Advertisement

ಪ್ರತಿಭಾವಂತರ ಸೇವೆ ಊರಿಗೆೆ ಅಗತ್ಯ: ವಂ|ಅನಿಲ್‌ ಡಿ’ಸೋಜಾ

04:47 PM Feb 22, 2017 | |

ಕುಂದಾಪುರ:  ಕೆ‌ಥೊಲಿಕ್‌ ಸಭಾ ಉಡುಪಿ ಪ್ರದೇಶ ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್‌ ಪ್ರತಿಷ್ಠಾನ ಇವರ ಆಶ್ರಯದಲ್ಲಿ ಪ್ರತಿಭಾವಂತ ಮತ್ತು ವಿಶೇಷವಾಗಿ ಸಾಧನೆ ಮಾಡಿದವರನ್ನು ಸಮ್ಮಾನಿಸುವ ಪ್ರತಿಭಾ ಸಂಜೆ ಕಾರ್ಯಕ್ರಮ ಸಂತ ಮೇರಿಸ್‌ ಪಿ. ಯು. ಕಾಲೇಜಿನ ಸಭಾಂಗಣದಲ್ಲಿ ಜರಗಿತು.

Advertisement

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋನ್‌ ಡಿ’ಸೋಜಾ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೈಟ್‌ ಲಿಪ್ಟಿಂಗ್‌ (ಪವರ್‌ ಲಿಪ್ಟಿಂಗ್‌) ಪಟು ಮತ್ತು ಬಿ.ಬಿ.ಎಂ. ಪದವಿಯಲ್ಲಿ ರ್‍ಯಾಂಕ್‌ ಬಂದ ಒಷಿನ್‌ ಡಿ’ಸೋಜಾ ಇವರನ್ನು ವಲಯ ಪ್ರಧಾನ ರೋಜರಿ ಮಾತೆಯ ಧರ್ಮಗುರು ವ| ಅನಿಲ್‌ ಡಿ’ಸೋಜಾ ಅವರು  ಸಮ್ಮಾನಿಸಿದರು.

ಅನಂತರ ಮಾತನಾಡಿದ ಅವರು,  ನಾವು ಸಮ್ಮಾನಿಸುವ ಪ್ರತಿಭಾವಂತ ಮಕ್ಕಳು, ಮುಂದೆ ನಮ್ಮ ಊರಿನಲ್ಲಿ ಕಾಣಸಿಗದಂತಾಗಬಾರದು. ಇಂತಹ ಪ್ರತಿಭಾವಂತರ ಸೇವೆ ನಮ್ಮ ಊರುಗಳಿಗೆ ಬೇಕಾಗಿವೆ ಎಂದರು.

ವಿಜೇತರಿಗೆ ಬಹುಮಾನ
ಈ ಸಂದರ್ಭದಲ್ಲಿ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ಕೆಥೊಲಿಕ್‌ ಸಭಾ ಉಡುಪಿ ಕೇಂದ್ರ ಸಮಿತಿಯ ಅಧ್ಯಕ್ಷ ವೆಲೇರಿಯನ್‌ ಫೆರ್ನಾಂಡಿಸ್‌ ಹಂಚಿ ಶುಭ ಹಾರೈಸಿದರು.
 
ನಾಡಿನ ಸೇವೆ ಮಾಡಿ
ವಲಯ ಮಟ್ಟದಲ್ಲಿ ಕಲಿಕೆಯಲ್ಲಿ ಸಾಧನೆ ಮಾಡಿದ ಮಕ್ಕಳನ್ನು  ಮುಖ್ಯ ಅತಿಥಿ ರೋಜರಿ ಕ್ರೆಡಿಟ್‌ ಕೋ-ಸೊಸೈಟಿಯ ಅಧ್ಯಕ್ಷ ಜಾನ್ಸನ್‌ ಡಿ’ಆಲ್ಮೇಡಾ ಸಮ್ಮಾನಿಸಿ, ಮಕ್ಕಳು ಸರಕಾರದ ಉದ್ಯೋಗಗಳನ್ನು ಪಡೆದುಕೊಂಡು ನಾಡಿನ ಸೇವೆ ಮಾಡಬೇಕೆಂದರು. 

ಶೆವೊಟ್‌ ಪ್ರತಿಷ್ಠಾನ್‌ ಇದರ ಅಧ್ಯಕ್ಷ ಅಲ್ವಿನ್‌ ಕ್ವಾಡರ್ಸ್‌ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆಥೊಲಿಕ್‌ ಸಭಾ ವಲಯ ಸಮಿತಿಯ ಅಧ್ಯಕ್ಷ ವಿಜೇತರನ್ನು ಶುಭ ಹಾರೈಸಿದರು ಕಾರ್ಯಕ್ರಮದ ಸಂಚಾಲಕ ಜೇಕಬ್‌ ಡಿ’ಸೋಜಾ ಸ್ವಾಗತಿಸಿ, ಕಾರ್ಯಕ್ರಮವನ್ನು ವಿನಯ್‌ ಡಿ’ಆಲ್ಮೇಡಾ, ವಿನೋದ್‌ ಕ್ರಾಸ್ಟೊ, ಮೇಬಲ್‌ ಡಿ’ಸೋಜಾ ಪ್ರಸಿಲ್ಲಾ ಮಿನೇಜಸ್‌ ನೆಡೆಸಿಕೊಟ್ಟರು. ಕಾರ್ಯದರ್ಶಿ ಶೈಲಾ ಡಿ’ಆಲ್ಮೇಡಾ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next