Advertisement

Seven Star India: ಪಾಕಿಸ್ಥಾನ ವಿರುದ್ಧ 7-0 ಅಜೇಯ ಓಟ

11:24 PM Oct 13, 2023 | Team Udayavani |

ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ 1975ರಲ್ಲಿ ಆರಂಭಗೊಂಡಿತಾದರೂ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ಥಾನ ತಂಡ ಗಳು ಮೊದಲ ಸಲ ಮುಖಾಮುಖೀಯಾದದ್ದು 1992ರಲ್ಲಿ ಎಂಬುದನ್ನು ಗಮನಿಸಬೇಕು. 1983ರಲ್ಲಿ ಕಪಿಲ್‌ದೇವ್‌ ಬಳಗ ವಿಶ್ವಕಪ್‌ ಎತ್ತುವ ಸಂದರ್ಭದಲ್ಲೂ ಇತ್ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿರಲಿಲ್ಲ. ಭಾರತ, ಪಾಕ್‌ ಬೇರೆ ಬೇರೆ ವಿಭಾಗಗಳಲ್ಲಿದ್ದವು. ನಾಕೌಟ್‌ನಲ್ಲೂ ಎದುರಾಗುವ ಸಂದರ್ಭ ಒದಗಿ ಬರಲಿಲ್ಲ.

Advertisement

1987ರ ತವರಿನ ಆತಿಥ್ಯದ ವೇಳೆ ಭಾರತ- ಪಾಕಿಸ್ಥಾನ ನಡುವೆ ಫೈನಲ್‌ ಪಕ್ಕಾ ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲೇ ಎಡವಿ ಹೊರಬಿದ್ದವು.

ಸಿಡ್ನಿಯಲ್ಲಿ ಮೊದಲ ಪಂದ್ಯ
ಭಾರತ-ಪಾಕಿಸ್ಥಾನ 1992ರ ವಿಶ್ವಕಪ್‌ನಲ್ಲಿ ಎದುರಾಗಲೇಬೇಕಿತ್ತು. ಏಕೆಂದರೆ ಇದೊಂದು ರೌಂಡ್‌ ರಾಬಿನ್‌ ಲೀಗ್‌ ಮುಖಾಮುಖೀ ಆಗಿತ್ತು. ಅಂದು ಇಮ್ರಾನ್‌ ಖಾನ್‌ ಸಾರಥ್ಯದ ಪಾಕಿಸ್ಥಾನ ಮೊದಲ ಸಲ ವಿಶ್ವಕಪ್‌ ಎತ್ತಿ ಸಂಭ್ರಮಿಸಿತು. ಆದರೆ ಲೀಗ್‌ ಹಂತದಲ್ಲಿ ಅ ಭಾರತಕ್ಕೆ 43 ರನ್ನುಗಳಿಂದ ಶರಣಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಇದು ಸಿಡ್ನಿಯಲ್ಲಿ ನಡೆದ ಮುಖಾಮುಖಿ. ಅಜರುದ್ದೀನ್‌ ನೇತೃತ್ವದ ಭಾರತ 49 ಓವರ್‌ಗಳಲ್ಲಿ ಗಳಿಸಿದ್ದು 7ಕ್ಕೆ 216 ರನ್‌ ಮಾತ್ರ. ಪಾಕಿಸ್ಥಾನ 48.1 ಓವರ್‌ಗಳಲ್ಲಿ 173ಕ್ಕೆ ಕುಸಿಯಿತು. 54 ರನ್‌ ಮಾಡಿದ ತೆಂಡುಲ್ಕರ್‌ ಭಾರತದ ಟಾಪ್‌ ಸ್ಕೋರರ್‌ ಆಗಿದ್ದರು. ಪಾಕ್‌ ಪರ ಅಮೀರ್‌ ಸೊಹೈಲ್‌ 62 ರನ್‌ ಹೊಡೆದರು. ಕಪಿಲ್‌, ಪ್ರಭಾಕರ್‌, ಶ್ರೀನಾಥ್‌ ತಲಾ 2 ವಿಕೆಟ್‌ ಉರುಳಿಸಿದರು.ಅಂದಹಾಗೆ, ಕೀಪರ್‌ ಕಿರಣ್‌ ಮೋರೆ ಅವರನ್ನು ಅಣಕಿಸಲು ಜಾವೇದ್‌ ಮಿಯಾಂದಾದ್‌ ಮಂಗನಂತೆ ಕುಣಿದದ್ದು ಇದೇ ಪಂದ್ಯದಲ್ಲಿ!

