Advertisement
ಪಿಸಿಬಿಯ ಸಂವಿಧಾನದಂತೆ ಚೇರ್ಮನ್ ಅವರನ್ನು ಬೋರ್ಡ್ ಆಫ್ ಗವರ್ನರ್ನ ಸದಸ್ಯರು ಆಯ್ಕೆ ಮಾಡಬೇಕಾಗಿದೆ. ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರು ಸೇಥಿ ಅವರನ್ನು ಬೋರ್ಡ್ ಆಫ್ ಗವರ್ನರ್ಗೆ ನೇಮಕ ಮಾಡಿದ್ದರಿಂದ ಚೇರ್ಮನ್ ಹುದ್ದೆಗೇರಲು ಅವರಿಗೆ ಸುಲಭವಾಯಿತು.ಸೇಥಿ ಈ ಹಿಂದೆ ಪಿಸಿಬಿಯ ಪ್ರಭಾರ ಚೇರ್ಮನ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಝಾಕ ಅಶ್ರಫ್ ಅವರ ಅನುಪಸ್ಥಿತಿ ವೇಳೆ ಪಿಸಿಬಿಯ ವ್ಯವಹಾರಗಳನ್ನು ನೋಡಿಕೊಳ್ಳಲು ಮಧ್ಯಾಂತರ ಚೇರ್ಮನ್ ಒಬ್ಬರನ್ನು ನೇಮಕ ಮಾಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ 2014ರಲ್ಲಿ ಪ್ರಧಾನಿ ಶರೀಫ್ ಅವರು ಸೇಥಿ ಅವರನ್ನು ಪ್ರಭಾರ ಚೇರ್ಮನ್ ಆಗಿ ನೇಮಕ ಮಾಡಿದ್ದರು. ಝಾಕ ಆಶ್ರಫ್ ತನ್ನ ಮೇಲಿನ ಹಗರಣ ಆರೋಪದಿಂದ ಮುಕ್ತರಾದ ಬಳಿಕ ಸೇಥಿ ತನ್ನ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು.