Advertisement

ಲೋಕಸಭೆಯಲ್ಲಿ ಅನುಚಿತ ವರ್ತನೆ ಏಳು ಜನ ಕಾಂಗ್ರೆಸ್ ಸಂಸದರ ಅಮಾನತು

09:59 AM Mar 06, 2020 | Hari Prasad |

ನವದೆಹಲಿ: ಸದನ ಕಲಾಪ ನಿಯಮಗಳಿಗೆ ವ್ಯತಿರಿಕ್ತವಾಗಿ ವರ್ತಿಸಿದ ಕಾರಣಕ್ಕಾಗಿ ಏಳು ಜನ ಕಾಂಗ್ರೆಸ್ ಸಂಸದರನ್ನು ಬಜೆಟ್ ಅಧಿವೇಶನದ ಇನ್ನುಳಿದ ಅವಧಿಯವರೆಗೆ ಲೋಕಸಭಾಧ್ಯಕ್ಷರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Advertisement

ಇತ್ತಿಚೆಗೆ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರ ವಿಷಯಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಸಂದರ್ಭದಲ್ಲಿ ನದನದ ನಿಯಮಗಳನ್ನು ಮೀರಿ ಗದ್ದಲ ನಡೆಸಿದ ಆರೋಪದಲ್ಲಿ ಇವರನ್ನು ಸದನ ಕಲಾಪಗಳಿಂದ ಅಮಾನತುಗೊಳಿಸಲಾಗಿದೆ.

ಈ ಏಳು ಜನ ಕಾಂಗ್ರೆಸ್ ಸದಸ್ಯರ ವರ್ತನೆಯನ್ನು ಪರಿಶೀಲಿಸಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವ ಸರಕಾರದ ಪ್ರಸ್ತಾವನೆಗೂ ಇದೇ ಸಂದರ್ಭದಲ್ಲಿ ಸ್ಪೀಕರ್ ಅವರು ಒಪ್ಪಿಗೆ ಸೂಚಿಸಿದ್ದಾರೆ.

ಸಭಾಧ್ಯಕ್ಷರ ಮೇಜಿನಿಂದ ಕಾಗದ ಪತ್ರಗಳನ್ನು ಕಸಿದುಕೊಳ್ಳುವುದು ಆ ಸ್ಥಾನಕ್ಕೆ ಅಗೌರವ ಸಲ್ಲಿಸಿದಂತೆಯೇ ಸರಿ. ಸಭಾಧ್ಯಕ್ಷರ ಮೇಜಿನಿಂದ ಕಾಗದ ಪತ್ರಗಳನ್ನು ಕಸಿದುಕೊಂಡವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಗೌರವ್ ಗೊಗೊಯ್, ಟಿ.ಎನ್. ಪ್ರತಾಪನ್, ಡೀನ್ ಕುರಿಯಕೋಸ್, ಬೆನ್ನಿ ಬೆಹನನ್ ಮಣಿಕ್ಕಮ್ ಟಾಗೋರ್, ರಾಜ್ ಮೋಹನ್ ಉನ್ನಿತ್ತನ್ ಮತ್ತು ಗುರ್ಜೀತ್ ಸಿಂಗ್ ಅವರು ಸದನದಿಂದ ಇಂದು ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದರಾಗಿದ್ದಾರೆ.

Advertisement

ಈ ಸಂಸದರು ಮಾರ್ಚ್ 2ರಂದು ಪ್ರಾರಂಭಗೊಂಢ ಬಜೆಟ್ ನ ದ್ವಿತಿಯಾರ್ಧದ ಅಧಿವೇಶನ ಮುಕ್ತಾಯಗೊಳ್ಳುವ ಎಪ್ರಿಲ್ 3ರವರೆಗೆ ಅಮಾನತಿನಲ್ಲಿರುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇವರು ಸದನ ಕಲಾಪಗಳಲ್ಲಿ ಭಾಗವಹಿಸುವಂತಿರುವುದಿಲ್ಲ.

ಸಭಾಧ್ಯಕ್ಷರ ಈ ಕ್ರಮವನ್ನು ‘ದ್ವೇಷದ ರಾಜಕಾರಣ’ ಎಂದು ಕಾಂಗ್ರೆಸ್ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next