Advertisement

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

08:25 PM Jun 24, 2021 | Team Udayavani |

ಉಡುಪಿ/ಕಾರ್ಕಳ:   ರಾಜ್ಯಾದ್ಯಂತ  2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಜು.1ರಿಂದ ಆರಂಭವಾಗಲಿದೆ. ಅಂದಿನಿಂದ ದೂರದರ್ಶನ  ಚಂದನ ವಾಹಿನಿಯಲ್ಲಿ ಒಂದರಿಂದ ಹತ್ತನೇ ತರಗತಿ  ವಿದ್ಯಾರ್ಥಿಗಳಿಗೆ ಪ್ರತಿದಿನ ಸಂವೇದಾ ವೀಡಿಯೋ ಪಾಠ ಪ್ರಸಾರವಾಗಲಿದೆ. ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಪಾಠಗಳು ನಡೆಯಲಿವೆ. ತರಗತಿವಾರು ವೇಳಾಪಟ್ಟಿ ಈಗಾಗಲೇ ಶಾಲಾ ಮುಖ್ಯಸ್ಥರಿಗೆ ತಲುಪಿದೆ. ವಿದ್ಯಾರ್ಥಿಗಳಿಗೆ ಹಿಂದಿನ ಪಾಠ ನೆನಪಿಸುವುದಕ್ಕಾಗಿ ಜು. 1ರಿಂದ 30 ದಿನಗಳ ಸೇತುಬಂಧ ಕಾರ್ಯಕ್ರಮ ನಡೆಸಲಾಗುತ್ತದೆ.

Advertisement

ಪೂರ್ವ ಪರೀಕ್ಷೆ:

ಜು.1ರಿಂದ ಆರಂಭವಾಗಲಿರುವ ಸೇತುಬಂಧ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮೊದಲಿಗೆ ಪೂರ್ವ ಪರೀಕ್ಷೆ ನಡೆಸಲಾಗುತ್ತದೆ. ಫ‌ಲಿತಾಂಶ ಆಧರಿಸಿ ಎ, ಬಿ, ಸಿ ಗ್ರೇಡ್‌ ವಿದ್ಯಾರ್ಥಿಗಳೆಂದು ವಿಂಗಡಿಸಲಾಗುತ್ತದೆ.ಮೂರು  ವಾರಗಳ ಕಾಲ ಈ ಬೋಧ‌ನೆ ನಡೆಯಲಿದೆ.

ಸಾಫ‌ಲ್ಯ ಪರೀಕ್ಷೆ:

ಪೂರ್ವ ಪರೀಕ್ಷೆ, ಪರಿಹಾರ ಬೋಧನೆಯ ಬಳಿಕ ಕೊನೆಯದಾಗಿ ಸಾಫ‌ಲ್ಯ ಪರೀಕ್ಷೆ ನಡೆಯಲಿದೆ. ಇದರಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಶಿಕ್ಷಕರು ನಿರ್ಧರಿಸಲಿದ್ದಾರೆ.

Advertisement

ಶಿಕ್ಷಕರಿಂದ ಪೂರ್ವ ತಯಾರಿ:

ಪ್ರಸಕ್ತ ಕೋವಿಡ್‌-19 ಹಿನ್ನೆಲೆಯಲ್ಲಿ ತರಗತಿಗಳನ್ನು ಭೌತಿಕವಾಗಿ ಆರಂಭಿಸಲು ಸಾಧ್ಯವಾಗದೆ ಇರುವ ಕಾರಣ ಮಕ್ಕಳಿಗೆ ಶೈಕ್ಷಣಿಕವಾಗಿ ಕಲಿಕಾ ನಿರಂತರತೆ ಕಾಯ್ದುಕೊಳ್ಳಲು ಆನ್‌ಲೈನ್‌/ ಆಫ್ಲೈನ್‌ ತರಗತಿ ಪ್ರಾರಂಭಿಸಲು ಸಹಕಾರಿಯಾಗಿದೆ.

ಮೂರು ಗುಂಪುಗಳಾಗಿ ಸಿದ್ಧತೆ:

ಜೂ.15ರಿಂದ ಜೂ.30ರ ಒಳಗೆ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಕಾರ್ಯ ಯೋಜನೆ ರೂಪಿಸಲು ಶಾಲಾ ಹಂತದಲ್ಲಿ ಶಿಕ್ಷಕರು, ಎಸ್‌ಡಿಎಂಸಿ, ಜನಪ್ರತಿನಿಧಿಗಳು ಗ್ರಾ.ಪಂ./ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ, ತಾಲೂಕು,  ಜಿಲ್ಲಾಡಳಿತ ಸ್ಥಳೀಯ ವಿದ್ಯಾಸಕ್ತರು, ಸಮುದಾಯ ಇತರ ಇಲಾಖೆಯ ಕಾರ್ಯಕರ್ತರು, ಸ್ವಯಂಸೇವಕರು, ಹಳೆ ವಿದ್ಯಾರ್ಥಿಗಳ ಸಹಕಾರ ಪಡೆದು ಯೋಜನೆ ರೂಪಿಸಿ ಕಾರ್ಯಗತ ಗೊಳಿಸಬೇಕಿದೆ. ಮೂರು ಗುಂಪುಗಳಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಕೀ-ಪ್ಯಾಡ್‌ ಮೊಬೈಲ್‌, ಇಂಟರ್‌ನೆಟ್‌ ಸೌಲಭ್ಯದೊಂದಿಗೆ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಲಭ್ಯವಿರುವ ವಿದ್ಯಾರ್ಥಿಗಳು, ಟಿವಿ,  ಮೊಬೈಲ್‌ ಇದ್ದವರು ಹೀಗೆ ಗುಂಪುಗಳಾಗಿ ಮಾಡಿ ಕೊಂಡು ಕಾರ್ಯತಂತ್ರ ರೂಪಿಸುವಂತೆ ಸೂಚನೆಗಳಿವೆ.

