ಬಸವನಬಾಗೇವಾಡಿ: ಪಟ್ಟಣದ ನೂತನ ಮೆಘಾ ಮಾರುಕಟ್ಟೆ ಆವರಣದಲ್ಲಿ ತಾಲೂಕಾಡಳಿತ ಮತ್ತು ತಾಲೂಕು ಪಂಚಾಯತ್ ವತಿಯಿಂದ ಸಂತ ಶ್ರೀ ಸೇವಾಲಾಲ್ ಜಯಂತ್ಯುತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿನ ಸಾಮರಸ್ಯ ಹಾಳಾಗುವ ರೀತಿಯಲ್ಲಿ ಶಾಸನ ರಚಿಸಿದರೆ ಅದು ಕರಾಳ ಶಾಸನವಾಗುತ್ತದೆ ಎಂದು ಹೇಳಿದರು.
ಕೇಸರಟ್ಟಿ ಹಾಗೂ ಲಂಬಾಣಿ ಸಮಾಜದ ಶ್ರೀ ಸೋಮಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪಟ್ಟಣದ ಹಿರೇಮಠದ
ಶ್ರೀ ಶಿವಪ್ರಕಾಶ ಶಿವಚಾರ್ಯ ಶ್ರೀಗಳು ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ವಿರಕ್ತಮಠದ ಶ್ರೀ ಸಿದ್ದಲಿಂಗ ಶ್ರೀಗಳು ವಹಿಸಿದ್ದರು.
ಈರಣ್ಣ ಪಟ್ಟಣಶೆಟ್ಟಿ, ಬಸಣ್ಣ ದೇಸಾಯಿ, ಸಂಗನಗೌಡ ಚಿಕ್ಕೊಂಡ, ನೀಲು ನಾಯಕ, ರುಕ್ಮಿಣಿ ರಾಠೊಡ, ಶೇಖರ ಗೊಳಸಂಗಿ, ಅಂಬೊಜಿ ಪವಾರ, ತಾನಾಜಿ ನಾಗರಾಳ, ಎ.ಎಂ. ಪಾಟೀಲ, ಕಾಶಿನಾಥ ರಾಠೊಡ, ಈಶ್ವರ ಜಾಧವ, ಅಶೋಕ ಪವಾರ, ಶಂಕರಗೌಡ ಬಿರಾದಾರ, ಪ್ರವೀಣ ಪವಾರ, ಪರಶು ಅಡಗಿಮನಿ, ದೇವೇಂದ್ರ ನಾಯಕ, ಹೊನ್ನು ನಾಯಕ, ತಹಶೀಲ್ದಾರ ಎಂ.ಎನ್. ಚೋರಗಸ್ತಿ, ಕಾಶಿನಾಥ ರಾಠೊಡ, ಪಿ.ಜಿ. ಪವಾರ, ಶ್ರೀಕಾಂತ ಲಮಾಣಿ ಸುಭಾಸ ಬಾಗೇವಾಡಿ ಸೇರಿದಂತೆ ಅನೇಕರು ಇದ್ದರು. ಸಾಹಿತಿ ಇಂದುಮತಿ ಲಮಾಣಿ ಉಪನ್ಯಾಸ ನೀಡಿದರು.
ಮಲ್ಲಿಕಾರ್ಜುನ ನಾಯಕ ಸ್ವಾಗತಿಸಿದರು. ಎಚ್.ಬಿ. ಬಾರಿಕಾಯಿ ನಿರೂಪಿಸಿದರು. ರವಿ ರಾಠೊಡ ವಂದಿಸಿದರು.