Advertisement
ಸೇವಾ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರು ಫೆ. 6ರಂದು ನೋಟಿಸ್ ಜಾರಿ ಮಾಡಿದ್ದಾರೆ. ಫೆ. 16ರೊಳಗೆ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಅಥವಾ ಅಧಿಕೃತ ವ್ಯಕ್ತಿಯನ್ನು ಕಳುಹಿಸಿಕೊಡಬೇಕು, ವಿಚಾ ರಣೆಗೆ ಹಾಜರಾಗದಿದ್ದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಬೇಕಾ ಗುತ್ತದೆ ಎಂದು ಇಲಾಖೆ ತಿಳಿಸಿದೆ.
“1994ರ ಹಣಕಾಸು ಕಾಯಿದೆಗಳ ನಿಬಂಧನೆಗಳನ್ನು ಮುರಿದು ನಡೆದುಕೊಂಡಿದ್ದೀರಿ. ಇದುವರೆಗೆ ನೀವು ಸೇವಾ ತೆರಿಗೆಯನ್ನು ಪಾವ ತಿಸಿಲ್ಲ. ಹೀಗಾಗಿ ಮೇಲ್ಕಾಣಿಸಿದ ನಿಯಮದ ಪ್ರಕಾರ ತನಿಖೆಗೆ ಖುದ್ದಾಗಿ ಹಾಜರಾಗಬೇಕಿದೆ.
ಸಂಬಂಧಿತ ದಾಖಲೆಗಳಿಂದ ನೀವು ತೆರಿಗೆ ವಂಚಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹೀಗಾಗಿ ತುರ್ತಾಗಿ ವಿಚಾರಣೆ ನಡೆಸಬೇಕಿದೆ. ಕೇಂದ್ರೀಯ ಅಬಕಾರಿ ಕಾಯಿದೆಯ ತೆರಿಗೆ ವಿಚಾರಕ್ಕೆ ಅನ್ವಯವಾಗುವಂತೆ 1994ರ ಹಣಕಾಸು ಕಾಯಿದೆ ಅಡಿಯಲ್ಲಿ ವಿಚಾರಣೆ ನಡೆಯಲಿದೆ. ನೀವು ತೆರಿಗೆ ಪಾವತಿಸಿದ್ದೀರೋ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ಕೆಲವೊಂದು ದಾಖಲೆ ಪತ್ರಗಳನ್ನು ಪರಿಶೀಲಿಸಬೇಕಿದೆ. ಒಂದು ವೇಳೆ ಈ ಸಮನ್ಸ್‌ಗೆ ಉತ್ತರಿಸದಿದ್ದಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಪ್ರಕಾರ ಕಠಿನ ಶಿಕ್ಷೆಗೆ ಒಳಗಾಗಬೇಕಾಗುತ್ತದೆ…’ ಎಂದು ಸಮನ್ಸ್‌ನಲ್ಲಿ ಸಾನಿಯಾಗೆ ಎಚ್ಚರಿಕೆ ನೀಡಲಾಗಿದೆ.