ಬೆಂಗಳೂರು ಕ್ವಾರ್ಟರ್‌ ಫೈನಲ್‌
1996ರ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ- ಪಾಕಿಸ್ಥಾನ ತಂಡಗಳು ಬೆಂಗಳೂರಿನಲ್ಲಿ ಎದುರಾದವು. ಭಾರತ 8ಕ್ಕೆ 287 ರನ್‌ ಬಾರಿಸಿದರೆ, ಪಾಕ್‌ 49 ಓವರ್‌ಗಳಲ್ಲಿ 248ಕ್ಕೆ ಉರುಳಿತು. ಈ ಪಂದ್ಯದಲ್ಲಿ ಕಿರಿಕ್‌ ಮಾಡಿದವರು ಆರಂಭಕಾರ ಅಮೀರ್‌ ಸೊಹೈಲ್‌. ತವರಿನ ಬೌಲರ್‌ ವೆಂಕಟೇಶ ಪ್ರಸಾದ್‌ಗೆ ಅದೇನೋ ಸನ್ನೆ ಮಾಡಿ ರೊಚ್ಚಿಗೆ ಬ್ಬಿಸಿದರು. ಪ್ರಸಾದ್‌ ಮುಂದಿನ ಎಸೆತದಲ್ಲೇ ಸೊಹೈಲ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿ ಸೇಡು ತೀರಿಸಿಕೊಂಡರು. ಈ ಒಂದು ಸಾಧನೆ ಗಾಗಿಯೇ ಪ್ರಸಾದ್‌ ಮನೆತುಂಬ ಅಭಿಮಾನಿಗಳು ನೀಡಿದ ಉಡುಗೊರೆ ರಾಶಿ ತುಂಬಿತ್ತು. ಸಿದ್ಧು ಅಂದಿನ ಪಂದ್ಯದ ಟಾಪ್‌ ಸ್ಕೋರರ್‌ (93). ಕುಂಬ್ಳೆ ಮತ್ತು ಪ್ರಸಾದ್‌ ತಲಾ 3 ವಿಕೆಟ್‌ ಕಿತ್ತರು.

Advertisement

ಸೂಪರ್‌ ಸಿಕ್ಸ್‌ ಸಮರ
1999ರ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ಸೂಪರ್‌ ಸಿಕ್ಸ್‌ ಹಂತದಲ್ಲಿ ಎದುರಾದವು. ಪಂದ್ಯದ ತಾಣ ಮ್ಯಾಂಚೆಸ್ಟರ್‌. ಭಾರತ 6ಕ್ಕೆ 227 ರನ್ನುಗಳ ಸಾಮಾನ್ಯ ಮೊತ್ತ ಪೇರಿಸಿಯೂ ಇದನ್ನು ಉಳಿಸಿಕೊಂಡಿತು. ಪಾಕ್‌ 180ಕ್ಕೆ ಕುಸಿಯಿತು. ವೆಂಕಟೇಶ ಪ್ರಸಾದ್‌ 27ಕ್ಕೆ 5 ವಿಕೆಟ್‌ ಉಡಾಯಿಸಿ ಭಾರತದ ಗೆಲುವಿನ ಹೀರೋ ಎನಿಸಿಕೊಂಡರು. ಬ್ಯಾಟಿಂಗ್‌ನಲ್ಲಿ ಮಿಂಚಿದವರೆಂದರೆ ದ್ರಾವಿಡ್‌ (67) ಮತ್ತು ಅಜರುದ್ದೀನ್‌ (59). ಇದರೊಂದಿಗೆ ವಿಶ್ವಕಪ್‌ನಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಗೆಲುವಿನ ಹ್ಯಾಟ್ರಿಕ್‌ ಪೂರೈಸಿತು.

