Advertisement

ಬಾಲಿವುಡ್‌ನ‌ಲ್ಲಿ 7 ವರ್ಷ ಪೂರ್ತಿ ಮಾಡಿದ ಟೈಗರ್ ಶ್ರಾಫ್

08:26 AM May 24, 2021 | Team Udayavani |

ಬಾಲಿವುಡ್‌ ನಟ ಜಾಕಿ ಶ್ರಾಫ್ ಪುತ್ರ ಟೈಗರ್‌ ಶ್ರಾಫ್ ರವಿವಾರ ಬಾಲಿವುಡ್‌ಗೆ ಆಗಮಿಸಿ ಏಳು ವರ್ಷ ಪೂರ್ತಿಗೊಳಿಸಿದ್ದಾರೆ. ಅವರು “ಹೀರೋಪಂತಿ’ ಎಂಬ ಸಿನೆಮಾ ಮೂಲಕ ಹಿಂದಿ ಸಿನೆಮಾರಂಗಕ್ಕೆ ಕಾಲಿಟ್ಟಿದ್ದರು.

Advertisement

ಅವರ ಜತೆಗೆ ನಟಿ ಕೃತಿ ಸನನ್‌ ಕೂಡ ಹಿಂದಿ ಚಿತ್ರರಂಗಕ್ಕೆ ಬಂದು 7 ವರ್ಷಗಳು ಪೂರ್ತಿಯಾಗಿವೆ. ಕೃತಿ ಸನನ್‌ ಮತ್ತು ಟೈಗರ್ ಶ್ರಾಫ್ “ಗಣ್‌ಪತ್‌’ ಎಂಬ ಆ್ಯಕ್ಷನ್‌ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗ ಪ್ರವೇಶಕ್ಕೆ ಅವಕಾಶ ನೀಡಿದ ಚಿತ್ರದ ನಿರ್ಮಾಪಕ ಸಾಜಿದ್‌ ನಾಡಿಯಾಡ್‌ವಾಲಾಗೆ ಟೈಗರ್‌ ಶ್ರಾಫ್ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾಗಿ, ವಾರ್, ಬರೇಲಿ ಕಿ ಬರ್ಫಿ ಮುಂತಾದ ಚಿತ್ರಗಳಲ್ಲಿ ಟೈಗರ್ ಶ್ರಾಫ್ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next