Advertisement

ಕೋವಿಡ್ ಅಟ್ಟಹಾಸ ನಿಯಂತ್ರಣಕ್ಕೆ ರಾಜಸ್ಥಾನದ ಭಿಲ್ವಾರ ದೇಶಕ್ಕೇ ಮಾದರಿ

01:29 AM Apr 09, 2020 | Hari Prasad |

ಭಿಲ್ವಾರ: ವಿಶ್ವಾದ್ಯಂತ ಈಗ ಕೋವಿಡ್ 19 ವೈರಸ್  ನದ್ದೇ ಮಾತು. ಅದರ ನಿಯಂತ್ರಣಕ್ಕಾಗಿ ಏ.14ರ ವರೆಗೆ ಲಾಕ್‌ ಡೌನ್‌ ಘೋಷಿಸಲಾಗಿದೆ. ರಾಜಸ್ಥಾನದ ಭಿಲ್ವಾರದಲ್ಲಿ ಅದನ್ನು ಯಾವ ರೀತಿ ಅನುಸರಿಸಿ ಯಶಸ್ವಿಯಾಗಿದೆ ಎನ್ನುವುದರ ಪಕ್ಷಿ ನೋಟ ಇಲ್ಲಿದೆ. ಕೇಂದ್ರ ಸರಕಾರ ಭಿಲ್ವಾರ ಮಾದರಿಯನ್ನು ಅನುಸರಿಸಲು ಮುಂದಾಗಿದೆ.

Advertisement

ಆರಂಭ ಕಳವಳಕಾರಿ
ಮಾ.30ರ ವೇಳೆಗೆ ಭಿಲ್ವಾರ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿದ ಸೋಂಕು ಪ್ರಕರಣ ಕಂಡುಬಂದಿತು. ಅಂದರೆ 18-26 ಕೇಸುಗಳು ಖಚಿತಪಟ್ಟವು. ಇದು ರಾಜಸ್ಥಾನ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿತು. ಖಾಸಗಿ ಆಸ್ಪತ್ರೆಯೊಂದರಲ್ಲಿನ 17 ಮಂದಿ ವೈದ್ಯರಿಗೆ ಸೋಂಕು ಕಂಡು ಬಂದಿತ್ತು. ಅಲ್ಲಿಂದಲೇ ಜಿಲ್ಲೆಗೆ ಹಬ್ಬಿದ್ದು ಖಚಿತವಾಗಿತ್ತು. ಅನಂತರ ಅದನ್ನು ಮುಚ್ಚಲಾಗಿದೆ. ವೈದ್ಯರು, ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಯಿತು.

ಅಲ್ಲಿ ಏನು ಮಾಡಲಾಗಿದೆ?

– ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದಿಂದ ಕಟ್ಟುನಿಟ್ಟಾಗಿ ಕರ್ಫ್ಯೂ ಮತ್ತು ಲಾಕ್‌ ಡೌನ್‌ ನಿಯಮ ಅನುಷ್ಠಾನ.

– ಸಮಗ್ರವಾಗಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಕ್ರಮ.

Advertisement

– ಮೊದಲ ಕ್ರಮದಲ್ಲಿ ಸಮುದಾಯ, ಕ್ಲಸ್ಟರ್‌ ಮಟ್ಟದಲ್ಲಿ ನಿರ್ದಾಕ್ಷಿಣ್ಯವಾಗಿ ತಪಾಸಣೆ. ಸೋಂಕು ಹಬ್ಬುವುದು ತಪ್ಪಿಸಲು ಕ್ರಮ.

– ಈ ಉದ್ದೇಶಕ್ಕಾಗಿ 3 ಸಾವಿರ ಮಂದಿ ಆರೋಗ್ಯ ಕಾರ್ಯಕರ್ತರ ನಿಯೋಜನೆ.

– ಎರಡನೇಯದ್ದಾಗಿ ಪಾಸಿಟಿವ್‌ ಕೇಸುಗಳ ಪತ್ತೆ ಮತ್ತು ಅವರು ಯಾರ ಜತೆಗೆ ಸಂಪರ್ಕ ಮಾಡಿದ್ದವರ ಪತ್ತೆ.

– ಮೂರನೇಯದ್ದು- ಭಿಲ್ವಾರ ನಗರದಿಂದ 1 ಕಿಮೀ ವಿಶೇಷ ವಲಯ ರಚನೆ. ಅಲ್ಲಿ ಸಮಗ್ರ ಸಮೀಕ್ಷೆ. 2,15,000 ಮನೆಗಳಲ್ಲಿರುವ 10 ಲಕ್ಷ ಮಂದಿಯನ್ನು ಸಂಪರ್ಕಿಸಲು 3 ಸಾವಿರ ತಂಡ ರಚನೆ.

ಸಂಪೂರ್ಣ ಲಾಕ್‌ ಡೌನ್‌

– ಮಾ.20ರಿಂದಲೇ ನಿಯಮಗಳಿದ್ದರೂ ಅನಂತರ ಬಿಗಿ ಕ್ರಮ.

– ಏ.3ರ ಅನಂತರ ಅಗತ್ಯ ವಸ್ತುಗಳನ್ನು ಮನೆಗೇ ಪೂರೈಕೆಗೆ ಕ್ರಮ.

– ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹೊಟೇಲ್‌ ವಶಕ್ಕೆ ಪಡೆದು ಕ್ವಾರಂಟೈನ್‌ ಕೇಂದ್ರ ಸ್ಥಾಪನೆ.

ಈಗಿನ ಸ್ಥಿತಿ ಏನು?

– ಮಾ.30ರಿಂದ ಏ.6ರ ವರೆಗಿನ ಅವಧಿಯಲ್ಲಿ ಒಂದೇ ಒಂದು ಪ್ರಕರಣ ದಾಖಲು

– ಜಿಲ್ಲೆಯಲ್ಲಿ ಒಟ್ಟು 27 ಕೇಸುಗಳು ದೃಢಪಟ್ಟಿದ್ದವು. ಈ ಪೈಕಿ 17 ಮಂದಿ ಗುಣಮುಖರಾಗಿದ್ದಾರೆ. 13 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ.

ಜಿಲ್ಲೆಯಾದ್ಯಂತ ಕ್ಷಿಪ್ರವಾಗಿ ಕರ್ಫ್ಯೂ, ಲಾಕ್‌ ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಯಿತು.
ಇತರ ಜಿಲ್ಲೆಗಳಿಗೆ ಸಂಪರ್ಕಿಸುವ ಗಡಿಯನ್ನು ಸೀಲ್‌ ಮಾಡಲಾಗಿದೆ. ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಯಿತು. ಇದರಿಂದಾಗಿಯೇ ಈ ಯಶಸ್ಸು ಸಿಕ್ಕಿದೆ.

– ರೋಹಿತ್‌ ಕುಮಾರ್‌ ಸಿಂಗ್‌, ರಾಜಸ್ಥಾನ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next