ಸೆಂಚುರಿಯನ್‌ ಮಿಂಚು
ಭಾರತ-ಪಾಕ್‌ 2003ರ ವಿಶ್ವಕಪ್‌ನಲ್ಲಿ ಒಂದೇ ಬಣದಲ್ಲಿದ್ದವು. ಹೀಗಾಗಿ ಲೀಗ್‌ನಲ್ಲೇ ಮುಖಾಮುಖೀಯಾದವು. ಸೆಂಚುರಿಯನ್‌ನಲ್ಲಿ ನಡೆದ ಈ ಕ್ರಿಕೆಟ್‌ ಸಮರವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿತು.

ಇದು ದೊಡ್ಡ ಮೊತ್ತದ ಮೇಲಾಟವಾಗಿತ್ತು. ಸಯೀದ್‌ ಅನ್ವರ್‌ ಶತಕ ಬಾರಿಸಿ (101) ಪಾಕ್‌ ಮೊತ್ತವನ್ನು 7ಕ್ಕೆ 273ರ ತನಕ ಏರಿಸಿದರು. ಭಾರತ 45.4 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 276 ರನ್‌ ಬಾರಿಸಿ ಸತತ 4ನೇ ಜಯಭೇರಿ ಮೊಳಗಿಸಿತು. ಸಚಿನ್‌ ತೆಂಡುಲ್ಕರ್‌ 98 ರನ್‌, ಯುವರಾಜ್‌ ಸಿಂಗ್‌ ಅಜೇಯ 50 ರನ್‌ ಮಾಡಿ ಭಾರತದ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿದರು. ಸಚಿನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

ಮೊಹಾಲಿ ಮೇಲಾಟ
2007ರ ವೆಸ್ಟ್‌ ಇಂಡೀಸ್‌ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಬೇಗನೇ ಹೊರಬಿದ್ದ ಕಾರಣ ಎದುರಾಗಲಿಲ್ಲ. ಒಂದು ಬ್ರೇಕ್‌ ಬಳಿಕ 2011ರ ಮೊಹಾಲಿ ಸೆಮಿಫೈನಲ್‌ನಲ್ಲಿ ಕಣಕ್ಕಿಳಿದವು. 29 ರನ್ನುಗಳಿಂದ ಗೆದ್ದು ಬಂದ ಧೋನಿ ಪಡೆ ಪಾಕಿಸ್ಥಾನವನ್ನು ಅಲ್ಲಿಂದಲೇ ತವರಿಗೆ ಅಟ್ಟಿತು.
ಭಾರತ ಗಳಿಸಿದ್ದು 9ಕ್ಕೆ 260 ರನ್‌. ಕೊನೆಯ ವಿಶ್ವಕಪ್‌ ಆಡಲಿಳಿದಿದ್ದ ತೆಂಡುಲ್ಕರ್‌ ಸರ್ವಾಧಿಕ 85 ರನ್‌ ಬಾರಿಸಿ ಮತ್ತೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪಾಕ್‌ ಪಡೆ ಭಾರತದ ಸಾಂ ಕ ಬೌಲಿಂಗ್‌ ಆಕ್ರಮಣಕ್ಕೆ ನಲುಗಿತು. ನೆಹ್ರಾ, ಮುನಾಫ್, ಹರ್ಭಜನ್‌, ಯುವರಾಜ್‌, ಜಹೀರ್‌ ತಲಾ 2 ವಿಕೆಟ್‌ ಕೆಡವಿದರು. ಪಾಕ್‌ 231ಕ್ಕೆ ತನ್ನ ಇನ್ನಿಂಗ್ಸ್‌ ಮುಗಿಸಿತು.

