Advertisement
700 ಮನೆಗಳಿಂದ ಸಂಗ್ರಹಪುತ್ತೂರು ನಗರಸಭೆಯಲ್ಲಿ ಸದ್ಯ 14 ಪೌರಕಾರ್ಮಿಕರಿದ್ದಾರೆ. ಎರಡು 407 ವಾಹನಕ್ಕೆ ತಲಾ ಇಬ್ಬರಂತೆ ಹಾಗೂ ಐದು ಪಿಕಪ್ ವಾಹನಗಳಿಗೆ 10 ಮಂದಿಯನ್ನು ಹಂಚಿ ಹಾಕಲಾಗಿದೆ. ಚಾಲಕ ಹೊರತು ಪಡಿಸಿ ಒಂದು ವಾಹನದಲ್ಲಿ 2 ಕಾರ್ಮಿಕರು ತೆರಳಬೇಕು. ಸರಕಾರದ ಆದೇಶ ಪ್ರಕಾರ ದಿನಕ್ಕೆ 1,800 ಮನೆ ಅಥವಾ ಅಂಗಡಿ ಬಾಗಿಲುಗಳಿಂದ ತ್ಯಾಜ್ಯ ಸಂಗ್ರಹ ಮಾಡಬೇಕು. ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಮಾತು. ದಿನಕ್ಕೆ ಹೆಚ್ಚೆಂದರೆ 700ರಷ್ಟು ಮನೆಗಳಿಂದ ತ್ಯಾಜ್ಯ ಸಂಗ್ರಹವಷ್ಟೇ ಸಾಧ್ಯ ಎನ್ನುತ್ತಾರೆ ಪೌರಕಾರ್ಮಿಕರು.
ತ್ಯಾಜ್ಯ ಸಂಗ್ರಹದ ಹಣವನ್ನು ಈ ಮೊದಲು ಪ್ರತ್ಯೇಕವಾಗಿ ಸಂಗ್ರಹ ಮಾಡಲಾಗುತ್ತಿತ್ತು. ಕೆಲವು ಮನೆ, ಅಂಗಡಿಗಳ ಮಂದಿ ಶುಲ್ಕ ನೀಡಲು ಹಿಂದೇಟು ಹಾಕುತ್ತಿದ್ದರು. ಇದು ವ್ಯವಸ್ಥೆಗೆ ಪೆಟ್ಟು ನೀಡಿತು. ಆದ್ದರಿಂದ ಇದೀಗ ತೆರಿಗೆಯ ಜತೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. 500 ಚದರ ಅಡಿಯ ಮನೆಗೆ ವಾರ್ಷಿಕ 180 ರೂ., 1,000 ಚ.ಅ. ಮನೆಗೆ 360 ರೂ., 1,000-1,500 ಚ.ಅ. ಮನೆಗೆ 540 ರೂ., 2,000 ವರೆಗಿನ ಚ.ಅ. ಮನೆಗೆ 720 ರೂ., 2,000 ಚ.ಅ.ಗಿಂತ ಹೆಚ್ಚಿನ ಮನೆಗಳಿಗೆ 900 ರೂ. ಸಂಗ್ರಹ ಮಾಡಲಾಗುತ್ತಿದೆ. ವಾಣಿಜ್ಯ ಅಂಗಡಿಗಳಿಗೆ ಬೇರೆಯೇ ಮಾನದಂಡದಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ತಿಂಗಳಿಗೆ ಟ್ರೇಡ್ ಲೈಸನ್ಸ್‌ನ ಶೇ. 10ರಷ್ಟು ಮೊತ್ತು. ಅಂದರೆ 1 ಸಾವಿರ ರೂ. ಟ್ರೇಡ್ ಲೈಸನ್ಸ್‌ಗೆ ಪಾವತಿ ಮಾಡುತ್ತಿದ್ದರೆ, ತಿಂಗಳಿಗೆ 100 ರೂ. ವಾರ್ಷಿಕ 1,200 ರೂ. ಪಾವತಿ ಮಾಡಬೇಕು.
