Advertisement

ವಾಹನ ಪಲ್ಟಿಯಾಗಿ ಹಲವರಿಗೆ ಗಾಯ: ಮಾನವೀಯತೆ ಮೆರೆದ ಶಾಸಕ ನಡಹಳ್ಳಿ

07:53 PM Oct 26, 2022 | Team Udayavani |

ಮುದ್ದೇಬಿಹಾಳ: ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದು15 ಜನರು ಗಾಯಗೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ.

Advertisement

ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಬೀರಪ್ಪನ ಬೆಟ್ಟದಲ್ಲಿ ದೀಪಾವಳಿ ಪಾಡ್ಯದಂದು ನಡೆದ ಜಾತ್ರೆ, ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಸ್ವಗ್ರಾಮದತ್ತ ಹೊರಟಿದ್ದ ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಉರುಳಿ ಬಿದ್ದು ಅದರಲ್ಲಿ ಇದ್ದ ಇಬ್ಬರು ಮಕ್ಕಳು, ಮೂವರು ವೃದ್ಧರು ಸೇರಿ ಒಟ್ಟು 15 ಜನರಿಗೆ ತೀವ್ರಸ್ವರೂಪದ ಮತ್ತು ಸಣ್ಣ ಪುಟ್ಟ ಗಾಯಗಳಾಗಿವೆ.

ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುತ್ತಿದ್ದ ಸ್ಥಳೀಯ ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿಯವರು ಗಾಯಾಳುಗಳನ್ನು ಆಸ್ಪತ್ರೆಗೆ ತಕ್ಷಣವೇ ಸಾಗಿಸಲು ತಮ್ಮ ಸರ್ಕಾರಿ ವಾಹನ ನೀಡಿದ್ದೂ ಅಲ್ಲದೆ ಗಾಯಾಳುಗಳ ಆರೈಕೆಗೆ ತಮ್ಮ ಆಪ್ತ ಸಹಾಯಕರು, ಆಪ್ತ ಸಿಬಂದಿ ಕಳುಹಿಸಿ ಮಾನವೀಯತೆ ಮೆರೆದರು.

ಎಲ್ಲರಿಗೂ ಮುದ್ದೇಬಿಹಾಳದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಮತ್ತು ತುರ್ತು ಚಿಕಿತ್ಸೆ ನೀಡಲಾಗಿದೆ. ಇಬ್ಬರು ಮಹಿಳೆಯರ ಕಾಲು ಮುರಿದಿದೆ‌ ಎಂದು‌‌ ಮೂಲಗಳು ತಿಳಿಸಿವೆ.‌ ಶಾಸಕರ‌ ಆಪ್ತ ಸಹಾಯಕ ಶಿವಾನಂದ‌ ಮೂಲಿಮನಿ, ಶಾಸಕರ‌ ಆಪ್ತರಾದ‌ ಪುರಸಭೆ ‌ಸದಸ್ಯೆ ಸಂಗಮ್ಮ‌ ದೇವರಳ್ಳಿ,‌ ಉದಯ ರಾಯಚೂರ‌ ಮತ್ತಿತರರು ಗಾಯಾಳುಗಳ ಆರೈಕೆ ಮಾಡುತ್ತಿದ್ದು ಆಸ್ಪತ್ರೆಯ ಸಿಬಂದಿ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next