Advertisement
ಕುಂದಾಪುರ – ಬೈಂದೂರು ಹೆದ್ದಾರಿಯ ಅರೆಬರೆ ಕಾಮಗಾರಿಯ ಅವ್ಯವಸ್ಥೆಯು ಸಾರ್ವಜನಿಕರಿಗೆ ನಿತ್ಯ ಮುಗಿಯದ ಗೋಳಾಗಿ ಪರಿಣಮಿ ಸಿದೆ. ಸಂಗಮ್ ಬಳಿಯಿಂದ ಆರಂಭಿಸಿ, ತಲ್ಲೂರು, ಹೆಮ್ಮಾಡಿಯಾಗಿ ಬೈಂದೂರು, ಶಿರೂರುವರೆಗಿನ ಅಧ್ವಾನ ಮಾರಕವಾದಂತಿದೆ.
ಹೆದ್ದಾರಿ ಹಾದು ಹೋಗುವ ನಾವುಂದ ದಲ್ಲಿ ಅಂಡರ್‌ಪಾಸ್ ನಿರ್ಮಿಸಿದ್ದು, ಎರಡೂ ಕಡೆಗಳಲ್ಲಿಯೂ ಸರ್ವಿಸ್ ರಸ್ತೆ ಆಗಿದೆ. ಆದರೆ ಚರಂಡಿ ಕಾಮಗಾರಿ ಮಾತ್ರ ಅರೆಬರೆಯಾಗಿದೆ. ಎರಡೂ ಕಡೆಯ ಸರ್ವಿಸ್ ರಸ್ತೆಗಳಲ್ಲಿಯೂ ಚರಂಡಿ ನಿರ್ಮಿಸಿದ್ದು, ಆದರೆ ಚರಂಡಿಯನ್ನು ಸರಿಯಾಗಿ ಮುಚ್ಚದೇ, 4-5 ಕಡೆಗಳಲ್ಲಿ ಹಾಗೇ ಬಾಕಿ ಬಿಟ್ಟಿದ್ದು, ಇಲ್ಲಿ ರಾತ್ರಿ ವೇಳೆ ತಿಳಿಯದೇ ಬೈಕ್ ಸವಾರರು ಬಿದ್ದ ನಿದರ್ಶನವು ಇದೆ. ಅದರಲ್ಲೂ ಪ್ರಮುಖವಾಗಿ ಅಂಡರ್‌ಪಾಸ್ ಬಳಿಯ ಪೆಟ್ರೋಲ್ ಬಂಕ್ ಬಳಿಯ ಚರಂಡಿ ಮುಚ್ಚದೆ ಇರುವುದು, ಅಪಾಯವನ್ನು ಆಹ್ವಾನಿಸುವಂತಿದೆ. ಇನ್ನು ಉರ್ದು ಶಾಲೆಗೆ ಹೋಗುವಲ್ಲಿಯೂ ಸಹ ಚರಂಡಿ ಮುಚ್ಚದೇ ಅಪಘಾತಕ್ಕೆ ರಹದಾರಿಯಾದಂತಿದೆ. ಮನವಿಗೆ ಸ್ಪಂದನೆಯೇ ಇಲ್ಲ
ಈ ಚರಂಡಿಯನ್ನು ಮುಚ್ಚದೆ ಇರುವ ಬಗ್ಗೆ ನಾವುಂದ ಗ್ರಾಮ ಪಂಚಾಯತ್‌ನಿಂದ ಅನೇಕ ಬಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿಯ ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೆ ಈ ಬಗ್ಗೆ ಯಾರೂ ಸಹ ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನೇ ಮಾಡಿಲ್ಲ. ಸಾರ್ವಜನಿಕರಿಂದಲೂ ಅನೇಕ ಬಾರಿ ಈ ಬಗ್ಗೆ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ.
Related Articles
ನಾವುಂದ ಅಂಡರ್‌ಪಾಸ್ ಬಳಿಯ ಎರಡೂ ಬದಿಯ ಸರ್ವಿಸ್ ರಸ್ತೆಗೆ ತಾಗಿಕೊಂಡಿರುವ ಚರಂಡಿಯನ್ನು ಮುಚ್ಚದೇ ಸಮಸ್ಯೆಯಾಗುತ್ತಿದ್ದು, ಗೊತ್ತಿಲ್ಲದೆ ಬಿದ್ದರೆ ಪ್ರಾಣ ಭೀತಿಯು ಎದುರಾಗಬಹುದು. ಆದ್ದರಿಂದ ಕೂಡಲೇ ತೆರೆದ ಚರಂಡಿಯನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Advertisement
ಅನೇಕ ಬಾರಿ ಮನವಿನಾವು ಗ್ರಾಮ ಪಂಚಾಯತ್ ವತಿಯಿಂದ ಚರಂಡಿ ಮುಚ್ಚದೇ ಬಾಕಿ ಇರುವ ಕಡೆಗಳಲ್ಲ ಮುಚ್ಚುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಇದಲ್ಲದೆ ಪಂಚಾಯತ್ ವ್ಯಾಪ್ತಿಯಲ್ಲಿ ಹೆದ್ದಾರಿಯ ಅನೇಕ ಸಮಸ್ಯೆ ಬಗೆಹರಿಸುವಂತೆಯೂ ಸಂಬಂಧಪಟ್ಟವರಿಗೂ ಗಮನಕ್ಕೆ ತರಲಾಗಿದೆ. ಈಗ ಮತ್ತೆ ಈ ಬಗ್ಗೆ ಪಂಚಾಯತ್‌ನಿಂದ ಮನವಿ ಸಲ್ಲಿಸಲಾಗುವುದು.
-ಜಾನಕಿ ಮೊಗವೀರ, ಅಧ್ಯಕ್ಷರು,
ನಾವುಂದ ಗ್ರಾ.ಪಂ.