ಅಡಿಲೇಡ್‌ ಅಬ್ಬರ
2015ರ ವಿಶ್ವಕಪ್‌ ವೇಳೆ ಇತ್ತಂಡಗಳು “ಬಿ’ ವಿಭಾಗದಲ್ಲಿದ್ದವು. ವಿರಾಟ್‌ ಕೊಹ್ಲಿ ಅವರ ಆಕರ್ಷಕ ಶತಕ (107) ಸಾಹಸದಿಂದ ಭಾರತ 7ಕ್ಕೆ ಭರ್ತಿ 300 ರನ್‌ ಪೇರಿಸಿತು. ಶಿಖರ್‌ ಧವನ್‌ 73 ರನ್‌ ಹೊಡೆದರು. ಪಾಕಿಸ್ಥಾನ ಮೊಹಮ್ಮದ್‌ ಶಮಿ ದಾಳಿಗೆ ದಿಕ್ಕು ತಪ್ಪಿತು (35ಕ್ಕೆ 4). 47 ಓವರ್‌ಗಳಲ್ಲಿ 224ಕ್ಕೆ ಸರ್ವಪತನ ಕಂಡು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಸತತ 6ನೇ ಸೋಲನುಭವಿಸಿತು. ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಮ್ಯಾಂಚೆಸ್ಟರ್‌ ಮೇಲಾಟ
2019ರ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ಲೀಗ್‌ ಹಂತದಲ್ಲಿ ಎದುರಾದವು. ಈ ಮ್ಯಾಂಚೆಸ್ಟರ್‌ ಮೇಲಾಟದಲ್ಲಿ ರೋಹಿತ್‌ ಶರ್ಮ ಅಬ್ಬರಿಸಿ ನಿಂತರು (140). ಕೊಹ್ಲಿ (77), ರಾಹುಲ್‌ (57) ಅರ್ಧ ಶತಕ ಬಾರಿಸಿದರು. ಸ್ಕೋರ್‌ 5ಕ್ಕೆ 336ರ ತನಕ ಏರಿತು. ಆದರೆ ಮಳೆಯಿಂದಾಗಿ ಚೇಸಿಂಗ್‌ ವೇಳೆ ಪಾಕ್‌ 40 ಓವರ್‌ಗಳಲ್ಲಿ 6ಕ್ಕೆ 212 ರನ್‌ ಮಾಡಿ 89 ರನ್‌ ಅಂತರದ ಸೋಲನುಭವಿಸಿತು. ಪಾಕಿಗೆ ಸತತ 7ನೇ ಏಟು ಬಿದ್ದಿತ್ತು. ರೋಹಿತ್‌ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ 1975ರಲ್ಲಿ ಆರಂಭಗೊಂಡಿತಾದರೂ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ಥಾನ ತಂಡ ಗಳು ಮೊದಲ ಸಲ ಮುಖಾಮುಖೀಯಾದದ್ದು 1992ರಲ್ಲಿ ಎಂಬುದನ್ನು ಗಮನಿಸಬೇಕು. 1983ರಲ್ಲಿ ಕಪಿಲ್‌ದೇವ್‌ ಬಳಗ ವಿಶ್ವಕಪ್‌ ಎತ್ತುವ ಸಂದರ್ಭದಲ್ಲೂ ಇತ್ತಂಡಗಳ ನಡುವೆ ಸ್ಪರ್ಧೆ ಏರ್ಪಟ್ಟಿರಲಿಲ್ಲ. ಭಾರತ, ಪಾಕ್‌ ಬೇರೆ ಬೇರೆ ವಿಭಾಗಗಳಲ್ಲಿದ್ದವು. ನಾಕೌಟ್‌ನಲ್ಲೂ ಎದುರಾಗುವ ಸಂದರ್ಭ ಒದಗಿ ಬರಲಿಲ್ಲ.

1987ರ ತವರಿನ ಆತಿಥ್ಯದ ವೇಳೆ ಭಾರತ- ಪಾಕಿಸ್ಥಾನ ನಡುವೆ ಫೈನಲ್‌ ಪಕ್ಕಾ ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಎರಡೂ ತಂಡಗಳು ಸೆಮಿಫೈನಲ್‌ನಲ್ಲೇ ಎಡವಿ ಹೊರಬಿದ್ದವು.

