Advertisement
ಎರಡು ದಿನಗಳೂ ಇದೇ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಹಗ್ಗ ಜಗ್ಗಾಟ ಮುಂದುವರಿದು ಎಸ್‌ಐಟಿ ತನಿಖೆಗೆ ಬಿಜೆಪಿ ಪ್ರತಿರೋಧ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದವರು ಎಸ್‌ಐಟಿ ತನಿಖೆಯೇ ಇರಲಿ ಎಂದು ಪಟ್ಟು ಹಿಡಿದಿದ್ದರಿಂದ ಅಂತಿಮವಾಗಿ ಸ್ಪೀಕರ್ ರಮೇಶ್ ಕುಮಾರ್ ಸಂಧಾನ ಸಭೆ ನಿಗದಿಪಡಿಸಿದ್ದಾರೆ. ಆದರೆ, ಸ್ಪೀಕರ್ ನೀಡಿದ್ದ ಸಲಹೆ ಮೇರೆಗೆ ಎಸ್‌ಐಟಿ ಮೂಲಕವೇ ತನಿಖೆ ನಡೆಸಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪುನರುಚ್ಚರಿಸಿದರು. ಕೊನೆಗೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರ ಮನವಿ ಮೇರೆಗೆ ಬುಧವಾರ ಬೆಳಿಗ್ಗೆ 10.30ಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ಸಭೆ ನಿಗದಿ ಮಾಡಿದರು. ಈ ಸಭೆಯಲ್ಲಿ ನಾಯಕರ ನಡುವೆ ಸಂಧಾನವಾದರೆ ಸದನ ಸಮಿತಿ ರಚನೆಗೆ ಸಲಹೆ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
Related Articles
Advertisement
ಎಸ್‌ಐಟಿ ರಚನೆಗೆ ಒಪ್ಪಲ್ಲ:ಯಡಿಯೂರಪ್ಪ ಪಟ್ಟುಎರಡು ದಿನದಿಂದ ಚರ್ಚೆಯನ್ನು ಮೌನವಾಗಿಯೇ ಆಲಿಸುತ್ತಿದ್ದ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಆಪರೇಷನ್ ಆಡಿಯೋ ಪ್ರಕರಣದ ಕುರಿತು ಸದನದಲ್ಲಿ ಮೊದಲ ಬಾರಿಗೆ ಮಾತನಾಡಿ, ಸರ್ಕಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದಟಛಿ ಹತ್ತು ಆರೋಪಗಳನ್ನು ಮಾಡಿದರು. ಎಸ್‌ಐಟಿ ಮುಖ್ಯಮಂತ್ರಿ ಅಧೀನದಲ್ಲಿಯೇ ಇರುವುದರಿಂದ ಎಸ್‌ಐಟಿಗೆ ವಿರೋಧವಿದೆ ಎಂದು ಸ್ಪಷ್ಟವಾಗಿ ಹೇಳಿದರು. ಅಲ್ಲದೇ ಸ್ಪೀಕರ್ ಅವರಿಗೆ 50 ಕೋಟಿ ರೂ. ಕೊಟ್ಟಿದ್ದೇವೆ ಎನ್ನುವ ಸಂಭಾಷಣೆ ನಡೆಯುವ ಸಂದರ್ಭದಲ್ಲಿ ನಾನು ಇದ್ದೆ ಎನ್ನುವುದನ್ನು ಸಾಬೀತು ಪಡಿಸಿದರೆ, ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಪುನರುಚ್ಚರಿಸಿದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿಯೇ ಮೊದಲ ಆರೋಪಿಯಾಗಿದ್ದಾರೆ ಎಂದು ದೂರಿದ ಅವರು, ಶರಣುಗೌಡನಿಗೆ ಇಂತ ಕೆಲಸಕ್ಕೆ ಕೈ ಹಾಕಬೇಡ ಎಂದು ಹೇಳಬಹುದಿತ್ತು. ಶರಣುಗೌಡನಿಂದ ರೆಕಾರ್ಡ್ ಮಾಡಿರುವ ಆಡಿಯೋ ಎಡಿಟ್ ಮಾಡಿರುವ ಆರೋಪ, ನಕಲಿ ದಾಖಲೆ ಸೃಷ್ಟಿ, ಸುಳ್ಳು ದಾಖಲೆ, ಮೋಸ ಮಾಡುವ ಉದ್ದೇಶ ಹೊಂದಿರುವುದು, ನಕಲಿ ಎಂದು ಗೊತ್ತಿದ್ದರೂ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದು ಐಪಿಸಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ದಂಡನಾರ್ಹ ಅಪರಾಧ ಎಂದು ಆರೋಪಿಸಿದರು. 35 ನಿಮಿಷದ ಆಡಿಯೋವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಎಡಿಟ್ ಮಾಡಿ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ ಎಂದರು. ಸಭಾಧ್ಯಕ್ಷರನ್ನು ರಕ್ಷಣೆ ಮಾಡುವ ಪ್ರಾಮಾಣಿಕ ಪ್ರಯತ್ನ ಮುಖ್ಯಮಂತ್ರಿ ಮಾಡಿದ್ದರೆ, ಈ ಪ್ರಕರಣ ಇಷ್ಟು ದೊಡ್ಡ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿ ರಾಜಕೀಯ ಕುತಂತ್ರ ಮಾಡಿದ್ದೀರಿ, ನಾನು ಹೋರಾಟದ ಮೂಲಕ ರಾಜಕೀಯದಲ್ಲಿ ಮೇಲೆ ಬಂದಿದ್ದೇನೆ. ನಮ್ಮ ಕುಟುಂಬದ ಹಿರಿಯರು ಯಾರೂ ಅಧಿಕಾರದಲ್ಲಿ ಇರಲಿಲ್ಲ. ನನಗೂ ಜವಾಬ್ದಾರಿ ಇದೆ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಈ ಕುತಂತ್ರ ಮಾಡಿದ್ದಾರೆ ಎಂದು ದೂರಿದರು. ಅಲ್ಲದೇ ಆಳಂದ ಶಾಸಕ ಸುಭಾಷ್ ಗುತ್ತೇದಾರ್‌ಗೆ ಆಮಿಷ ಒಡ್ಡಿರುವುದು, ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು 25 ಕೋಟಿ, ರಾಜ್ಯಸಭಾ ಸದಸ್ಯರನ್ನಾಗಿ ಮಾಡಲು 50 ಕೋಟಿ ವ್ಯವಹಾರ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಈ ರೀತಿ ನಡೆದುಕೊಂಡರೆ ಪ್ರಜಾಪ್ರಭುತ್ವದ ಕತೆ ಏನಾಗಬೇಕು ಎಂದು ಪ್ರಶ್ನಿಸಿದರು. ನನ್ನ ವಿರುದ್ಧವೂ ತನಿಖೆ ಆಗಲಿ: ಕುಮಾರಸ್ವಾಮಿ
ಬಿಎಸ್‌ವೈ ಆರೋಪಗಳಿಗೆ ಉತ್ತರಿಸಿದ ಸಿಎಂ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ನನ್ನನ್ನೇ ಮೊದಲ ಆರೋಪಿ ಎನ್ನುತ್ತಿದ್ದಾರೆ. ನನ್ನ ವಿರುದ್ಧವೂ ತನಿಖೆಯಾಗಲಿ, ನಾನು ಎಲ್ಲದಕ್ಕೂ ಸಿದಟಛಿನಿದ್ದೇನೆ. ನಾನು ಈ ಕುರ್ಚಿಗೆ ಅಂಟಿಕೊಂಡು ಕುಳಿತಿಲ್ಲ. ನಾವೇ ನೇಮಿಸಿಕೊಂಡಿರುವ ಅಧಿಕಾರಿಗಳ ಮೇಲೆ ಸಂಶಯ ಪಡುವುದು ಬೇಡ. ನಾಗನಗೌಡರ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ಐವತ್ತು ವರ್ಷದ ಸಂಬಂಧ ಇದೆ. ಶರಣುಗೌಡ , ಬಿಜೆಪಿಯವರು ಫೋನ್ ಮಾಡಿ ಕರೆಯುತ್ತಿದ್ದಾರೆ ಎಂದು ಹೇಳಿದಾಗ ಹೋಗಿ ಕೇಳಿಕೊಂಡು ಬಾ ಎಂದು ನಾನೇ ಹೇಳಿದ್ದೆ. ಕಳೆದ 15 ವರ್ಷಗಳಿಂದ ಶಾಸಕರನ್ನು ಮಾರಾಟದ ಸರಕುಗಳನ್ನಾಗಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ಬಿಜೆಪಿಯವರು ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸಿ ದರೆ, ನಾವೂ ಬಿಜೆಪಿಯ ಕೆಲವು ಶಾಸಕರನ್ನು ಸಂಪರ್ಕಿಸುತ್ತೇವೆ ಎಂದು ನಮ್ಮ ಸಚಿವರು ಹೇಳಿದ್ದಾರೆ. ಈ ರೀತಿಯ ಬೆಳವಣಿಗೆಗೆ ತಾರ್ಕಿಕ ಅಂತ್ಯ ಕಾಣಿಸಬೇಕು. ನಾನು ತನಿಖೆಯಲ್ಲಿ ಯಾವುದೇ ರೀತಿಯ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದಿಲ್ಲ. ಎಸ್‌ಐಟಿ ಮೂಲಕ ತನಿಖೆ ನಡೆಸುತ್ತೇನೆ ಎಂದು ಪುನರುಚ್ಚರಿಸಿದರು. ಎರಡೂ ಕಡೆಯವರ ಅಭಿಪ್ರಾಯ ಆಲಿಸಿದ ಸ್ಪೀಕರ್ ರಮೇಶ್ ಕುಮಾರ್ ಈ ಬಗ್ಗೆ ಚರ್ಚಿಸಲು ಬುಧವಾರ ಬೆಳಿಗ್ಗೆ 10.30ಕ್ಕೆ ತಮ್ಮ ಕಚೇರಿಯಲ್ಲಿ ಸಭೆ ಕರೆದು, ಉಭಯ ಪಕ್ಷಗಳ ನಾಯಕರಿಗೂ ಸಭೆಗೆ ಹಾಜರಾಗುವಂತೆ ಸೂಚಿಸಿ, ಸದನವನ್ನು ಬುಧವಾರ 11.30ಕ್ಕೆ ಮುಂದೂಡಿದರು. ಬಿಜೆಪಿಯಿಂದ 7 ಮಂದಿ ಭಾಗಿ
ಆಡಿಯೋ ಪ್ರಕರಣ ತನಿಖೆ ಕುರಿತಂತೆ ಸಭಾಧ್ಯಕ್ಷರ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ನಡೆಯಲಿರುವ ಸಭೆಯಲ್ಲಿ ಬಿಜೆಪಿಯಿಂದ ಏಳು ಮಂದಿ ಪಾಲ್ಗೊಳ್ಳಲಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಹಿರಿಯ ಶಾಸಕರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಜೆ.ಸಿ.ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿ, ಕೆ.ಜಿ.ಬೋಪಯ್ಯ ಹಾಗೂ ಆರ್.ಅಶೋಕ್ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಸ್‌ಐಟಿ ತನಿಖೆ ನಿರ್ಧಾರ ಕೈ ಬಿಡಬೇಕು ಎಂಬುದು ನಮ್ಮ ಆಗ್ರಹ. ಅದಕ್ಕೆ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ಒಂದೊಮ್ಮೆ ನಿರ್ಧಾರ ಬದಲಾಯಿಸದಿದ್ದರೆ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಮುಂದುವರಿಯಲಾಗುವುದು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು. ಸದನ ಸಮಿತಿ - ನ್ಯಾಯಾಂಗ ತನಿಖೆಯಿಂದ ಅಪರಾಧಿಗಳಿಗೆ ಶಿಕ್ಷೆ ಸಾಧ್ಯವಿಲ್ಲ. ಅವರು ಕೇವಲ ವರದಿ ಮಾತ್ರ ನೀಡುತ್ತಾರೆ. ಎಸ್‌ಐಟಿ ತನಿಖೆಯಿಂದ ಚಾರ್ಜ್‌ಶೀಟ್ ಸಲ್ಲಿಸಲು ಅವಕಾಶವಿದೆ.
ಸಿದ್ದರಾಮಯ್ಯ, ಮಾಜಿ ಸಿಎಂ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಯಂತಾಗಿದೆ ನನ್ನ ಸ್ಥಿತಿ. ಪೊಲೀಸ್ ಠಾಣೆಯಲ್ಲಿ ಆಕೆಗೆ ಯಾವ ರೀತಿ ಅತ್ಯಾ ಚಾರ ಆಯಿತು, ಹೇಗೆ ಆಯಿತು ಎಂದು ಪ್ರಶ್ನಿಸಿ ಮಾನಸಿಕ ಹಿಂಸೆ ನೀಡಿದಂತಾಗಿದೆ.
● ರಮೇಶ್ ಕುಮಾರ್, ಸ್ಪೀಕರ್ ಸಿಎಂ ಎ1 ಆರೋಪಿ. ಸಭಾಧ್ಯಕ್ಷರ ವಿರುದ್ಧ ಆರೋಪ ಕೇಳಿ ಬಂದರೂ, ಅವರ ಗಮನಕ್ಕೆ ತಾರದೇ ನೇರವಾಗಿ ಮಾಧ್ಯಮಗಳಿಗೆ ಬಹಿರಂಗಗೊಳಿಸಿ, ಸಭಾಧ್ಯಕ್ಷರನ್ನು ಬೀದಿಗೆ ತಂದಿದ್ದಾರೆ.
ಜಗದೀಶ್ ಶೆಟ್ಟರ್, ಮಾಜಿ ಸಿಎಂ ಶಾಸಕರನ್ನು ಪೊಲೀಸರ ತನಿಖೆಗೆ ಒಳಪಡಿಸುವುದು ಬೇಡ. ಅವರು ಶಾಸಕರಿಗೆ ನೋಟಿಸ್ ನೀಡಬಹುದು. ಅದನ್ನು ಪ್ರಶ್ನಿಸಿ ನಾಯಾಲಯದಿಂದ ಜಾಮೀನು ಪಡೆಯಬಹುದಾಗಿದೆ.
ಮಾಧುಸ್ವಾಮಿ, ಬಿಜೆಪಿ ಶಾಸಕ