Advertisement

ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಪಕ್ಷದ ಯಶಸ್ಸಿಗೆ ಆದ್ಯತೆ ನೀಡಿ: ಮಲ್ಲಿಕಾರ್ಜುನ ಖರ್ಗೆ

03:37 PM Sep 17, 2023 | Team Udayavani |

ಹೈದರಾಬಾದ್: ಪಕ್ಷದ ನಾಯಕರು ತಮ್ಮ ಭಿನ್ನಾಭಿಪ್ರಾಯ ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಅವಿರತವಾಗಿ ಶ್ರಮಿಸಬೇಕು. ಪಕ್ಷದ ಯಶಸ್ಸಿಗೆ ಆದ್ಯತೆ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಹೇಳಿದ್ದಾರೆ.

Advertisement

ಹೈದರಾಬಾದ್‌ನಲ್ಲಿ ನಡೆದ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ, ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಪಕ್ಷದ ನಾಯಕರ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ ನೀಡುವುದನ್ನು ತಪ್ಪಿಸಬೇಕು. ಪಕ್ಷವು ಸ್ವಯಂ ಸಂಯಮವನ್ನು ಹೊಂದಬೇಕು ಎಂದು ಖರ್ಗೆ ಹೇಳಿದರು.

ಸಭೆಯಲ್ಲಿ ಮಾತನಾಡಿದ ಖರ್ಗೆ, ಪ್ರಜಾಪ್ರಭುತ್ವವನ್ನು ಉಳಿಸಲು ಪಕ್ಷವು ಒಗ್ಗೂಡಿ ಸರ್ವಾಧಿಕಾರಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು. ಸಂಘಟನಾತ್ಮಕ ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿದ ಅವರು, ಕರ್ನಾಟಕದಲ್ಲಿ ಕಂಡಂತೆ ಶಿಸ್ತಿನ ಮೂಲಕ ಕಾಂಗ್ರೆಸ್ ತನ್ನ ವಿರೋಧಿಗಳನ್ನು ಸೋಲಿಸಬಹುದು ಎಂದರು.

“ಜನರು ಪರ್ಯಾಯಗಳನ್ನು ಹುಡುಕುತ್ತಿದ್ದಾರೆ. ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವುಗಳು ‘ಇದಕ್ಕೆ ಸ್ಪಷ್ಟ ಪುರಾವೆ’” ಎಂದು ಖರ್ಗೆ ಹೇಳಿದರು. ತೆಲಂಗಾಣ ವಿಧಾನಸಭೆ ಚುನಾವಣೆಗೆ ‘ನವ ಶಕ್ತಿಯೊಂದಿಗೆ’ ಮತ್ತು ‘ಸ್ಪಷ್ಟ ಸಂದೇಶ’ ದೊಂದಿಗೆ ಪಕ್ಷವು ಸಂಪೂರ್ಣ ಪ್ರಚಾರವನ್ನು ನಡೆಸಲಿದೆ ಎಂದು ಅವರು ಪ್ರತಿಪಾದಿಸಿದರು.

ಇದನ್ನೂ ಓದಿ:Roopa Rayappa‌: ತುಂಡುಡುಗೆಯ ಫೋಟೋ ಹಂಚಿಕೊಂಡು.. ಟ್ರೋಲ್‌ ಮಾಡ್ಬೇಡಿ ಎಂದ ʼಕೆಜಿಎಫ್‌ʼ ನಟಿ

Advertisement

ನಮ್ಮ ಮುಂದಿರುವ ಸವಾಲುಗಳ ಬಗ್ಗೆ ನಮಗೆಲ್ಲರಿಗೂ ಅರಿವಿದೆ. ಈ ಸವಾಲುಗಳು ಕೇವಲ ಕಾಂಗ್ರೆಸ್ ಪಕ್ಷದವರದ್ದಲ್ಲ. ಅವು ಭಾರತೀಯ ಪ್ರಜಾಪ್ರಭುತ್ವದ ಉಳಿವು ಮತ್ತು ಭಾರತದ ಸಂವಿಧಾನದ ಸಂರಕ್ಷಣೆಗೆ ಸಂಬಂಧಿಸಿವೆ. ಪಕ್ಷಕ್ಕೆ ಇದು ವಿಶ್ರಾಂತಿಯ ಸಮಯವಲ್ಲ ಎಂದು ಖರ್ಗೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳೆದ 10 ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸವಾಲುಗಳು ಬಹುಮಟ್ಟಿಗೆ ಹೆಚ್ಚಿವೆ. ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ನಿರಾಕರಿಸಿದ್ದಾರೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next