Advertisement

ನ್ಯಾಶನಲ್‌ ಹೆರಾಲ್ಡ್‌ ಐಟಿ ತನಿಖೆ: ಸೋನಿಯಾ, ರಾಹುಲ್‌ಗೆ ಹಿನ್ನಡೆ

04:24 PM May 12, 2017 | udayavani editorial |

ಹೊಸದಿಲ್ಲಿ : ನ್ಯಾಶನಲ್‌ ಹೆರಾಲ್ಡ್‌ ಕೇಸಿಗೆ ಸಂಬಂಧಪಟ್ಟು ಐಟಿ ತನಿಖೆ ನಡೆಸುವುದಕ್ಕೆ ದಿಲ್ಲಿ ಹೈಕೋರ್ಟ್‌ ಅನುಮತಿ ನೀಡಿದೆ. ಇದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆಕೆಯ ಮಗ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. 

Advertisement

ನ್ಯಾಶನಲ್‌ ಹೆರಾಲ್ಡ್‌ ಕಂಪೆನಿಯಲ್ಲಿ ಸೋನಿಯಾ ಮತ್ತು ರಾಹುಲ್‌ ಗಾಂಧಿಗೆ ಆರ್ಥಿಕ ಹಿತಾಸಕ್ತಿ ಇರುವುದರಿಂದ ಆ ಬಗ್ಗೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ತನಿಖೆ ನಡೆಸಬೇಕು ಎಂದು ದಿಲ್ಲಿ ಹೈಕೋರ್ಟ್‌ ಇಂದು ತನ್ನ ಆದೇಶದಲ್ಲಿ ಹೇಳಿತು. 

ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಸಂಸ್ಥೆಯು ಕಾಂಗ್ರೆಸ್‌ಗೆ ಕೊಡಬೇಕಿದ್ದ 90.25 ಕೋಟಿ ರೂ. ವಸೂಲಾತಿಯ ಹಕ್ಕನ್ನು ಯಂಗ್‌ ಇಂಡಿಯನ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಸಂಸ್ಥೆಗೆ ನೀಡುವುದಕ್ಕೆ ಅದಕೆ 50 ಲಕ್ಷ ರೂ. ಕೊಡುವ ಮೂಲಕ “ವಂಚನೆ ಹಾಗೂ ಹಣ ದುರುಪಯೋಗ’ ಮಾಡಿರುವುದಾಗಿ ಸೋನಿಯಾ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಆಪಾದಿಸಲಾಗಿತ್ತು. 

ನ್ಯಾಶನಲ್‌ ಹೆರಾಲ್ಡ್‌ ಕೇಸಿನಲ್ಲಿ ಸಾಕ್ಷಿದಾರರಿಗೆ ಸಮನ್ಸ್‌ ನೀಡಬೇಕೆಂಬ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರ ಕೋರಿಕೆಯು ಅಸ್ಪಷ್ಟ ಹಾಗೂ ಅಗತ್ಯ ವಿವರಗಳು ಇಲ್ಲವೆಂದು ಆರೋಪಿಸುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಆಕೆಯ ಪುತ್ರ ರಾಹುಲ್‌ ಗಾಂಧಿ ಅದನ್ನು ಈ ಮೊದಲು ವಿರೋಧಿಸಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next