ಸಿಡ್ನಿಯಲ್ಲಿ ಮೊದಲ ಪಂದ್ಯ
ಭಾರತ-ಪಾಕಿಸ್ಥಾನ 1992ರ ವಿಶ್ವಕಪ್‌ನಲ್ಲಿ ಎದುರಾಗಲೇಬೇಕಿತ್ತು. ಏಕೆಂದರೆ ಇದೊಂದು ರೌಂಡ್‌ ರಾಬಿನ್‌ ಲೀಗ್‌ ಮುಖಾಮುಖೀ ಆಗಿತ್ತು. ಅಂದು ಇಮ್ರಾನ್‌ ಖಾನ್‌ ಸಾರಥ್ಯದ ಪಾಕಿಸ್ಥಾನ ಮೊದಲ ಸಲ ವಿಶ್ವಕಪ್‌ ಎತ್ತಿ ಸಂಭ್ರಮಿಸಿತು. ಆದರೆ ಲೀಗ್‌ ಹಂತದಲ್ಲಿ ಅ ಭಾರತಕ್ಕೆ 43 ರನ್ನುಗಳಿಂದ ಶರಣಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಇದು ಸಿಡ್ನಿಯಲ್ಲಿ ನಡೆದ ಮುಖಾಮುಖಿ. ಅಜರುದ್ದೀನ್‌ ನೇತೃತ್ವದ ಭಾರತ 49 ಓವರ್‌ಗಳಲ್ಲಿ ಗಳಿಸಿದ್ದು 7ಕ್ಕೆ 216 ರನ್‌ ಮಾತ್ರ. ಪಾಕಿಸ್ಥಾನ 48.1 ಓವರ್‌ಗಳಲ್ಲಿ 173ಕ್ಕೆ ಕುಸಿಯಿತು. 54 ರನ್‌ ಮಾಡಿದ ತೆಂಡುಲ್ಕರ್‌ ಭಾರತದ ಟಾಪ್‌ ಸ್ಕೋರರ್‌ ಆಗಿದ್ದರು. ಪಾಕ್‌ ಪರ ಅಮೀರ್‌ ಸೊಹೈಲ್‌ 62 ರನ್‌ ಹೊಡೆದರು. ಕಪಿಲ್‌, ಪ್ರಭಾಕರ್‌, ಶ್ರೀನಾಥ್‌ ತಲಾ 2 ವಿಕೆಟ್‌ ಉರುಳಿಸಿದರು.ಅಂದಹಾಗೆ, ಕೀಪರ್‌ ಕಿರಣ್‌ ಮೋರೆ ಅವರನ್ನು ಅಣಕಿಸಲು ಜಾವೇದ್‌ ಮಿಯಾಂದಾದ್‌ ಮಂಗನಂತೆ ಕುಣಿದದ್ದು ಇದೇ ಪಂದ್ಯದಲ್ಲಿ!

ಬೆಂಗಳೂರು ಕ್ವಾರ್ಟರ್‌ ಫೈನಲ್‌
1996ರ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ- ಪಾಕಿಸ್ಥಾನ ತಂಡಗಳು ಬೆಂಗಳೂರಿನಲ್ಲಿ ಎದುರಾದವು. ಭಾರತ 8ಕ್ಕೆ 287 ರನ್‌ ಬಾರಿಸಿದರೆ, ಪಾಕ್‌ 49 ಓವರ್‌ಗಳಲ್ಲಿ 248ಕ್ಕೆ ಉರುಳಿತು. ಈ ಪಂದ್ಯದಲ್ಲಿ ಕಿರಿಕ್‌ ಮಾಡಿದವರು ಆರಂಭಕಾರ ಅಮೀರ್‌ ಸೊಹೈಲ್‌. ತವರಿನ ಬೌಲರ್‌ ವೆಂಕಟೇಶ ಪ್ರಸಾದ್‌ಗೆ ಅದೇನೋ ಸನ್ನೆ ಮಾಡಿ ರೊಚ್ಚಿಗೆ ಬ್ಬಿಸಿದರು. ಪ್ರಸಾದ್‌ ಮುಂದಿನ ಎಸೆತದಲ್ಲೇ ಸೊಹೈಲ್‌ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿ ಸೇಡು ತೀರಿಸಿಕೊಂಡರು. ಈ ಒಂದು ಸಾಧನೆ ಗಾಗಿಯೇ ಪ್ರಸಾದ್‌ ಮನೆತುಂಬ ಅಭಿಮಾನಿಗಳು ನೀಡಿದ ಉಡುಗೊರೆ ರಾಶಿ ತುಂಬಿತ್ತು. ಸಿದ್ಧು ಅಂದಿನ ಪಂದ್ಯದ ಟಾಪ್‌ ಸ್ಕೋರರ್‌ (93). ಕುಂಬ್ಳೆ ಮತ್ತು ಪ್ರಸಾದ್‌ ತಲಾ 3 ವಿಕೆಟ್‌ ಕಿತ್ತರು.

