ಹೌದು, ಅಂದು ಕಾಲೇಜಿನಲ್ಲಿ ಮಧ್ಯಾಹ್ನದ ವೇಳೆ ಇನ್ನೇನು ಕ್ರಿಸ್‌ಮಸ್ ರಜೆ ಆರಂಭವಾಗಬೇಕು ಎನ್ನುವ ಮೊದಲೇ ಒಂದು ಸಂತಸದ ಸುದ್ದಿ ನಮ್ಮ ಕಿವಿಗೆ ಬಿದ್ದಿತು. ಅದುವೇ ರಾಷ್ಟ್ರೀಯ ಸೇವಾ ಯೋಜನೆಯ ಈ ವರ್ಷದ ಕ್ಯಾಂಪ್. ಅದು ಕಳೆದ ಡಿಸೆಂಬರ್ 22ಕ್ಕೆ ಆರಂಭವಾಯಿತು. ಇದನ್ನು ಕೇಳಿದ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೂಡಲೆ ಕ್ಯಾಂಪ್‌ಗೆ ತಯಾರಿ ಭರದಿಂದ ಸಾಗಿತು. ಅದೂ ನಮ್ಮ. ಕ್ಯಾಂಪ್ ಇರುವುದು ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ಎಂದು ತಿಳಿದಾಗ ಮತ್ತಷ್ಟು ಸಂತೋಷವಾಯಿತು. ಅಂತೂ ದಿನಗಳನ್ನು ಲೆಕ್ಕ ಹಾಕುವುದರೊಳಗೆ ಕ್ಯಾಂಪ್‌ಗೆ ಹೋಗುವ ದಿನ ಬಂದೇಬಿಟ್ಟಿತು.
ಯೋಜನಾಧಿಕಾರಿಗಳಾದ ಶಮಂತ್ ಸರ್ ಮತ್ತು ಪ್ರಿಯಾಶ್ರೀ ಮೇಡಂ ಅವರೊಂದಿಗೆ ಸುಮಾರು 80 ಮಂದಿ ಶಿಬಿರಾರ್ಥಿಗಳು ನಮ್ಮ ಕಾಲೇಜಿನಿಂದ ಹೊರಟೆವು. ಬಸ್ಸಿನಲ್ಲಿ ಮಾತನಾಡುತ್ತ¤, ಹರಟೆ ಹೊಡೆಯುತ್ತ ಕೊನೆಗೂ ಕೋಟದ ಕಾರಂತ ಥೀಮ್‌ಪಾರ್ಕನ್ನು ತಲುಪಿದೆವು. ಹಾಗೆ ಹೋದ ನಮಗೆ ಅಲ್ಲಿನ ಊರಿನ ಜನರು ಅದ್ದೂರಿ ಸ್ವಾಗತವನ್ನು ಕೋರಿದರು, ಅಲ್ಲದೇ ಆರತಿ ಎತ್ತಿ ನಮ್ಮನ್ನು ಬರಮಾಡಿಕೊಂಡರು. ಅವರ ಪ್ರೀತಿಗೆ ನಾವೆಲ್ಲಾ ಮೂಕವಿಸ್ಮಿತರಾದೆವು.
