮಿಶ್ರಿತ ನೀರು ಸರಬರಾಜಾಗುತ್ತಿದ್ದು, ಸ್ಥಳೀಯರಲ್ಲಿ ರೋಗದ ಭೀತಿ ಆವರಿಸಿದೆ. ಈ ಗ್ರಾಮದ ಸುಮಾರು 50ಕ್ಕೂ ಅಧಿಕ ನಳಗಳಲ್ಲಿ ಚರಂಡಿ ನೀರು ಮಿಶ್ರಿತ ನೀರಿನೊಂದಿಗೆ ಹುಳುಗಳು ಬರುತ್ತಿವೆ. ಕಳೆದ 15 ದಿನಗಳಿಂದ ಇದೇ ರೀತಿ ಗಲೀಜು ನೀರು ಪೂರೈಕೆಯಾಗುತ್ತಿದ್ದು, ಗ್ರಾಮದಲ್ಲಿ ಕುಡಿಯುವ ನೀರು ಬಿಡುವ ನೀರಗಂಟಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆಲವರು ಇದೇ ನೀರನ್ನು ಕುಡಿಯುತ್ತಿದ್ದಾರೆ. ಗ್ರಾಮದ ಜನತೆಗೆ ಗ್ರಾಪಂ ಆಡಳಿತ ಮಂಡಳಿಯವರು
ಶುದ್ಧೀಕರಿಸಿದ ಕುಡಿಯುವ ನೀರನ್ನು ಒದಗಿಸಬೇಕೆಂದು ಗ್ರಾಮದ ಮದಿರೆ ಸಿದ್ದಮ್ಮ, ಲಕ್ಷ್ಮೀ, ಹೇಮೇಶ್ವರ, ಹೊನ್ನೂರಮ್ಮ, ರಾಮಕ್ಕ, ಶ್ರೀದೇವಿ, ವೀರೇಶ್‌ ವಸಂತಮ್ಮ, ಮದಿರೆ ಹೊನ್ನೂರಮ್ಮ ಒತ್ತಾಯಿಸಿದರು.

ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ನೀರಿನ ಪೈಪ್‌ ಒಡೆದು ಚರಂಡಿ ನೀರು ಸೇರಿರುವ ಸಾಧ್ಯತೆಗಳಿದ್ದು ಇದನ್ನು ಪತ್ತೆ ಹಚ್ಚಿ ಪೈಪ್‌ಲೈನ್‌ ಸರಿಪಡಿಸಿ ಶುದ್ಧ
ಕುಡಿಯುವ ನೀರನ್ನು ಶೀಘ್ರವಾಗಿ ಬಿಡಲಾಗುವುದು. 
ಅಪರಂಜಿ, ಸುಗ್ಗೇನಹಳ್ಳಿ ಗ್ರಾಪಂ ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next