Advertisement

PC George ಅವರ ಕೇರಳ ಜನಪಕ್ಷಂ ಬಿಜೆಪಿಯಲ್ಲಿ ವಿಲೀನ

08:08 PM Jan 31, 2024 | Team Udayavani |

ಹೊಸದಿಲ್ಲಿ: ಏಳು ಬಾರಿ ಕೇರಳದ ಶಾಸಕರಾಗಿದ್ದ ಪಿಸಿ ಜಾರ್ಜ್ ಅವರ ಕೇರಳ ಜನಪಕ್ಷಂ (ಜಾತ್ಯತೀತ) 2024 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯೊಂದಿಗೆ ಬುಧವಾರ ವಿಲೀನಗೊಂಡಿದೆ.

Advertisement

ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್, ವಿ. ಮುರಳೀಧರನ್, ಬಿಜೆಪಿ ನಾಯಕರಾದ ಪ್ರಕಾಶ್ ಜಾವಡೇಕರ್ ಮತ್ತು ಅನಿಲ್ ಆಂಟನಿ ಅವರು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಿಸಿ ಜಾರ್ಜ್ ಅವರನ್ನು ಬರಮಾಡಿಕೊಂಡರು.ಪಿಸಿ ಜಾರ್ಜ್ ಅವರ ಪುತ್ರ ಹಾಗೂ ಕೊಟ್ಟಾಯಂ ಜಿಲ್ಲಾ ಪಂಚಾಯತ್ ಸದಸ್ಯ ಶಾನ್ ಜಾರ್ಜ್ ಕೂಡ ಬಿಜೆಪಿಗೆ ಸೇರ್ಪಡೆಯಾದರು.

ಪಿಸಿ ಜಾರ್ಜ್ ಪ್ರವೇಶದಿಂದ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂಬ ಕಲ್ಪನೆಯನ್ನು ಹೋಗಲಾಡಿಸುತ್ತದೆ ಎಂದು ವಿ ಮುರಳೀಧರನ್ ಹೇಳಿದ್ದಾರೆ. ಇದು ಆರಂಭವಷ್ಟೇ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದು, ಭವಿಷ್ಯದಲ್ಲಿ ಕೇರಳದ ಇನ್ನಷ್ಟು ನಾಯಕರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ.

ಬಿಜೆಪಿಗೆ ಸೇರ್ಪಡೆಗೊಳ್ಳುವ ಬಲವಾದ ಆಂತರಿಕ ಬೇಡಿಕೆಯನ್ನು ಪ್ರತಿಬಿಂಬಿಸುವ ಎರಡು ತಿಂಗಳ ಪಕ್ಷದೊಳಗೆ ನಡೆದ ಚರ್ಚೆಯ ನಂತರ ಬಿಜೆಪಿಯೊಂದಿಗೆ ವಿಲೀನಗೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇರಳದ ಚರ್ಚ್‌ಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ನಂತರ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಎಂಬುದನ್ನು ತಮ್ಮ ಪಕ್ಷ ನಿರ್ಧರಿಸಲಿದೆ ಎಂದು ಪಿಸಿ ಜಾರ್ಜ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next