ಹಾಗೇ ಮೊದಲನೆಯ ದಿನದಿಂದಲೇ ನಮ್ಮ ಚಟುವಟಿಕೆಗಳು ಆರಂಭವಾದವು. ಉದ್ಘಾಟನಾ ಸಮಾರಂಭದ ನಂತರ ಎಲ್ಲರೂ ದೇವಸ್ಥಾನಕ್ಕೆ ತೆರಳಿ ಅಲ್ಲಿ ಅನ್ನ ಪ್ರಸಾದ ಸ್ವೀಕರಿಸಿ ಪುನಃ ಕಾರಂತ ಥೀಮ್‌ಫಾರ್ಕ್‌ಗೆ ಬಂದೆವು. ಸ್ವಲ್ಪ ಸಮಯದ ವಿಶ್ರಾಂತಿಯ ನಂತರ ಎÇÉಾ ಶಿಬಿರಾರ್ಥಿಗಳನ್ನು ಒಂದೆಡೆ ಸೇರಿಸಿ ಐದು ಗುಂಪುಗಳಾಗಿ ವಿಂಗಡಿಸಲಾಯಿತು. ಕ್ಯಾಂಪ್ ಅಲ್ಲಿ ನಾವಿಬ್ಬರೂ ಒಟ್ಟಿಗೆ ಇರುವ ಎಂದು ಮಾತನಾಡಿಕೊಂಡು ಬಂದ ಕೆಲವು ಹೆಣ್ಣುಮಕ್ಕಳು ಬೇರೆ ಬೇರೆಯಾದರು. ಕೆಲವರ ಮುಖದಲ್ಲಿ ನಿರಾಸೆ ಕಂಡರೂ, ಸ್ವಲ್ಪ ಸಮಯದ ನಂತರ ಹೊಂದಿಕೊಂಡರು. ಆ ದಿನ ಶಿಬಿರಾರ್ಥಿಗಳಿಗೆ ಏನೂ ಕೆಲಸವಿಲ್ಲದ ಕಾರಣ ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡಿ ಮನೆಯ ನೆನಪು ಮಾಡಿಕೊಳ್ಳುತ್ತ¤ ನಿ¨ªೆಗೆ ಜಾರಿದೆವು.
ಮಾರನೆಯ ದಿನದಿಂದ ನಮ್ಮ ಚಟುವಟಿಕೆಗಳೆಲ್ಲವೂ ಆರಂಭವಾಯಿತು. ಬೆಳಿಗ್ಗೆ ಸುಮಾರು 4 ಗಂಟೆಗೆ ಎಲ್ಲಾ ಶಿಬಿರಾರ್ಥಿಗಳು ಲವಲವಿಕೆಯಿಂದ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ ಸರಿಯಾಗಿ 5.45ಕ್ಕೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿ¨ªೆವು. ಧ್ವಜಾರೋಹಣಕ್ಕೆ ಆಗಮಿಸಿದ ಅತಿಥಿಗಳ ಹಿತನುಡಿಯನ್ನು ಆಲಿಸಿಕೊಂಡು, ಮೈ ನಡುಗುವ ಚಳಿಯಲ್ಲಿ ಕೇವಲ ಐದು ನಿಮಿಷ ವಿಶ್ರಾಂತಿಯನ್ನು ತೆಗೆದುಕೊಂಡು ಯೋಗಾಸನ ಮಾಡಲು ತೆರಳುತ್ತಿ¨ªೆವು. ಯೋಗ ಗುರುಗಳಾದ ಸಂಜೀವ್ ಕೋಟ ಇವರು ಶಿಬಿರಾರ್ಥಿಗಳಿಗೆ ಯೋಗವನ್ನು ಬಹಳ ಪ್ರೀತಿಯಿಂದ, ಸ್ವಲ್ಪ ತಮಾಷೆಯಿಂದ ಹೇಳಿಕೊಡುತ್ತಿದ್ದರು. ಶಿಬಿರಾರ್ಥಿಗಳೂ ಕೂಡ ಅಷ್ಟೇ ಶ್ರದ್ಧೆಯಿಂದ ಯೋಗವನ್ನು ಮಾಡುತ್ತಿದ್ದರು. ಇದಾದ ನಂತರ ಕಾಫಿ ತಿಂಡಿಯನ್ನು ಸ್ವೀಕರಿಸಿ, ಶ್ರಮಜೀವಿಗಳು ನಾವು ಎಂದು ತಂಡ ತಂಡವಾಗಿ ಹಾರೆ ಪಿಕ್ಕಾಸುಗಳನ್ನು ಹಿಡಿದು ಯೋಜನಾಧಿಕಾರಿಗಳ ಮಾರ್ಗದರ್ಶನದಂತೆ ರಸ್ತೆ ಬದಿಯ ಸ್ವತ್ಛತೆ ಹಾಗೂ ಇನ್ನಿತರ ಕೆಲಸದಲ್ಲಿ ಮಗ್ನರಾಗುತ್ತಿದ್ದರು. ಇನ್ನುಳಿದ ಸ್ವಲ್ಪ ಶಿಬಿರಾರ್ಥಿಗಳು ತಾವು ಉಳಿದುಕೊಳ್ಳುವ ಸ್ಥಳದ ಸ್ವತ್ಛತೆ, ಅಡುಗೆಯ ಕೆಲಸಕ್ಕೆ ಸಹಾಯ, ಕುಡಿಯಲು ನೀರಿನ ವ್ಯವಸ್ಥೆ, ಇನ್ನಿತರ ಕೆಲಸದಲ್ಲಿ ತೊಡಗುತ್ತಿದ್ದರು. ಕೆಲಸದೊಂದಿಗೆ ಒಂದಿಷ್ಟು ತಮಾಷೆ, ಮುನಿಸು, ನಗು ಇವೆಲ್ಲವೂ ಆಗಾಗ ಬಂದು ಹೋಗುತ್ತಿದ್ದವು. ಶ್ರಮದಾನದ ಕೆಲಸ ಮುಗಿದ ನಂತರ ಎಲ್ಲರೂ ಶುಚಿಯಾಗಿ ಬಂದು ಒಟ್ಟಿಗೇ ಕುಳಿತು ಊಟ ಮಾಡುತ್ತಿ¨ªೆವು. ಊಟದ ಮೊದಲು ಶಾಂತಿ ಮಂತ್ರವನ್ನು ಹೇಳುತ್ತಿ¨ªೆವು. ಇದಾದ ನಂತರ ಎಲ್ಲರೂ ಶೈಕ್ಷಣಿಕ ಕಾರ್ಯಕ್ರಮಕ್ಕೆ ಹಾಜರಾಗುತ್ತಿ¨ªೆವು. ಈ ಕಾರ್ಯಕ್ರಮಕ್ಕೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟವಾದರೂ ಕೂಡ ಸಂಪನ್ಮೂಲ ವ್ಯಕ್ತಿಗಳು ಕೊಡುವ ಉತ್ತಮವಾದ ಸಂದೇಶವನ್ನು ಕೇಳುವ ಸಲುವಾಗಿ ಎಲ್ಲರೂ ಆಸಕ್ತಿಯಿಂದ ಕುಳಿತಿರುತ್ತಿ¨ªೆವು. ಶೈಕ್ಷಣಿಕ ಕಾರ್ಯಕ್ರಮ ಮುಗಿದ ನಂತರ ನಮಗೆಲ್ಲಾ ಏನೋ ಒಂದು ರೀತಿಯ ಸಂತೋಷ. ಅದಕ್ಕೆ ಕಾರಣ ಇಷ್ಟೇ ಮುಂದಿನ ಕಾರ್ಯಕ್ರಮವಾಗಿ ಶಿಬಿರಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಹಾಗೆಯೇ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದ ತಯಾರಿಯಲ್ಲಿ ಎಲ್ಲರೂ ತೊಡಗಿರುತ್ತಿದ್ದರು. ಅಂತೂ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದ ಮಾಡಿದ ಕೆಲಸದ ಆಯಾಸವೆಲ್ಲವೂ ಕಡಿಮೆಯಾಗುತ್ತಿತ್ತು.
