Advertisement

ಸೇವಾಸಿಂಧು: ಮನೆಗೊಂದು ಗಿಡ ಅಭಿಯಾನ

08:15 AM Jul 26, 2017 | Team Udayavani |

ಉಡುಪಿ: ಸೇವಾ ಸಿಂಧು ಉಡುಪಿ ಜಿಲ್ಲೆ ಇದರ ವತಿಯಿಂದ ಜು.23ರಂದು ತೊಟ್ಟಂ ಬಡಾನಿಡಿಯೂರು ಮತ್ತು ಕದಿಕೆ ವಠಾರದಲ್ಲಿ ದ್ವಿತೀಯ ಹಂತದ ಮನೆಗೊಂದು ಗಿಡ ನೆಡುವ ಅಭಿಯಾನ ಜರಗಿತು. 

Advertisement

ನೇರಳೆ ಹಣ್ಣು, ನೆಲ್ಲಿಗಿಡ, ಹೊಳೆ ದಾಸವಾಳ, ಬಿಲ್ವಪತ್ರ, ಮಾವು, ಕಹಿಬೇವು ಮತ್ತು ಇತರ ಗಿಡಗಳ ವಿತರಣ ಕಾರ್ಯಕ್ರಮವು ಸಾಮಾಜಿಕ ಕಾರ್ಯಕರ್ತ ಶಿವಾನಂದ ಸುವರ್ಣ ಅವರ ಅಧ್ಯಕ್ಷತೆಯಲ್ಲಿ  ಜರಗಿತು. 

ಮುಖ್ಯ ಅತಿಥಿಯಾಗಿ ಕರಾವಳಿ ಯುವಕ ಮಂಡಲದ ಅಧ್ಯಕ್ಷ ಬಂಧು ಕಾಂಚನ್‌, ಬಡಾನಿಡಿಯೂರು ಶಾಲೆಯ ಮುಖ್ಯೋಪಾಧ್ಯಾಯ ದಿನಕರ ಶೆಟ್ಟಿ ಭಾಗವಹಿಸಿದ್ದರು. 

ಸಂಘದ ಅಧ್ಯಕ್ಷ ನಿತೇಶ್‌ ನಾಯಕ್‌ ಮಲ್ಪೆ, ಉಪಾಧ್ಯಕ್ಷ ಯಶವಂತ್‌ ಕೋಟ್ಯಾನ್‌ ಬೀಚ್‌, ಕೋಶಾಧಿಕಾರಿ ಕಿರಣ್‌ ಆರ್‌. ಕುಂದರ್‌, ಸದಸ್ಯರಾದ ರವೀಂದ್ರ ಗುಜ್ಜರ್‌ಬೆಟ್ಟು, ತಿಲಕ್‌ ನಂದನ್‌ ಬೀಚ್‌, ನಾಗೇಂದ್ರ ಮೆಂಡನ್‌, ಸಂದೀಪ್‌ ಸಾಲ್ಯಾನ್‌, ಸ್ಥಳೀಯರಾದ ರಮಾನಾಥ್‌ ಶ್ರೀಯಾನ್‌, ಯಾದೀಶ್‌ ಪೂಜಾರಿ, ಮಂಜುನಾಥ್‌ ಶ್ರೀಯಾನ್‌, ವೈಭವ್‌ ಕೋಟ್ಯಾನ್‌‌, ಕಾರ್ಯದರ್ಶಿ ಗಣೇಶ್‌ ಮೈಂದನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next