ಶಿಕ್ಷಕರು, ಪೋಷಕರ ಜವಾಬ್ದಾರಿ:

ಮೊಬೈಲ್‌ ಸಂಪರ್ಕ, ದೂರದರ್ಶನ ಚಂದನ ವಾಹಿನಿ ಲಭ್ಯತೆ ಇಲ್ಲದಿರುವ ವಿದ್ಯಾರ್ಥಿಗಳಿಗೆ ನೆರೆಹೊರೆ ಮನೆಯಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಿಕೊಳ್ಳುವುದು. ಮೊಬೈಲ್‌ ಇಲ್ಲದಿದ್ದಲ್ಲಿ ವಿದ್ಯಾರ್ಥಿ ಮನೆಯವರ ಒಪ್ಪಿಗೆ  ಮೇರೆಗೆ ಶೈಕ್ಷಣಿಕ ಬೆಂಬಲವಿರುವವರ ವ್ಯಕ್ತಿಯ ಮೊಬೈಲ್‌ ಪಡೆಯುವುದು, ಮೊಬೈಲ್‌ನಲ್ಲಿ ದೂರದರ್ಶನದ ಪಾಠಗಳನ್ನು ಡೌನ್‌ಲೋಡ್‌ ಮಾಡಿ ಆಫ್ಲೈನ್‌ನಲ್ಲಿ ವೀಕ್ಷಿಸಿ ತಿಳಿದುಕೊಳ್ಳಬಹುದು.  ಮನೆಯಲ್ಲಿ ರೇಡಿಯೋ ಲಭ್ಯವಿದ್ದಲ್ಲಿ ಎಫ್ಎಂ ಮೂಲಕ ಪ್ರಸಾರವಾಗುವ ರೇಡಿಯೋ ಪಾಠಗಳನ್ನು ಕೇಳಬಹುದು.

ದೂರದರ್ಶನ  ಪಾಠಕ್ರಮ ವಿವರ : ದೂರದರ್ಶನ ಪಾಠ ಕ್ರಮ ಈ ರೀತಿ ಇರಲಿದೆ. 1,2, 3ನೇ ತರಗತಿ ಮಕ್ಕಳಿಗೆ ರವಿವಾರ 1.30ರಿಂದ 12, 1.30ರಿಂದ 2 ರ ತನಕ ನಲಿಕಲಿ ತರಗತಿ ನಡೆಯಲಿದೆ. 4ನೇ ತರಗತಿ ಮಕ್ಕಳಿಗೆ ಶನಿವಾರ 10ರಿಂದ 10.30 ಹಾಗೂ 10.30ರಿಂದ 11ರ ತನಕ, ರವಿವಾರ 10ರಿಂದ 10.30, 10.30ರಿಂದ 11ರ ತನಕ ಕನ್ನಡ, ಪರಿಸರ ಅಧ್ಯಯನ, ಗಣಿತ ತರಗತಿಗಳು ನಡೆಯಲಿವೆ. 5ನೇ ತರಗತಿ ಮಕ್ಕಳಿಗೆ ಶನಿವಾರ 9ರಿಂದ 9.30, 9.30ರಿಂದ 10, ರವಿವಾರ 9ರಿಂದ 9.30, 9.30ರಿಂದ 10ರ ತನಕ ಕನ್ನಡ, ಗಣಿತ, ಪರಿಸರ ಅಧ್ಯಯನ ತರಗತಿಗಳು ನಡೆಯಲಿವೆ. 6ನೇ ತರಗತಿ ಮಕ್ಕಳಿಗೆ ಗುರುವಾರ 10.30ರಿಂದ 11, 11.30ರಿಂದ 12, 1.30ರಿಂದ 2ರ ತನಕ ಕನ್ನಡ, ಇಂಗ್ಲಿಷ್‌, ಗಣಿತ, ಹಿಂದಿ, ವಿಜ್ಞಾನ, ಸಮಾಜ ವಿಷಯಗಳ ಕುರಿತು ತರಗತಿ ನಡೆಯಲಿವೆ. 7ನೇ ತರಗತಿಗೆ ಗುರುವಾರ 9ರಿಂದ 9.30, 9.30ರಿಂದ 10.00, 10ರಿಂದ 10.30 ರ ತನಕ ಹಾಗೂ ಶುಕ್ರವಾರ 9ರಿಂದ 9.30, 9.30ರಿಂದ 10,  10ರಿಂದ 10.30ರ ತನಕ ಇಂಗ್ಲಿಷ್‌, ಗಣಿತ, ಕನ್ನಡ, ವಿಜ್ಞಾನ, ಸಮಾಜ, ಹಿಂದಿ ವಿಷಯಗಳ ತರಗತಿಗಳು ನಡೆಯಲಿವೆ.

ಸರಕಾರದಿಂದ ಸುತ್ತೋಲೆ ಬಂದ ತತ್‌ಕ್ಷಣದಿಂದಲೇ ತಯಾರಿ ಆರಂಭಿಸಿದ್ದೇವೆ. ಈ ಬಗ್ಗೆ ಎಲ್ಲ ಶಾಲೆಗಳಿಗೂ ಸೂಚನೆ ನೀಡಿ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲು ಶಿಕ್ಷಕರಿಗೆ ಸೂಚಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರು ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಅವರಿಗೆ ಅಗತ್ಯವಿರುವ ಸಲಹೆ-ಸೂಚನೆಗಳನ್ನು ನೀಡಲಾಗುತ್ತಿದೆ.ಎನ್‌.ಎಚ್‌. ನಾಗೂರ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next