ಸೂಪರ್‌ ಸಿಕ್ಸ್‌ ಸಮರ
1999ರ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ಸೂಪರ್‌ ಸಿಕ್ಸ್‌ ಹಂತದಲ್ಲಿ ಎದುರಾದವು. ಪಂದ್ಯದ ತಾಣ ಮ್ಯಾಂಚೆಸ್ಟರ್‌. ಭಾರತ 6ಕ್ಕೆ 227 ರನ್ನುಗಳ ಸಾಮಾನ್ಯ ಮೊತ್ತ ಪೇರಿಸಿಯೂ ಇದನ್ನು ಉಳಿಸಿಕೊಂಡಿತು. ಪಾಕ್‌ 180ಕ್ಕೆ ಕುಸಿಯಿತು. ವೆಂಕಟೇಶ ಪ್ರಸಾದ್‌ 27ಕ್ಕೆ 5 ವಿಕೆಟ್‌ ಉಡಾಯಿಸಿ ಭಾರತದ ಗೆಲುವಿನ ಹೀರೋ ಎನಿಸಿಕೊಂಡರು. ಬ್ಯಾಟಿಂಗ್‌ನಲ್ಲಿ ಮಿಂಚಿದವರೆಂದರೆ ದ್ರಾವಿಡ್‌ (67) ಮತ್ತು ಅಜರುದ್ದೀನ್‌ (59). ಇದರೊಂದಿಗೆ ವಿಶ್ವಕಪ್‌ನಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಗೆಲುವಿನ ಹ್ಯಾಟ್ರಿಕ್‌ ಪೂರೈಸಿತು.

ಸೆಂಚುರಿಯನ್‌ ಮಿಂಚು
ಭಾರತ-ಪಾಕ್‌ 2003ರ ವಿಶ್ವಕಪ್‌ನಲ್ಲಿ ಒಂದೇ ಬಣದಲ್ಲಿದ್ದವು. ಹೀಗಾಗಿ ಲೀಗ್‌ನಲ್ಲೇ ಮುಖಾಮುಖೀಯಾದವು. ಸೆಂಚುರಿಯನ್‌ನಲ್ಲಿ ನಡೆದ ಈ ಕ್ರಿಕೆಟ್‌ ಸಮರವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿತು.

ಇದು ದೊಡ್ಡ ಮೊತ್ತದ ಮೇಲಾಟವಾಗಿತ್ತು. ಸಯೀದ್‌ ಅನ್ವರ್‌ ಶತಕ ಬಾರಿಸಿ (101) ಪಾಕ್‌ ಮೊತ್ತವನ್ನು 7ಕ್ಕೆ 273ರ ತನಕ ಏರಿಸಿದರು. ಭಾರತ 45.4 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ 276 ರನ್‌ ಬಾರಿಸಿ ಸತತ 4ನೇ ಜಯಭೇರಿ ಮೊಳಗಿಸಿತು. ಸಚಿನ್‌ ತೆಂಡುಲ್ಕರ್‌ 98 ರನ್‌, ಯುವರಾಜ್‌ ಸಿಂಗ್‌ ಅಜೇಯ 50 ರನ್‌ ಮಾಡಿ ಭಾರತದ ಚೇಸಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿದರು. ಸಚಿನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

