Advertisement
ಮಂಗಳೂರಿನಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸುವುದು ಚ್ಯಾಲೆಂಜಿಂಗ್ ಜಾಬ್ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
Related Articles
ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರ ಜತೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆ ಸಜ್ಜನಿಕೆಯ ಜನರ ಊರಾಗಿದ್ದು, ಇಲ್ಲಿನವರು ಕಾನೂನಿಗೆ ವಿಶೇಷ ಗೌರವ ನೀಡುತ್ತಾರೆ. ಆದರೆ ಕಾನೂನು ಸುವ್ಯ ವಸ್ಥೆಯ ಜತೆಗೆ ಸೌಹಾರ್ದದ ವಾತಾವರಣ ಕಾಪಾಡಲು ವಿಶೇಷ ಕಾಳಜಿ ವಹಿಸ ಬೇಕಾಗಿದೆ. ಹಾಗಾಗಿ ಇದೊಂದು ಸವಾಲಿನ ಕೆಲಸವಾಗಿದೆ ಎಂದು ವಿವರಿಸಿದರು.
Advertisement
ಈ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಠಾಣಾ ಹಂತದಲ್ಲಿ ಮತ್ತಷ್ಟು ಬಲ ಪಡಿ ಸಲು, ಎಲ್ಲ ಹಂತಗಳಲ್ಲಿ ಜನಸ್ನೇಹಿ ಪೊಲೀಸ್ ಆಡಳಿತ ನೀಡಲು ಆದ್ಯತೆ ನೀಡಲಾಗುವುದು. ಇದಕ್ಕೆ ಜನ ಪ್ರತಿ ನಿಧಿಗಳು, ಸಮುದಾಯಗಳ ಮುಖಂಡರು ಮತ್ತು ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದರು.
ನಿಕಟಪೂರ್ವ ಆಯುಕ್ತ ಸಂದೀಪ್ ಪಾಟೀಲ್ ಅವರು ಬೆಟ್ಟಿಂಗ್, ಗೋಹತ್ಯೆ, ಮಾದಕ, ರೌಡಿ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದು ಅದನ್ನು ಹೇಗೆ ಮುಂದುವರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂಘಟಿತ ಅಪರಾಧ ಮಟ್ಟ ಹಾಕುವ ಬಗ್ಗೆ ಈ ಹಿಂದಿನ ಆಯುಕ್ತರ ಮಾದರಿಯಲ್ಲೇ ಸಾಮಾನ್ಯ ಪ್ರಜೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.
ಅಕ್ರಮ ಗೋ ಸಾಗಾಟ ಒಂದು ದೊಡ್ಡ ಸಮಸ್ಯೆ. ಇದು ಭಾವನಾತ್ಮಕ ವಿಷಯವೂ ಆಗಿದೆ. ಜಾನುವಾರು ಅಕ್ರಮ ಸಾಗಾಟ ನಿಯಂತ್ರಿಸುವ ಬಗ್ಗೆ ಕಾಲಕಾಲಕ್ಕೆ ಕಾನೂನು ಚೌಕಟ್ಟಿನಲ್ಲಿ ಪೊಲೀಸ್ ಮಹಾನಿರ್ದೇಶಕರು ಹೊರಡಿಸುವ ಸುತ್ತೋಲೆಗಳ ಆಧಾರದಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಈ ವಿಷಯದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿ ಆಗದಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ ಜತೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ವಿ.ಜಿ. ಸಾವು ಪ್ರಕರಣಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ| ಹರ್ಷ ಅವರು, ಈಗಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಈ ಪ್ರಕರಣದ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ನಡೆಸಿ ತನಿಖೆಯ ಪ್ರಗತಿಯ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.
ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್ ಉಪಸ್ಥಿತರಿದ್ದರು. ಪತ್ರಿಕಾಗೋಷ್ಠಿಯ ಬಳಿಕ ಆಯುಕ್ತರು ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ನಗರದಲ್ಲಿ ಮಾದಕ ದ್ರವ್ಯ ಜಾಲ ಹರಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಬೆಳೆಯುತ್ತಿರುವ ನಗರಗಳಲ್ಲಿ ಈ ರೀತಿಯ ದಂಧೆಗಳು ಸಾಮಾನ್ಯವಾಗಿದೆ. ಡ್ರಗ್ಸ್ ಹಾವಳಿ ನಗರವನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ಇದನ್ನು ಮಟ್ಟಹಾಕುವ ಬಗ್ಗೆ ತಂಡವಾಗಿ ಕಾರ್ಯ ನಿರ್ವಹಿಸಲು ಕಾರ್ಯತಂತ್ರ ರೂಪಿಸಲಾಗುವುದು. ಈ ಬಗ್ಗೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಹಕಾರ ಪಡೆದು ಡ್ರಗ್ಸ್ ಮೂಲ ಪತ್ತೆಗೆ ಕ್ರಮ ಕೈಗೊಂಡು ಈ ಪಿಡುಗಿಗೆ ತಾರ್ಕಿಕ ಅಂತ್ಯ ಹಾಡಲು ಪ್ರಯತ್ನಿಸಲಾಗುವುದು ಎಂದು ಡಾ| ಹರ್ಷ ಪಿ.ಎಸ್. ಹೇಳಿದರು.
ಕಾರ್ಯತಂತ್ರ ರೂಪಿಸಲಾಗುವುದುನಗರದಲ್ಲಿ ಮಾದಕ ದ್ರವ್ಯ ಜಾಲ ಹರಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಬೆಳೆಯುತ್ತಿರುವ ನಗರಗಳಲ್ಲಿ ಈ ರೀತಿಯ ದಂಧೆಗಳು ಸಾಮಾನ್ಯವಾಗಿದೆ. ಡ್ರಗ್ಸ್ ಹಾವಳಿ ನಗರವನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ಇದನ್ನು ಮಟ್ಟಹಾಕುವ ಬಗ್ಗೆ ತಂಡವಾಗಿ ಕಾರ್ಯ ನಿರ್ವಹಿಸಲು ಕಾರ್ಯತಂತ್ರ ರೂಪಿಸಲಾಗುವುದು. ಈ ಬಗ್ಗೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಹಕಾರ ಪಡೆದು ಡ್ರಗ್ಸ್ ಮೂಲ ಪತ್ತೆಗೆ ಕ್ರಮ ಕೈಗೊಂಡು ಈ ಪಿಡುಗಿಗೆ ತಾರ್ಕಿಕ ಅಂತ್ಯ ಹಾಡಲು ಪ್ರಯತ್ನಿಸಲಾಗುವುದು ಎಂದು ಡಾ| ಹರ್ಷ ಪಿ.ಎಸ್. ಹೇಳಿದರು.