Advertisement
ಆಟದ ಸಾಮಗ್ರಿಗಳು: ಈ ಆಟವನ್ನು ಆಡಲು ಬೇಕಾಗಿರುವುದು ಒಂದು ಸಮತಟ್ಟಾದ ಮೈದಾನ ಹಾಗೂ 7 ಅಥವಾ 5 ಲಗೋರಿ ಕಾಯಿಗಳು. ಈಗ ಲಗೋರಿ ಕಾಯಿಗಳು ಕಣ್ಮರೆಯಾಗಿದ್ದು, ಅದರ ಬದಲು 7 ಸಮತಟ್ಟಾದ ಚಪ್ಪಟೆ ಆಕಾರದ ಕಲ್ಲುಗಳನ್ನು ಬಳಸಲಾಗುತ್ತದೆ. ಲಗೋರಿಯನ್ನು ಉರುಳಿಸಲು ಒಂಡು ರಬ್ಬರ್ ಚೆಂಡು ಬೇಕು.
ಎರಡು ತಂಡಗಳನ್ನು ಹುಡುಗರು ರಚಿಸಿಕೊಳ್ಳುತ್ತಾರೆ. ಪ್ರತಿ ತಂಡಕ್ಕೂ ಒಬ್ಬ ನಾಯಕನಿರುತ್ತಾರೆ. ತಂಡದ ನಾಯಕರಿಬ್ಬರು ಸೇರಿ ಟಾಸ್ ಹಾಕಿ, ಯಾರು ಮೊದಲು ಲಗೋರಿ ಉರುಳಿಸಬಹುದು ಎಂದು ನಿರ್ಧರಿಸು ತ್ತಾರೆ. ನಂತರ ನೆಲದಲ್ಲಿ ವೃತ್ತಾಕಾರದ ಗೆರೆ ಕೊರೆದು ಅದರಲ್ಲಿ 7 ಲಗೋರಿ ಕಾಯಿ ಅಥವಾ ಕಲ್ಲಿನ ಸಣ್ಣ ಚಪ್ಪಡಿಗಳನ್ನು ಒಂದರ ಮೇಲೊಂದರಂತೆ ಜೋಡಿಸುತ್ತಾರೆ. ಹೀಗೆ ಜೋಡಿಸಿದ ಕಲ್ಲಿನಿಂದ ಸ್ವಲ್ಪ ದೂರದಲ್ಲಿ ಒಂದು ಗೆರೆಯನ್ನು ಎಳೆಯಬೇಕು. ಆ ಸ್ಥಳದಲ್ಲಿ ನಿಂತು ಚೆಂಡಿನಿಂದ ಲಗೋರಿ
ಕಾಯಿಗಳಿಗೆ ಹೊಡೆಯಬೇಕು. ಪ್ರತಿಯೊಬ್ಬ ಆಟಗಾರನಿಗೂ ಲಗೋರಿ ಉರುಳಿಸಲು 3 ಅವಕಾಶವಿರುತ್ತದೆ. ಈ 3 ಎಸೆತದಲ್ಲಿ ಲಗೋರಿ ಉರುಳಿಸಲು ವಿಫಲವಾದರೆ, ಅದೇ ತಂಡದ ಮತ್ತೂಬ್ಬನಿಗೆ ಆಡುವ ಅವಕಾಶ. ಲಗೋರಿ ಬೀಳಿಸಲು ಚೆಂಡನ್ನು ಎಸೆದಾಗ ಆ ಚೆಂಡು ಲಗೋರಿ ಉರುಳಿಸದೇ ನೆಲದಿಂದ ಪುಟಿದಾಗ, ಎದುರಾಳಿ ತಂಡದವರು ಅದನ್ನು ಕ್ಯಾಚ್ ಹಿಡಿದರೆ, ಆಗ ಚೆಂಡನ್ನು ಎಸೆದ ಆಟಗಾರ ಆಟದಿಂದ ಹೊರಕ್ಕೆ. ಆಗಲೂ ಅದೇ ತಂಡದ ಮುಂದಿನವನಿಗೆ ಆಡುವ ಅವಕಾಶ ಸಿಗುತ್ತದೆ. ಎದುರಾಳಿ ತಂಡದವರು ಎಸೆದ ಚೆಂಡನ್ನು ಬೆನ್ನಿಗೆ ತಾಗಿಸಿಕೊಳ್ಳದೇ ಲಗೋರಿಗಳನ್ನು ಮತ್ತೆ ಒಂದರ ಮೋಲೊಂದರಂತೆ ಜೋಡಿಸಿದರೆ, ಅವರಿಗೆ 1 ಅಂಕ. ಹೀಗೆ ಆಟ ಮುಂದುವರಿಯುತ್ತದೆ. ದೈಹಿಕ ವ್ಯಾಯಾಮ ಹಾಗೂ ಏಕಾಗ್ರತೆ ಹೆಚ್ಚಿಸಲು ಸಹಾಯವಾಗಿದ್ದ ಈ ಕ್ರೀಡೆ, ಇತ್ತೀಚೆಗೆ
ಮರೆಯಾಗುತ್ತಿದೆ.
Related Articles
Advertisement