ಮೊಹಾಲಿ ಮೇಲಾಟ
2007ರ ವೆಸ್ಟ್‌ ಇಂಡೀಸ್‌ ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಬೇಗನೇ ಹೊರಬಿದ್ದ ಕಾರಣ ಎದುರಾಗಲಿಲ್ಲ. ಒಂದು ಬ್ರೇಕ್‌ ಬಳಿಕ 2011ರ ಮೊಹಾಲಿ ಸೆಮಿಫೈನಲ್‌ನಲ್ಲಿ ಕಣಕ್ಕಿಳಿದವು. 29 ರನ್ನುಗಳಿಂದ ಗೆದ್ದು ಬಂದ ಧೋನಿ ಪಡೆ ಪಾಕಿಸ್ಥಾನವನ್ನು ಅಲ್ಲಿಂದಲೇ ತವರಿಗೆ ಅಟ್ಟಿತು.
ಭಾರತ ಗಳಿಸಿದ್ದು 9ಕ್ಕೆ 260 ರನ್‌. ಕೊನೆಯ ವಿಶ್ವಕಪ್‌ ಆಡಲಿಳಿದಿದ್ದ ತೆಂಡುಲ್ಕರ್‌ ಸರ್ವಾಧಿಕ 85 ರನ್‌ ಬಾರಿಸಿ ಮತ್ತೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪಾಕ್‌ ಪಡೆ ಭಾರತದ ಸಾಂ ಕ ಬೌಲಿಂಗ್‌ ಆಕ್ರಮಣಕ್ಕೆ ನಲುಗಿತು. ನೆಹ್ರಾ, ಮುನಾಫ್, ಹರ್ಭಜನ್‌, ಯುವರಾಜ್‌, ಜಹೀರ್‌ ತಲಾ 2 ವಿಕೆಟ್‌ ಕೆಡವಿದರು. ಪಾಕ್‌ 231ಕ್ಕೆ ತನ್ನ ಇನ್ನಿಂಗ್ಸ್‌ ಮುಗಿಸಿತು.

ಅಡಿಲೇಡ್‌ ಅಬ್ಬರ
2015ರ ವಿಶ್ವಕಪ್‌ ವೇಳೆ ಇತ್ತಂಡಗಳು “ಬಿ’ ವಿಭಾಗದಲ್ಲಿದ್ದವು. ವಿರಾಟ್‌ ಕೊಹ್ಲಿ ಅವರ ಆಕರ್ಷಕ ಶತಕ (107) ಸಾಹಸದಿಂದ ಭಾರತ 7ಕ್ಕೆ ಭರ್ತಿ 300 ರನ್‌ ಪೇರಿಸಿತು. ಶಿಖರ್‌ ಧವನ್‌ 73 ರನ್‌ ಹೊಡೆದರು. ಪಾಕಿಸ್ಥಾನ ಮೊಹಮ್ಮದ್‌ ಶಮಿ ದಾಳಿಗೆ ದಿಕ್ಕು ತಪ್ಪಿತು (35ಕ್ಕೆ 4). 47 ಓವರ್‌ಗಳಲ್ಲಿ 224ಕ್ಕೆ ಸರ್ವಪತನ ಕಂಡು ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಸತತ 6ನೇ ಸೋಲನುಭವಿಸಿತು. ಕೊಹ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಮ್ಯಾಂಚೆಸ್ಟರ್‌ ಮೇಲಾಟ
2019ರ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ ಲೀಗ್‌ ಹಂತದಲ್ಲಿ ಎದುರಾದವು. ಈ ಮ್ಯಾಂಚೆಸ್ಟರ್‌ ಮೇಲಾಟದಲ್ಲಿ ರೋಹಿತ್‌ ಶರ್ಮ ಅಬ್ಬರಿಸಿ ನಿಂತರು (140). ಕೊಹ್ಲಿ (77), ರಾಹುಲ್‌ (57) ಅರ್ಧ ಶತಕ ಬಾರಿಸಿದರು. ಸ್ಕೋರ್‌ 5ಕ್ಕೆ 336ರ ತನಕ ಏರಿತು. ಆದರೆ ಮಳೆಯಿಂದಾಗಿ ಚೇಸಿಂಗ್‌ ವೇಳೆ ಪಾಕ್‌ 40 ಓವರ್‌ಗಳಲ್ಲಿ 6ಕ್ಕೆ 212 ರನ್‌ ಮಾಡಿ 89 ರನ್‌ ಅಂತರದ ಸೋಲನುಭವಿಸಿತು. ಪಾಕಿಗೆ ಸತತ 7ನೇ ಏಟು ಬಿದ್ದಿತ್ತು. ರೋಹಿತ್‌ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

Advertisement

Udayavani is now on Telegram. Click here to join our channel and stay updated with the latest news.

Next