Advertisement

ದಿನಕ್ಕೊಂದು ಬಾರಿ ಮಾತ್ರ ಧ್ವನಿವರ್ಧಕದಲ್ಲಿ ಅಝಾನ್‌: ಕೇರಳ ಮಸೀದಿ

04:11 PM Jun 15, 2017 | Team Udayavani |

ಕೊಚ್ಚಿ : ಶಬ್ದ ಮಾಲಿನ್ಯದ ದೂರುಗಳು ಹೆಚ್ಚುತ್ತಿರುವುದನ್ನು ಅನುಸರಿಸಿ ಕೇರಳದ ಮುಸ್ಲಿಂ ಬಹುಸಂಖ್ಯಾಕ ಮಲಪ್ಪುರಂ ಜಿಲ್ಲೆಯ ಪ್ರಮುಖ ಮಸೀದಿಯೊಂದು ಈಗ ಸಾಗುತ್ತಿರುವ ಪವಿತ್ರ ರಮ್ಜಾನ್‌ ತಿಂಗಳಲ್ಲಿ ದಿನಕ್ಕೆ ಒಂದು ಬಾರಿ ಮಾತ್ರವೇ ಧ್ವನಿ ವರ್ಧಕದ ಮೂಲಕ ಅಝಾನ್‌ ಬಿತ್ತರಿಸಲು ನಿರ್ಧರಿಸಿದೆ.

Advertisement

ಮಲಪ್ಪುರಂ ಜಿಲ್ಲೆಯ ವಳಕ್ಕಾಡ್‌ ಪ್ರದೇಶದಲ್ಲಿನ ಅತೀ ದೊಡ್ಡ ವಾಲಿಯಾ ಜುಮ್ಮಾ ಮಸೀದಿಯು ದಿನಕ್ಕೆ ಒಂದು ಬಾರಿ ಮಾತ್ರವೇ ಧ್ವನಿ ವರ್ಧಕದ ಮೂಲಕ ಅಝಾನ್‌ ಬಿತ್ತರಿಸಲು ನಿರ್ಧರಿಸಿದ್ದು ಇದನ್ನು ಸುತ್ತಮುತ್ತಲಿನ ಇತರ 17 ಸಣ್ಣ ಮಸೀದಿಗಳು ಅನುಸರಿಸಲಿವೆ ಮತ್ತು ಆ ಮೂಲಕ ಯಾವುದೇ ಸದ್ದು-ಗದ್ದಲ ಆಗದಂತೆ ಸಹಕರಿಸಲು ನಿರ್ಧರಿಸಿವೆ ಎಂದು ಹಿಂದುಸ್ಥಾನ್‌ ಟೈಮ್ಸ್‌ ಇಂದು ಗುರುವಾರ ವರದಿ ಮಾಡಿದೆ.

ಈ ಮಸೀದಿಗಳ ಸಮಿತಿಯ ಸದಸ್ಯರ ಈಚಿನ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಮಾತ್ರವಲ್ಲದೆ ಮಸೀದಿಯ ಉಳಿದೆಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಧ್ವನಿವರ್ಧಕಗಳ ಬಳಕೆಯನ್ನು ನಿಲ್ಲಿಸಲು ಕೂಡ ನಿರ್ಧರಿಸಿತು. 

ಸಭೆಯಲ್ಲಿ ಮೊದಲು ಅನೇಕರು ಈ ನಿರ್ಧಾರವನ್ನು ವಿರೋಧಿಸಿದರು. ಆದರೆ  ಸಮೀಪದ ಶಾಲೆಗಳು ಮತ್ತು ಆಸ್ಪತ್ರೆಗಳಿಂದ ಧ್ವನಿ ವರ್ಧಕಗಳ ಬಳಕೆ ವಿರುದ್ಧ ದೂರುಗಳು ಬಂದಿರುವುದನ್ನು ಲೆಕ್ಕಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು  ಎಂದು ಮಹಲ್‌ ಕೌನ್ಸಿಲ್‌ ಅಧ್ಯಕ್ಷ ಅಬ್ದುಲ್‌ ಅಜೀಜ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next