Related Articles
ಒಂದು ತಿಂಗಳಿನಿಂದ ತ್ಯಾಜ್ಯ ಸಂಗ್ರಹದ ಸಮಸ್ಯೆ ಕೈಮೀರಿ ಹೋಗಿದೆ. ನಗರಸಭೆ ಮೂಲಗಳ ಪ್ರಕಾರ 25 ವಾರ್ಡ್‌ಗಳಿಂದ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಆದರೆ ಪೇಟೆಯ ಪರಿಸ್ಥಿತಿ ನೋಡಿದರೆ, 10 ದಿನಗಳಿಂದ ತ್ಯಾಜ್ಯ ಸಂಗ್ರಹ ಆದಂತೆ ಕಾಣುತ್ತಿಲ್ಲ. ಶುಕ್ರವಾರ ಪುತ್ತೂರು ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಪಿಕಪ್ ವಾಹನದ ಮೇಲೆ ವಿಪರೀತ ತ್ಯಾಜ್ಯ ಹೇರಲಾಗಿತ್ತು. ಇಷ್ಟಿದ್ದರೂ, ಕೆಲ ಅಂಗಡಿಗಳ ಮಂದಿ ಹೊರಗೆ ಬಂದು, ತ್ಯಾಜ್ಯ ಕೊಂಡೊಯ್ಯುವಂತೆ ದುಂಬಾಲು ಬೀಳುತ್ತಿದ್ದ ದೃಶ್ಯ ಕಂಡುಬಂತು.
Advertisement
ಕಸ ನೀಡದವರಿಗೆ ನೋಟಿಸ್ತ್ಯಾಜ್ಯ ಸಂಗ್ರಹ ದೊಡ್ಡ ಸಮಸ್ಯೆ ಆಗುತ್ತಿದ್ದರಿಂದ ಶುಕ್ರವಾರ ಬೆಳಗ್ಗೆ ತ್ಯಾಜ್ಯ ಸಂಗ್ರಹ ಮಾಡುವವರ ಜತೆಗೆ ಹೋಗಿದ್ದೆ. ಕೂರ್ನಡ್ಕದ ಒಂದು ಮನೆಯವರು ತ್ಯಾಜ್ಯ ನೀಡುತ್ತಿರಲಿಲ್ಲ. ವಿಚಾರಿಸಿದಾಗ ಹಸಿ ಕಸವನ್ನು ಗಿಡದ ಬುಡಕ್ಕೆ ಹಾಕುತ್ತಿದ್ದರಂತೆ. ಪ್ಲಾಸ್ಟಿಕ್ ಮೊದಲಾದ ಒಣ ಕಸವನ್ನು ಉರಿಸುತ್ತಾರಂತೆ. ಇದರ ದುಷ್ಪರಿಣಾಮದ ಬಗ್ಗೆ ತಿಳಿಸಿದರೂ ತ್ಯಾಜ್ಯ ನೀಡಲು ಒಪ್ಪಿಕೊಂಡಿಲ್ಲ. ಇವರಿಗೆ ನಗರಸಭೆಯಿಂದ ನೋಟಿಸ್ ನೀಡಲಾಗುವುದು. ಎಲ್ಲ ಮನೆ, ಅಂಗಡಿಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹವಾದರೆ, ತ್ಯಾಜ್ಯ ವಿಲೇವಾರಿ ನಗರಸಭೆಗೆ ಹೊರೆ ಆಗದು. ಇದರ ಜತೆಗೆ ಪೌರಕಾರ್ಮಿಕರು ಅಗತ್ಯದಷ್ಟು ಬೇಕು.
– ಶ್ವೇತಾ ಕಿರಣ್, ಆರೋಗ್ಯ ನಿರೀಕ್ಷಕಿ, ಪುತ್ತೂರು ನಗರಸಭೆ ಹಿಂದಿನ ತಂಡ ಬಳಕೆ
ಹಿಂದಿನ ಸ್ವಸಹಾಯ ತಂಡದಲ್ಲಿ ಕೆಲಸ ಮಾಡುತ್ತಿದ್ದ ಸೀತಾ, ಸರಸ್ವತಿ, ಅಣ್ಣಪ್ಪ ಅವರನ್ನು ತ್ಯಾಜ್ಯ ಸಂಗ್ರಹಕ್ಕೆ ಬಳಕೆ ಮಾಡಲು ನಗರಸಭೆ ಮುಂದಾಗಿದೆ. ಹೆಚ್ಚು ಕಡಿಮೆ ತ್ಯಾಜ್ಯ ಸಂಗ್ರಹದ ಮಾಹಿತಿ ಇರುವುದರಿಂದ, ಹೊಸ ತಂಡಕ್ಕೂ ಸುಲಭವಾಗಲಿದೆ ಎನ್ನುವುದು ಚಿಂತನೆ. ಈ ಮೂವರಿಗೆ ಒಂದೊಂದು ರಸ್ತೆಗಳನ್ನು ನೀಡಲಾಗಿದೆ. — ಗಣೇಶ್ ಎನ್. ಕಲ್ಲರ್ಪೆ