Advertisement

Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ “ಕೈ’ ಹಾಕಲಿದೆಯೇ?

02:57 AM Dec 24, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ “ಕೈ’ ಹಾಕಲಿದೆಯೇ? ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್‌ ಹೀಗೊಂದು ಸುಳಿವು ನೀಡಿದ್ದಾರೆ.

Advertisement

ವಿಧಾನಸಭಾ ಉಪಚುನಾವಣೆಯ ಅನಂತರ ಕಾಂಗ್ರೆಸ್‌ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಇಂಬು ಪಡೆದುಕೊಂಡಿದೆ. ಹೊಸ ವರ್ಷಕ್ಕೆ ಹೊಸ ಅಧ್ಯಕ್ಷರ ಆಯ್ಕೆ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಅದಕ್ಕೆ ಪುಷ್ಟಿ ನೀಡುವಂತೆ ಸಚಿವ ಎಂ.ಬಿ. ಪಾಟೀಲ್‌, ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಅನಂತರ ಈ ನಿಟ್ಟಿನಲ್ಲಿ ಹೈಕಮಾಂಡ್‌ ಕೈಹಾಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದೆಲ್ಲವೂ ಹೈಕಮಾಂಡ್‌ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಸ್ಪಷ್ಟಪಡಿಸಿದರು. ಸಿಎಂ ಮತ್ತು ಡಿಸಿಎಂ ಬಣಗಳ ನಡುವೆ ಈ ಸಂಬಂಧ ಪೈಪೋಟಿ ನಡೆದಿರುವ ಮಧ್ಯೆಯೇ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಖಾತೆ ಬದಲಾವಣೆ ಬಗ್ಗೆ ಏನೂ ಹೇಳಲ್ಲ: ಎಂ.ಬಿ.ಪಾಟೀಲ್‌
ಸರ್ಕಾರದಲ್ಲಿ ಸಂಪುಟ ಪುನಾರಚನೆ ಬಗ್ಗೆ ಪಕ್ಷದ ಹೈಕಮಾಂಡ್‌ ಮತ್ತು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಲಿದ್ದಾರೆ. ಈಗ ಕೈಗಾರಿಕೆ ಖಾತೆಯನ್ನು ನಿರ್ವಹಿಸುತ್ತಿದ್ದೇನೆ. ಖಾತೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ಸಂಪುಟ ಪುನಾರಚನೆ ಆಗಲಿದೆಯೇ? ಪುನಾರಚಿಸಿದರೆ ಖಾತೆಯ ಬೇಡಿಕೆ ಏನಾದರೂ ಇಡುತ್ತೀರಾ ಎಂಬುದಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಂ.ಬಿ.ಪಾಟೀಲ್‌, ಈ ಹಿಂದೆ ನನಗೆ ಜಲಸಂಪನ್ಮೂಲ ಖಾತೆ ಕೊಟ್ಟಿದ್ದರು. ಎಚ್‌.ಕೆ.ಪಾಟೀಲ್‌, ಬಿಜೆಪಿ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಕೂಡ ಈ ಖಾತೆಯನ್ನು ನಿರ್ವಹಿಸಿದ್ದರು. ಖಾತೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಫೇಕ್‌ ಎನ್‌ಕೌಂಟರ್‌ ವಿಪಕ್ಷದವರ ಸೃಷ್ಟಿ
ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಫೇಕ್‌ ಎನ್‌ಕೌಂಟರ್‌ ಆರೋಪ ಮಾಡಿರುವ ಕುರಿತು ಗಮನ ಸೆಳೆದಾಗ, ಪ್ರತಿಪಕ್ಷದ ಸದಸ್ಯರು ಮೆಲ್ಮನೆಯಲ್ಲಿ ಬಳಸಿದ ಪದಕ್ಕೆ ಪ್ರತಿಯಾಗಿ ಇದನ್ನು ಸೃಷ್ಟಿಮಾಡಿದ್ದಾರೆ. ಸಿ.ಟಿ. ರವಿ ಅವರು ಬಹಿರಂಗ ಕ್ಷಮೆ ಕೇಳಿದರೆ ಎಲ್ಲವೂ ಮುಗಿಯುತ್ತದೆ ಎಂದು ಎಂ.ಬಿ. ಪಾಟೀಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next