ಹೀಗೆ ಬಂದ ದಿನದಿಂದ ಏಳು ದಿನಗಳ ಕಾಲ ಇದೇ ರೀತಿಯ ಕೆಲಸ, ಕ್ರೀಡೆ, ಸಾಂಸ್ಕೃತಿಕ, ಇನ್ನಿತರ ಎಲ್ಲಾ ವಿಷಯದಲ್ಲಿಯೂ ನಾವು ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿ¨ªೆವು. ಬರುಬರುತ್ತ ಕಾಲೇಜಿನಲ್ಲಿ ಪರಿಚಯವಿಲ್ಲದ ಮುಖಗಳೆಲ್ಲವೂ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯ ಸ್ನೇಹಿತರಾದೆವು. ಇದರೊಂದಿಗೆ ನಾವು ಮಾಡುವ ಕೆಲಸಕ್ಕೆ ಪ್ರತೀ ಹೆಜ್ಜೆಯಲ್ಲಿ ನಮ್ಮ ಬೆನ್ನೆಲುಬಾಗಿ ನಿಂತಿದ್ದು ಕೋಟದ ಗ್ರಾಮಸ್ಥರು, ಅಲ್ಲಿನ ಹಲವಾರು ಯುವ ಸಂಘಟನೆಗಳು ಹಾಗೂ ಜನಪ್ರತಿನಿಧಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಸರ್ ಅವರು. ಇವರೆಲ್ಲರೂ ಕೂಡ ನಾವು ಮಾಡುವ ಕೆಲಸಕ್ಕೆ ಶ್ಲಾ ಸುತ್ತ, ನಾವು ತಪ್ಪು ಮಾಡಿದಾಗ ತಿದ್ದಿ ನಮಗೆ ಧೈರ್ಯವನ್ನು ತುಂಬಿದವರು.
ಒಟ್ಟಾರೆಯಾಗಿ ಹೇಳಬೇಕೆಂದರೆ, ರಾಷ್ಟ್ರೀಯ ಸೇವಾ ಯೋಜನೆಯು ಯುವಜನರಲ್ಲಿ ಸೇವೆ ಮಾಡುವ ಮನೋಭಾವ, ಧೈರ್ಯ, ನಾಯಕತ್ವ ಗುಣ, ತಾಳ್ಮೆ, ಶ್ರದ್ಧೆ, ಶಿಸ್ತು ಮುಂತಾದ ಒಳ್ಳೆಯ ಅಭ್ಯಾಸವನ್ನು ಬೆಳೆಸುತ್ತದೆ. ಯಾವಾಗಲೂ ಆಧುನಿಕತೆಗೆ ಅಂಟಿಕೊಂಡಿರುವ ಯುವಜನರನ್ನು ಸ್ವಲ್ಪ ದಿನಗಳವರೆಗೆ ಈ ರೀತಿಯ ಶಿಬಿರಗಳನ್ನು ಆಯೋಜಿಸುವ ಮೂಲಕ ಹಳ್ಳಿ ಜನರ ಶ್ರಮ, ಬದುಕು, ಜೀವನವನ್ನು ಯುವಜನತೆಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತದೆ.
ಹೌದು, ಆದರೆ ಈ ಶಿಬಿರ ಕೇವಲ ಏಳು ದಿನ ಅಷ್ಟೇ. ಎಂಟನೆಯ ದಿನ ಮನೆಗೆ ಹೋದಾಗ ಶಿಬಿರದಲ್ಲಿ ನಮ್ಮನ್ನು ಬೆಳಿಗ್ಗೆ ಬೇಗ ಎಬ್ಬಿಸುತ್ತಿದ್ದ ಗೆಳೆಯರು ಪಕ್ಕದಲ್ಲಿರುವುದಿಲ್ಲ, ಊಟ ಮಾಡುವ ಮೊದಲು ಶಾಂತಿಮಂತ್ರವಿಲ್ಲ, ಶ್ರಮದಾನ, ಅಡುಗೆ ಮನೆ ಕೆಲಸವಿಲ್ಲ. ಇವುಗಳೆಲ್ಲ ಕೇವಲ ಏಳು ದಿನಕ್ಕೆ ಮಾತ್ರ ಸೀಮಿತ, ಇವೆಲ್ಲ ಇನ್ನು ಬರೀ ನೆನಪು ಮಾತ್ರ.
ದಿವ್ಯಾ ಡಿ ಶೆಟ್ಟಿ ಪತ್ರಿಕೋದ್ಯಮ ವಿದ್ಯಾರ್ಥಿ ಎಂಜಿಎಂ ಕಾಲೇಜು, ಉಡುಪಿ