Advertisement

ಏಳು ನರ್ಸಿಂಗ್‌ ಕಾಲೇಜುಗಳಿಗೆ ಮಾನ್ಯತೆಯಿಲ್ಲ

06:07 AM Jan 25, 2019 | |

ಬೆಂಗಳೂರು: ನಕಲಿ ಅಂಕಪಟ್ಟಿ ವಿತರಣೆ ಹಗರಣಗಳಲ್ಲಿ ಸಿಲುಕಿರುವ ಏಳು ನರ್ಸಿಂಗ್‌ ಹಾಗೂ ಅನ್ವಯಿಕ ವಿಜ್ಞಾನ ಕೋರ್ಸ್‌ ನೀಡುತ್ತಿರುವ ಕಾಲೇಜುಗಳಿಗೆ ಮಾನ್ಯತೆ ನೀಡುವುದಿಲ್ಲ. ಈ ಕಾಲೇಜುಗಳಿಗೆ ಸೇರಿಕೊಳ್ಳದಂತೆ ವಿದ್ಯಾರ್ಥಿಗಳಿಗೂ ಅರಿವು ಮೂಡಿಸುತ್ತಿದ್ದೇವೆ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಸಚ್ಚಿದಾನಂದ ಹೇಳಿದರು.

Advertisement

ವಿವಿ ಆವರಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಕಲಿ ಅಂಕಪಟ್ಟಿ ವಿತರಣೆ ಸಂಬಂಧ ಏಳು ನರ್ಸಿಂಗ್‌ ಹಾಗೂ ಅನ್ವಯಿಕ ವಿಜ್ಞಾನ ಕೋರ್ಸ್‌ ನೀಡುವ ಕಾಲೇಜುಗಳಿಗೆ ನೋಟಿಸ್‌ ನೀಡಲಾಗಿದೆ. ಆ ಕಾಲೇಜುಗಳಿಗೆ ಮಾನ್ಯತೆ ನೀಡದೆ ಇರುವ ಬಗ್ಗೆಯೂ ಸಿಂಡಿಕೇಟ್‌ನಲ್ಲಿ ನಿರ್ಧರಿಸಲಾಗಿದೆ. ಪ್ರವೇಶ ಪ್ರಕ್ರಿಯೆ ನಡೆಸದಂತೆ ಕಾಲೇಜುಗಳಿಗೆ ಸೂಚಿಸಿದ್ದು, ವಿದ್ಯಾರ್ಥಿಗಳ ಮಾಹಿತಿಗಾಗಿ ಸಾರ್ವಜನಿಕ ಪ್ರಕಟಣೆ ನೀಡಿದ್ದೇವೆ ಎಂದು ವಿವರಿಸಿದರು.

ಬೆತೆಲ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸಸ್‌, ಬೆತೆಲ್‌ ಕಾಲೇಜ್‌ ಆಫ್ ಫಿಜಿಯೋಥೆರಪಿ, ಹಾಸ್‌ಮ್ಯಾಟ್‌ ಕಾಲೇಜ್‌ ಆಫ್ ನರ್ಸಿಂಗ್‌, ಹಾಸ್‌ಮ್ಯಾಟ್‌ ಕಾಲೇಜ್‌ ಆಫ್ ಫಿಜಿಯೋಥೆರಪಿ ಮತ್ತು ಶಿಕ್ಷಣ ಸಂಸ್ಥೆಗಳು, ಗಾಯತ್ರಿದೇವಿ ಕಾಲೇಜ್‌ ಆಫ್ ನರ್ಸಿಂಗ್‌, ಪಾನ್‌ ಏಷಿಯಾ ಕಾಲೇಜ್‌ ಆಫ್ ನರ್ಸಿಂಗ್‌ ಕಾಲೇಜುಗಳು ಮಾನ್ಯತೆ ಕಳೆದುಕೊಂಡಲ್ಲಿ ಸುಮಾರು 350 ನರ್ಸಿಂಗ್‌ ಸೀಟು ನಷ್ಟವಾಗಲಿವೆ ಎಂದು ಹೇಳಿದರು.

ಇವೆಲ್ಲವೂ ಒಂದೇ ಶಿಕ್ಷಣ ಸಂಸ್ಥೆಗೆ ಸೇರಿದ ಕಾಲೇಜುಗಳಾಗಿದ್ದು, ಸಿಐಡಿ ತನಿಖೆ ಕೂಡ ನಡೆಯುತ್ತಿದೆ. ಒಂದೊಮ್ಮೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡರೂ, ವಿವಿಯಿಂದ ಮಾನ್ಯತೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next