Advertisement

ಖಾನ್‌ಗೆ ಪ್ರಧಾನಿ ಪಟ್ಟ ಮತ್ತಷ್ಟು ತಡ

09:00 AM Aug 08, 2018 | Karthik A |

ಇಸ್ಲಾಮಾಬಾದ್‌: ಚುನಾವಣೆಯಲ್ಲಿ ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಜಯ ಸಾಧಿಸಿದ್ದ ಇಸ್ಲಾಮಾಬಾದ್‌ ಹಾಗೂ ಲಾಹೋರ್‌ ಕ್ಷೇತ್ರಗಳ ‘ಚುನಾಯಿತ ಅಭ್ಯರ್ಥಿಯ ಘೋಷಣೆ’ಯನ್ನು ಪಾಕಿಸ್ಥಾನ ಚುನಾವಣಾ ಆಯೋಗ ತಡೆಹಿಡಿದಿದೆ. ಚುನಾವಣೆ ವೇಳೆ, ಖಾನ್‌ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಖಾನ್‌ ಅವರು, ಇಸ್ಲಾಮಾಬಾದ್‌, ಲಾಹೋರ್‌ ಸೇರಿದಂತೆ ಬನ್ನು, ಮಿಯಾನ್‌ ವಾಲಿ, ಕರಾಚಿ ಪೂರ್ವ ಕ್ಷೇತ್ರಗಳಲ್ಲೂ ನಿಂತು ಜಯ ಸಾಧಿಸಿದ್ದರು.

Advertisement

ಏತನ್ಮಧ್ಯೆ, ಈ ಹಿಂದೆ ಖೈಬರ್‌ ಪ್ರಾಂತ್ಯದಲ್ಲಿ ಆಡಳಿತಾಧಿಕಾರಿಯಾಗಿದ್ದಾಗ ಸರಕಾರಿ ಕಾಪ್ಟರ್‌ ಗಳನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡಿದ್ದ ಪ್ರಕರಣಕ್ಕಾಗಿ ಪಾಕಿಸ್ಥಾನ ಬಾಧ್ಯತಾ ಸಂಸ್ಥೆ, ಖಾನ್‌ ಅವರನ್ನು ವಿಚಾರಣೆಗೊಳಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next